ದಕ್ಷಿಣ ಆಫ್ರಿಕಾದ ಇಂಗರ್ ವಾಲಂಟೈನ್ ಒಂದು ಗಂಟೆಯಲ್ಲಿ 249 ಕಪ್ ಚಹಾ ತಯಾರಿಸಿ ಗಿನ್ನೆಸ್ ವಿಶ್ವದಾಖಲೆ ಸ್ಥಾಪಿಸಿದ್ದಾರೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 19, 2022 | 8:06 AM

ಸ್ಪರ್ಧೆ ಶುರುವಾದ ಕೇವಲ 20 ನಿಮಿಷಗಳಲ್ಲೇ ವಾಲೆಂಟೈನ್ ಅವರಿಗೆ ನೀಡಲಾಗಿದ್ದ ಟೀ ಕಪ್ ಗಳು ಮುಗಿದು ಹೋದವು. ಕೂಡಲೇ ಅವರ ನೆರವಿಗೆ ಧಾವಿಸಿದ ವಿದ್ಯಾರ್ಥಿಗಳು ತಾವು ಕುಡಿದ ಟೀ ಕಪ್ ಗಳನ್ನು ಅವರಿಗೆ ತೊಳೆದುಕೊಟ್ಟರು.

ದಕ್ಷಿಣ ಆಫ್ರಿಕಾದ ಇಂಗರ್ ವಾಲಂಟೈನ್ ಒಂದು ಗಂಟೆಯಲ್ಲಿ 249 ಕಪ್ ಚಹಾ ತಯಾರಿಸಿ ಗಿನ್ನೆಸ್ ವಿಶ್ವದಾಖಲೆ ಸ್ಥಾಪಿಸಿದ್ದಾರೆ!
ಇಂಗರ್ ವಾಲೆಂಟೈನ್
Follow us on

ಒಂದು ತಾಸಿನಲ್ಲಿ ನೀವು ಎಷ್ಟು ಕಪ್ ಚಹಾ (tea) ಅಥವಾ ಕಾಫಿ ತಯಾರಿಸಬಲ್ಲಿರಿ? ದಕ್ಷಿಣ ಆಫ್ರಿಕಾದ ಇಂಗರ್ ವಾಲೆಂಟೈನ್ (Inger Valentine) ಹೆಸರಿನ ಮಹಿಳೆ ಒಂದು ಗಂಟೆಯಲ್ಲಿ 249 ಕಪ್ ಟೀ ತಯಾರಿಸಿ ಗಿನ್ನೆಸ್ ದಾಖಲೆಗಳ ಪುಸ್ತಕದಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ನಮಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ವಾಲೆಂಟೈನ್ ಕೇವಲ ದಕ್ಷಿಣ ಆಫ್ರಿಕಾದಲ್ಲಿ ಮಾತ್ರ ಸಿಗುವ ಅಸ್ಪಾಲಥಸ್ ಲಿನಾರಿಸ್ ಗಿಡದ ಕೆಂಪು ಹರ್ಬಲ್ ಚಹಾದ ರೂಯ್ಬೋಸ್ (Rooibos leaves) ಎಲೆಗಳಿಂದ 249 ಕಪ್ ಟೀ ತಯಾರಿಸಿದ್ದಾರೆ.

ಅಸ್ತಿತ್ವದಲ್ಲಿದ್ದ ದಾಖಲೆಯನ್ನು ಹಿಂದಟ್ಟಲು ಇಲ್ಲವೇ ಸರಿಗಟ್ಟಲು ಒಂದು ತಾಸಿನಲ್ಲಿ ವಾಲೆಂಟೈನ್ ಕನಿಷ್ಟ 150 ಕಪ್ ಚಹಾ ತಯಾರಿಸಬೇಕಿತ್ತು. ವಾಲೆಂಟೈನ್ ರೂಯ್ಬೋಸ್ ಎಲೆಗಳ ಮೂರು ಫ್ಲೇವರ್ ಗಳನ್ನು-ಮೂಲ, ವೆನಿಲ್ಲ ಮತ್ತು ಸ್ಟ್ರಾಬೆರ್ರಿ ಬಳಸಿ ಅವರು ಚಹಾ ತಯಾರಿಸಿದ್ದಾರೆ.

ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆಯ ಪದಾಧಿಕಾರಿಗಳ ಪ್ರಕಾರ ವಾಲೆಂಟೈನ್ ಚಹಾ ತಯಾರಿಸಲು ಆರಂಭಿಸಿದಾಗ ಅವರ ತಲೆಯಲ್ಲಿ ಒಂದು ನಿಖರವಾದ ಯೋಜನೆಯಿತ್ತು. ಅವರು ಪ್ರತಿ ಟೀಪಾಟ್ ನಲ್ಲಿ ನಾಲ್ಕು ಟೀ ಬ್ಯಾಗ್ಗಳನ್ನು ಹಾಕಿದರು. ಇದರಿಂದ 4 ಕಪ್ ಟೀ ತಯಾರಾಯಿತು. ಅದು ಸರಿಯಾದ ಮತ್ತು ಸೂಕ್ತವಾದ ರೂಯ್ಬೋಸ್ ಟೀ ಎನಿಸಿಕೊಳ್ಳುವ ಅರ್ಹತೆ ಗಿಟ್ಟಿಸಬೇಕಾದರೆ ಟೀ ಬ್ಯಾಗ್ ಕನಿಷ್ಟ ಎರಡು ನಿಮಿಷಗಳವರೆಗೆ ಟೀಪಾಟ್ ನಲ್ಲಿ ಮುಳುಗಿರಬೇಕಿತ್ತು. ಮೊದಲ ಮೂರು ಟೀಪಾಟ್ ಗಳಲ್ಲೂ ಟೀಬ್ಯಾಗ್ ಗಳನ್ನು ಹಾಕಿದ ಕೂಡಲೇ ಅವರು ಮುಂದಿನ ಬ್ಯಾಚ್ ಕಡೆ ನಡೆದರು.

ಚಹಾಗೆ ಸಂಬಂಧಿಸಿದ ಗಿನ್ನೆಸ್ ವಿಶ್ವದಾಖಲೆಗೆ ಪ್ರಯತ್ನಿಸುವಾಗ ಸಂಸ್ಥೆಯು ಯಾವುದೇ ಪದಾರ್ಥ ಹಾಳಾಗಬಾರದು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ. ಸ್ಥಳೀಯ ವಿದ್ಯಾರ್ಥಿಗಳು ಮತ್ತು ಸಮುದಾಯವರು ಸೇರಿದಂತೆ ಚಹಾ ಸೇವಿಸುವರ ಗುಂಪು ಚಹಾ ಕುಡಿಯುವುದಕ್ಕಾಗಿಯೇ ಅಲ್ಲಿ ಸೇರಿತ್ತು.

ಸ್ಪರ್ಧೆ ಶುರುವಾದ ಕೇವಲ 20 ನಿಮಿಷಗಳಲ್ಲೇ ವಾಲೆಂಟೈನ್ ಅವರಿಗೆ ನೀಡಲಾಗಿದ್ದ ಟೀ ಕಪ್ ಗಳು ಮುಗಿದು ಹೋದವು. ಕೂಡಲೇ ಅವರ ನೆರವಿಗೆ ಧಾವಿಸಿದ ವಿದ್ಯಾರ್ಥಿಗಳು ತಾವು ಕುಡಿದ ಟೀ ಕಪ್ ಗಳನ್ನು ಅವರಿಗೆ ತೊಳೆದುಕೊಟ್ಟರು.

ಒಂದು ತಾಸಿನ ಅವಧಿ ಮುಗಿಯುವ ಮೊದಲೇ ವಾಲೆಂಟೈನ್ ಅವರಿಗೆ ತಾನು ವಿಶ್ವದಾಖಲೆ ನಿರ್ಮಿಸಿದ್ದೇನೆ ಅಂತ ಮನವರಿಕೆಯಾಗತೊಡಗಿತು. ಗಿನ್ನೆಸ್ ವಿಶ್ವ ದಾಖಲೆಗಳ ಸಂಸ್ಥೆಗೆ ಅವರು, ‘170 ಕಪ್ ಟೀ ತಯಾರಿಸಿರಬಹುದೆಂದು ಭಾವಿಸುತ್ತೇನೆ’ ಅಂತ ಹೇಳಿದರು. ಆದರೆ ಅವರು ತಾವು ಊಹಿಸದಕ್ಕಿಂತ ಹೆಚ್ಚು ಕಪ್ ಚಹಾ ತಯಾರಿಸಿದ್ದರು. ಸಂಸ್ಥೆಯು ವಾಲೆಂಟೈನ್ 249 ಕಪ್ ಟೀ ತಯಾರಿಸಿದ್ದಾರೆಂದು ಘೋಷಿಸಿದಾಗ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಒಂದು ಕಪ್ ನಲ್ಲಿ ಅವರು ಸರಿಯಾಗಿ ಟೀ ತುಂಬಿಸದ ಕಾರನ ಅದನ್ನು ಅನರ್ಹಗೊಳಿಸಲಾಯಿತು.

ವಾಲೆಂಟೈನ್ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು 2018ರಲ್ಲಿ ಕಾಳ್ಗಿಚ್ಚಿನಿಂದ ವುಪ್ಪರ್ಥಾಲ್ ಸಮುದಾಯ ವಾಸವಾಗಿರುವ ಬೆಟ್ಟವೊಂದರ ಮೇಲಿರುವ ಗ್ರಾಮವೊಂದನ್ನು ಸಂಪೂರ್ಣವಾಗಿ ನಾಶ ಮಾಡಿದ್ದರೂ ಸಮುದಾಯದ ಜನ ಧೃತಿಗಡೆದೆ ಪುನಃ ತಮ್ಮ ಬದುಕನ್ನು ಕಟ್ಟಿಕೊಂಡು ಪ್ರದರ್ಶಿದ ಸಂಕಲ್ಪವನ್ನು ಸೆಲೆಬ್ರೇಟ್ ಮಾಡಲು ಗಿನ್ನೆಸ್ ವಿಶ್ವದಾಖಲೆಗೆ ಪ್ರಯತ್ನಿದರು.

‘ವಿಶ್ವದಾಖಲೆ ಮತ್ತು ವುಪ್ಪರ್ಥಾಲ್ ಸಮುದಾಯದ ಸಾಹಸ ಬಗ್ಗೆ ನಾನು ಬಹಳ ರೋಮಾಂಚಿತಳಾಗಿದ್ದೇನೆ,’ ಎಂದು ವಾಲಂಟೈನ್ ಹೇಳಿದರು.