ಚೀನಾದ ಸಿನೋವ್ಯಾಕ್ ಕೊರೊನಾ ಲಸಿಕೆ ಪ್ರಯೋಗಗಳಲ್ಲಿ ಮುಂಚೂಣಿಯಲ್ಲಿದ್ದ ವಿಜ್ಞಾನಿ ನೊವಿಲಿಯಾ ಸ್ಜಾಫ್ರಿ ಬಚ್ಚಿಯಾರ್ ಸಾವು
ಇಂಡೋನೇಷ್ಯಾದ ರಾಜ್ಯ ಉದ್ಯಮಗಳ ಸಚಿವ ಎರಿಕ್ ತೋಹಿರ್ ಇನ್ಸ್ಟಾಗ್ರಾಂನಲ್ಲಿ ನೊವಿಲಿಯಾ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಆದರೆ ಆಕೆಯ ಸಾವಿಗೆ ನಿಖರ ಕಾರಣವೇನೆಂದು ಅವರೂ ತಿಳಿಸಲಿಲ್ಲ.
ಇಂಡೋನೇಷ್ಯಾದಲ್ಲಿ ಚೀನಾದ ಸಿನೋವ್ಯಾಕ್ ಕೊರೊನಾ ಲಸಿಕೆ ಪ್ರಯೋಗಗಳನ್ನು ನಡೆಸುತ್ತಿದ್ದ ಪ್ರಮುಖ ವಿಜ್ಞಾನಿ ಮೃತಪಟ್ಟಿದ್ದಾರೆ. ಸಿನೋವ್ಯಾಕ್ ಕೊರೊನಾ ಲಸಿಕೆಯ ಪ್ರಯೋಗದಲ್ಲಿ ಮುಂಚೂಣಿಯಲ್ಲಿದ್ದ ನೊವಿಲಿಯಾ ಸ್ಜಾಫ್ರಿ ಬಚ್ಚಿಯಾರ್ ಶಂಕಿತ ಕೊವಿಡ್ 19 ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಇಂಡೋನೇಷಿಯಾ ಮಾಧ್ಯಮಗಳು ವರದಿ ಮಾಡಿವೆ. ಇಂಡೋನೇಷಿಯಾದಲ್ಲಿ ಕೊರೊನಾ ವೈರಸ್ ಉಲ್ಬಣಗೊಂಡಿದೆ. ಹಾಗೇ ಈ ದೇಶದ ಚೀನಾದ ಸಿನೋವ್ಯಾಕ್ ಲಸಿಕೆಯನ್ನೇ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ.
ನೊವಿಲಿಯಾ ಅವರು ಮೃತಪಟ್ಟಿದ್ದು ಕೊರೊನಾ ವೈರಸ್ನಿಂದ. ಹಾಗಾಗಿ ಅವರ ಅಂತ್ಯಕ್ರಿಯೆಯನ್ನು ಕೊವಿಡ್ 19 ಶಿಷ್ಟಾಚಾರ ಅನುಸರಿಸಿಯೇ ಮಾಡಲಾಗಿದೆ ಎಂದು ಸಿಂಡೋನ್ಯೂಸ್ ವರದಿ ಮಾಡಿದೆ. ಇಂಡೋನೇಷ್ಯಾದ ಲಸಿಕೆ ತಯಾರಿಕಾ ಕಂಪನಿ ಬಯೋ ಫಾರ್ಮಾ ಮೃತ ನೊವಿಲಿಯಾರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ. ಅವರನ್ನು ಕಳೆದುಕೊಂಡಿದ್ದು ಬಯೋಫಾರ್ಮ್ಗೆ ದೊಡ್ಡ ನಷ್ಟ ಎಂದೂ ಹೇಳಿದೆ.
ಇಂಡೋನೇಷ್ಯಾದ ರಾಜ್ಯ ಉದ್ಯಮಗಳ ಸಚಿವ ಎರಿಕ್ ತೋಹಿರ್ ಇನ್ಸ್ಟಾಗ್ರಾಂನಲ್ಲಿ ನೊವಿಲಿಯಾ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಆದರೆ ಆಕೆಯ ಸಾವಿಗೆ ನಿಖರ ಕಾರಣವೇನೆಂದು ಅವರೂ ತಿಳಿಸಲಿಲ್ಲ. ಚೀನಾದ ಸಿನೋವ್ಯಾಕ್ ಲಸಿಕೆಯನ್ನು ಇಂಡೋನೇಷ್ಯಾದಲ್ಲಿ ಬಯೋ ಫಾರ್ಮಾ ಕ್ಲಿನಿಕಲ್ ಟ್ರಯಲ್ ನಡೆಸುತ್ತಿದ್ದು, ಅದರ ವಿಜ್ಞಾನಿಗಳ ತಂಡವನ್ನು ನೊವಿಲಿಯಾ ಸ್ಜಾಫ್ರಿ ಬಚ್ಚಿಯಾರ್ ಮುನ್ನಡೆಸಿದ್ದರು. ಚೀನಾದ ಸಿನೋವ್ಯಾಕ್ ಲಸಿಕೆಯ ದಕ್ಷತೆ ಬಗ್ಗೆ ಹಲವು ಪ್ರಶ್ನೆಗಳನ್ನೂ ಎತ್ತಿದ್ದರು. ಈಗಾಗಲೇ ಇಂಡೋನೇಷ್ಯಾದಲ್ಲಿ ಸುಮಾರು 10 ಮಿಲಿಯನ್ ಜನರಿಗೆ ಸಿನೋವ್ಯಾಕ್ ನೀಡಲಾಗಿದೆ.
ಇದನ್ನೂ ಓದಿ: Aamir Khan: ಸೌರವ್ ಗಂಗೂಲಿ ಮನೆಯ ಗಾರ್ಡ್ಗಳು ಆಮೀರ್ ಖಾನ್ರನ್ನು ಒಳ ಬಿಡದೇ ಹೊರ ಕಳಿಸಿದ ಕತೆ ನಿಮಗೆ ಗೊತ್ತಾ?
Sinovac Vaccine Scientist Novilia Sjafri Bachtiar Dies in Indonesia