ದಾವೂದ್ ಇಬ್ರಾಹಿಂನ್ನು ಭಾರತಕ್ಕೆ ಹಸ್ತಾಂತರಿಸುತ್ತೀರಾ?; ಉತ್ತರಿಸದೆ ಜಾರಿಕೊಂಡ ಪಾಕ್ ಅಧಿಕಾರಿ
ಪ್ರಧಾನಿ ಮೋದಿಯವರ ಭಾಷಣ ಮುಗಿದ ನಂತರ, ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕ ಎಂದು ಗುರುತಿಸಲ್ಪಟ್ಟ 1993 ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂನ ಸ್ಥಳದ ಬಗ್ಗೆ ತಿಳಿಯಲು ಬಯಸಿದ ವರದಿಗಾರರು...
ದಾವೂದ್ ಇಬ್ರಾಹಿಂ (Dawood Ibrahim) ಮತ್ತು ಪರಾರಿಯಾಗಿರುವ ಇತರ ಉಗ್ರರು ಪಾಕಿಸ್ತಾನದಲ್ಲಿ ಸುರಕ್ಷಿತವಾಗಿ ನೆಲೆಗೊಂಡಿದ್ದು, ಅವರನ್ನು ಭಾರತಕ್ಕೆ ಹಸ್ತಾಂತರಿಸುತ್ತೀರಾ ಎಂದು ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ ಮುಖ್ಯಸ್ಥ ಮೊಹ್ಸಿನ್ ಬಟ್ (Mohsin Butt) ಅವರಲ್ಲಿ ಮಾಧ್ಯಮದವರು ಕೇಳಿದ್ದಾರೆ. ಈ ಪ್ರಶ್ನೆಗೆ ಬಟ್ ಉತ್ತರಿಸಿದೆ ಮೌನ ಪಾಲಿಸಿದ್ದಾರೆ. ಇಂಟರ್‌ಪೋಲ್‌ನ 90ನೇ ಮಹಾ ಅಧಿವೇಶನದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಬಂದಿರುವ ಬಟ್, ಕೊನೆಯ ಕ್ಷಣದವರೆಗೂ ಪ್ರಗತಿ ಮೈದಾನದ ಹಾಲ್‌ಗೆ ಪ್ರವೇಶಿಸುವುದನ್ನು ತಪ್ಪಿಸಿಕೊಂಡರು. ಮೋಸ್ಟ್ ವಾಂಟೆಂಡ್ ಉಗ್ರರು ಎಲ್ಲಿದ್ದಾರೆ ಎಂಬುದನ್ನು ಕೇಳಲು ಮಾಧ್ಯಮದವರು ಕಾಯುತ್ತಿದ್ದರು. ಇಬ್ಬರು ಸದಸ್ಯರ ಪಾಕಿಸ್ತಾನದ ನಿಯೋಗದ ನೇತೃತ್ವದ ಅಧಿಕಾರಿ, ಊಟದ ವ್ಯವಸ್ಥೆ ಮಾಡಲಾದ ಡೈನಿಂಗ್ ಹಾಲ್‌ನಲ್ಲೇ ಕುಳಿತಿದ್ದು ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತಿದ್ದಾರೆ ಎಂದಾಗಲಷ್ಟೇ ವೇದಿಕೆಗೆ ಬಂದಿದ್ದಾರೆ.
ಪ್ರಧಾನಿ ಮೋದಿಯವರ ಭಾಷಣ ಮುಗಿದ ನಂತರ, ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕ ಎಂದು ಗುರುತಿಸಲ್ಪಟ್ಟ 1993 ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂನ ಸ್ಥಳದ ಬಗ್ಗೆ ತಿಳಿಯಲು ಬಯಸಿದ ವರದಿಗಾರರು ಬಟ್ ಅವರನ್ನು ಸುತ್ತುವರಿದರು. ಪಾಕಿಸ್ತಾನದಲ್ಲಿ ನೆಲೆಸಿರುವ ಇತರ ಭಯೋತ್ಪಾದಕರಾದ -ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಮತ್ತು 9/11 ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನ್ನು ಯಾವಾಗ ಹಸ್ತಾಂತರಿಸುತ್ತೀರಿ ಎಂದು ಮಾಧ್ಯಮದವರು ಬಟ್ ಅವರಲ್ಲಿ ಕೇಳಿದರು. ಇದಕ್ಕೆ ಏನೂ ಉತ್ತರಿಸದೆ ಮೌನವಾಗಿ ಹೊರಟು ಹೋಗಿದ್ದಾರೆ ಬಟ್.
#WATCH | Pakistan’s director-general of the Federal Investigation Agency (FIA) Mohsin Butt, attending the Interpol conference in Delhi, refuses to answer when asked if they will handover underworld don Dawood Ibrahim & Lashkar-e-Taiba chief Hafiz Saeed to India. pic.twitter.com/GRKQWvPNA1
— ANI (@ANI) October 18, 2022
ಈ ವರ್ಷ ಜುಲೈನಲ್ಲಿ ಇಂಟರ್‌ಪೋಲ್‌ನೊಂದಿಗೆ ಸಮನ್ವಯಗೊಳಿಸಲು ಪಾಕಿಸ್ತಾನದ ರಾಷ್ಟ್ರೀಯ ಕೇಂದ್ರ ಬ್ಯೂರೋ ಆಗಿರುವ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ (ಎಫ್‌ಐಎ) ಮಹಾನಿರ್ದೇಶಕರಾಗಿ ಬಟ್ ಅವರನ್ನು ನೇಮಿಸಲಾಗಿತ್ತು.
ಭಯೋತ್ಪಾದಕರು, ಅಪರಾಧಿಗಳು ಮತ್ತು ಭ್ರಷ್ಟರಿಗೆ ಸುರಕ್ಷಿತ ಸ್ವರ್ಗಗಳನ್ನು ತೊಡೆದುಹಾಕುವುದಕ್ಕಾಗಿ ಕೆಲಸ ಮಾಡಲು ಜಾಗತಿಕ ಸಮುದಾಯಕ್ಕೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಒಳ್ಳೆಯ ಶಕ್ತಿಗಳು ಸಹಕರಿಸಿದಾಗ, ಅಪರಾಧದ ಶಕ್ತಿಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ
Published On - 7:26 pm, Wed, 19 October 22