ನವಜಾತ ಶಿಶುಗಳಲ್ಲಿ ಕೊರೊನಾ ಸೋಂಕು ನಿರೋಧಕ ಶಕ್ತಿ ಪತ್ತೆ; ಅಚ್ಚರಿಗೆ ಕಾರಣವಾಯ್ತು ಹೊಸ ಸಂಶೋಧನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 18, 2020 | 3:48 PM

ಹೆರಿಗೆಗೆ ಹತ್ತಿರದ ಅವಧಿಯಲ್ಲಿ ಕೊರೊನಾ ಸೋಂಕಿಗೆ ಒಳಗಾದ ಸ್ತ್ರೀಯರಿಗೆ ಜನಿಸಿದ ಮಗುವಿನಲ್ಲಿ ರೋಗ ನಿರೋಧಕ ಅಂಶ ಅಧಿಕವಾಗಿರುವುದು ತಿಳಿದುಬಂದಿದೆ. ಒಂದು ವೇಳೆ ಇನ್ನುಮುಂದೆ ಹುಟ್ಟುವ ಮಕ್ಕಳಲ್ಲಿ ಕೊರೊನಾ ವೈರಾಣುವಿನ ವಿರುದ್ಧ ಹೋರಾಡುವ ಶಕ್ತಿ ತನ್ನಿಂತಾನೇ ಅಭಿವೃದ್ಧಿಯಾದರೆ ಅದು ವೈಜ್ಞಾನಿಕವಾಗಿ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಲಿದೆ.

ನವಜಾತ ಶಿಶುಗಳಲ್ಲಿ ಕೊರೊನಾ ಸೋಂಕು ನಿರೋಧಕ ಶಕ್ತಿ ಪತ್ತೆ; ಅಚ್ಚರಿಗೆ ಕಾರಣವಾಯ್ತು ಹೊಸ ಸಂಶೋಧನೆ
ಕೊರೊನಾದ ಕುಲಾಂತರಿ ತಳಿ
Follow us on

ಸಿಂಗಾಪುರ: ಕೊವಿಡ್​​ಗೆ ತುತ್ತಾದ ಗರ್ಭಿಣಿಯರಿಗೆ ಜನಿಸುವ ಮಕ್ಕಳಲ್ಲಿ ಕೊವಿಡ್​ ವಿರುದ್ಧದ ರೋಗ ನಿರೋಧಕ ಶಕ್ತಿ ಅಭಿವೃದ್ಧಿಯಾಗಿರುತ್ತದೆ ಎಂದು ಸಿಂಗಾಪುರದ ತಜ್ಞರು ನಡೆಸಿದ ಸಂಶೋಧನೆಯೊಂದು ವರದಿಮಾಡಿದೆ. ಸಂಶೋಧನೆಗೆ ಒಳಪಡಿಸಿದ ಒಟ್ಟು 16 ಕೊರೊನಾ ಸೋಂಕಿತ ಗರ್ಭಿಣಿಯರ ಪೈಕಿ 5 ಜನರಿಗೆ ಹೆರಿಗೆಯಾಗಿದ್ದು ಎಲ್ಲಾ 5 ನವಜಾತ ಶಿಶುಗಳಲ್ಲೂ ರೋಗ ನಿರೋಧಕ ಶಕ್ತಿ ಪತ್ತೆಯಾಗಿರುವುದು ತಜ್ಞರಲ್ಲಿ ಅಚ್ಚರಿ ಮೂಡಿಸಿದೆ.

ಸಿಂಗಾಪುರದ ಪ್ರಸೂತಿ ಮತ್ತು ಸ್ತ್ರೀರೋಗ ಅಧ್ಯಯನ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ಬಹಿರಂಗವಾಗಿದೆ. ಸದ್ಯ ನವಜಾತ ಶಿಶುಗಳಲ್ಲಿ ರೋಗ ನಿರೋಧಕ ಶಕ್ತಿ ಎಷ್ಟು ಕಾಲ ಉಳಿಯಲಿದೆ ಎನ್ನುವುದು ಖಚಿತವಾಗಿಲ್ಲ. ಹೆರಿಗೆಗೆ ಹತ್ತಿರದ ಅವಧಿಯಲ್ಲಿ ಕೊರೊನಾ ಸೋಂಕಿಗೆ ಒಳಗಾದ ಸ್ತ್ರೀಯರಿಗೆ ಜನಿಸಿದ ಮಗುವಿನಲ್ಲಿ ರೋಗ ನಿರೋಧಕ ಅಂಶ ಅಧಿಕವಾಗಿರುವುದು ತಿಳಿದುಬಂದಿದೆ.

ಒಂದು ವೇಳೆ ಇನ್ನುಮುಂದೆ ಹುಟ್ಟುವ ಮಕ್ಕಳಲ್ಲಿ ಕೊರೊನಾ ವೈರಾಣುವಿನ ವಿರುದ್ಧ ಹೋರಾಡುವ ಶಕ್ತಿ ತನ್ನಿಂತಾನೇ ಅಭಿವೃದ್ಧಿಯಾದರೆ ಅದು ವೈಜ್ಞಾನಿಕವಾಗಿ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಲಿದೆ. ಜೊತೆಗೆ, ಮುಂದಿನ ಪೀಳಿಗೆಗೆ ಕೊರೊನಾ ವೈರಾಣು ವರ್ಗವಾಗುವುದನ್ನು ಅತ್ಯಂತ ಸಹಜವಾಗಿ ತಡೆಗಟ್ಟುವುದು ಸಹ ಸಾಧ್ಯವಾಗಲಿದೆ.

ಬ್ರಿಟನ್​ನಲ್ಲಿ ನೆಲೆಸಿರುವ ಭಾರತೀಯರ ಮಾನಸಿಕ ಆರೋಗ್ಯಕ್ಕೆ ಪೆಟ್ಟು ಕೊಟ್ಟ ಕೊರೊನಾ