Texas Shooting: ಅಮೆರಿಕದ ಟೆಕ್ಸಾಸ್​ನ ಶಾಪಿಂಗ್​ ಮಾಲ್​ನಲ್ಲಿ ಗುಂಡಿನ ದಾಳಿ, 9 ಮಂದಿ ಸಾವು, 7 ಜನರಿಗೆ ಗಾಯ

ಅಮೆರಿಕ(America) ದ ಟೆಕ್ಸಾಸ್​ ನಗರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದೆ, ಮಾಲ್​ನಲ್ಲಿ ಬಂದೂಕುಧಾರಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ್ದಾನೆ.

Texas Shooting: ಅಮೆರಿಕದ ಟೆಕ್ಸಾಸ್​ನ ಶಾಪಿಂಗ್​ ಮಾಲ್​ನಲ್ಲಿ ಗುಂಡಿನ ದಾಳಿ, 9 ಮಂದಿ ಸಾವು, 7 ಜನರಿಗೆ ಗಾಯ
ಟೆಕ್ಸಾಸ್

Updated on: May 07, 2023 | 8:36 AM

ಅಮೆರಿಕ(America) ದ ಟೆಕ್ಸಾಸ್​ ನಗರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದೆ, ಮಾಲ್​ನಲ್ಲಿ ಬಂದೂಕುಧಾರಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ್ದಾನೆ. ಪೊಲೀಸರ ಪ್ರಕಾರ ಘಟನೆಯಲ್ಲಿ 9 ಮಂದಿ  ಮೃತಪಟ್ಟಿದ್ದು, 7 ಜನರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ, ಗನ್​ಮೆನ್​ ಕೂಡ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಓರ್ವ ಶಂಕಿತ ದಾಳಿಕೋರ ಮೃತಪಟ್ಟಿದ್ದು, ಮತ್ತೊಬ್ಬನಿಗಾಗಿ ಶೋಧ ನಡೆಯುತ್ತಿದೆ. ಮಕ್ಕಳು ಸೇರಿದಂತೆ 7 ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡವರ ಸ್ಥಿತಿ ಹೇಗಿದೆ ಎನ್ನುವ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ. ದಾಳಿಕೋರನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ದಾಳಿಕೋರನು ಗುಂಡು ಹಾರಿಸಿದ ನಂತರ ಸ್ವತಃ ಗುಂಡು ಹಾರಿಸಿಕೊಂಡಿದ್ದಾನೆಯೇ ಅಥವಾ ಪೊಲೀಸರ ಪ್ರತೀಕಾರದ ಕ್ರಮದಲ್ಲಿ ಸಾವನ್ನಪ್ಪಿದ್ದಾನೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಮತ್ತಷ್ಟು ಓದಿ: Texas Shooting: ಅಮೆರಿಕದ ಟೆಕ್ಸಾಸ್​ನಲ್ಲಿ ಗುಂಡಿನ ದಾಳಿ, 8 ವರ್ಷದ ಬಾಲಕ ಸೇರಿ ಐವರು ಸಾವು

ಆಂಬ್ಯುಲೆನ್ಸ್‌ನಲ್ಲಿ ಹಲವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ಟೆಕ್ಸಾಸ್‌ನ ಮಾಲ್‌ನಲ್ಲಿ ಗುಂಡಿನ ದಾಳಿ ನಡೆದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ದಾಳಿಕೋರ ಸತ್ತು ಬಿದ್ದಿರುವುದನ್ನು ಕಾಣಬಹುದು. ಆತನ ವಯಸ್ಸು ಸುಮಾರು 20 ವರ್ಷ ಎಂದು ಹೇಳಲಾಗುತ್ತದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:02 am, Sun, 7 May 23