ಜಪಾನ್ ಪ್ರಧಾನಿ ಇಶಿಬಾ ಜತೆ ಬುಲೆಟ್​ ರೈಲಿನಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ

ಜಪಾನ್ ಭೇಟಿಯ ಎರಡನೇ ದಿನದಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಶನಿವಾರ ಸೆಂಡೈಗೆ ಬುಲೆಟ್ ರೈಲು ಪ್ರಯಾಣ ಮಾಡಿದರು, ಅವರ ಜೊತೆ ಜಪಾನ್ ಪ್ರಧಾನಿ ಶಿಗೇರು ಇಶಿಬಾ ಮತ್ತು ಇತರ ಅಧಿಕಾರಿಗಳೂ ಇದ್ದರು.ಭಾರತವು ಅಹಮದಾಬಾದ್ ಮತ್ತು ಮುಂಬೈ ನಡುವೆ ಬುಲೆಟ್ ರೈಲು ಜಾಲವನ್ನು ನಿರ್ಮಿಸುತ್ತಿದ್ದು, ಪ್ರಧಾನಿ ಮೋದಿ ಆಲ್ಫಾ-ಎಕ್ಸ್ ರೈಲಿನ ಕುರಿತು ವಿವರವಾದ ಮಾಹಿತಿಯನ್ನು ಪಡೆದರು.

ಜಪಾನ್ ಪ್ರಧಾನಿ ಇಶಿಬಾ ಜತೆ ಬುಲೆಟ್​ ರೈಲಿನಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ
ನರೇಂದ್ರ ಮೋದಿ

Updated on: Aug 30, 2025 | 8:30 AM

ಟೋಕಿಯೋ, ಆಗಸ್ಟ್​ 30: ಜಪಾನ್ ಭೇಟಿಯ ಎರಡನೇ ದಿನದಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಶನಿವಾರ ಸೆಂಡೈಗೆ ಬುಲೆಟ್ ರೈಲು ಪ್ರಯಾಣ ಮಾಡಿದರು, ಅವರ ಜೊತೆ ಜಪಾನ್ ಪ್ರಧಾನಿ ಶಿಗೇರು ಇಶಿಬಾ ಮತ್ತು ಇತರ ಅಧಿಕಾರಿಗಳೂ ಇದ್ದರು.ಭಾರತವು ಅಹಮದಾಬಾದ್ ಮತ್ತು ಮುಂಬೈ ನಡುವೆ ಬುಲೆಟ್ ರೈಲು ಜಾಲವನ್ನು ನಿರ್ಮಿಸುತ್ತಿದ್ದು, ಪ್ರಧಾನಿ ಮೋದಿ ಆಲ್ಫಾ-ಎಕ್ಸ್ ರೈಲಿನ ಕುರಿತು ವಿವರವಾದ ಮಾಹಿತಿಯನ್ನು ಪಡೆದರು.

ಪ್ರಯಾಣಕ್ಕೂ ಮುನ್ನ, ಪ್ರಧಾನಿ ಮೋದಿ ಅವರು ಜಪಾನ್‌ನಲ್ಲಿ ತರಬೇತಿ ಪಡೆಯುತ್ತಿರುವ ಭಾರತೀಯ ರೈಲು ಚಾಲಕರನ್ನು ಭೇಟಿಯಾದರು. ಇದಕ್ಕೂ ಮುನ್ನ ಭಾರತೀಯ ಮಾರುಕಟ್ಟೆಯಲ್ಲಿ ವಿದೇಶಿ ಕಂಪನಿಗಳ ಹೆಚ್ಚುತ್ತಿರುವ ಹೂಡಿಕೆಗಳ ಬಗ್ಗೆ ಮಾತನಾಡಿದ ಹೇಳಿದ ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿ ಬಂಡವಾಳ ಬೆಳೆಯುವುದು ಮಾತ್ರವಲ್ಲ, ಬದಲಾಗಿ ಅದು ದುಪ್ಪಟ್ಟಾಗುತ್ತದೆ ಎಂದು ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಜೆಟ್ರೋ (ಜಪಾನ್ ಬಾಹ್ಯ ವ್ಯಾಪಾರ ಸಂಸ್ಥೆ) ಹೇಳುವಂತೆ ಶೇ. 80 ರಷ್ಟು ಕಂಪನಿಗಳು ಭಾರತದಲ್ಲಿ ತಮ್ಮ ನೆಲೆಯನ್ನು ವಿಸ್ತರಿಸಿಕೊಳ್ಳಲು ಬಯಸುತ್ತವೆ. ಶೇ. 75 ರಷ್ಟು ಕಂಪನಿಗಳು ಲಾಭ ಗಳಿಸುತ್ತಿವೆ. ಭಾರತದಲ್ಲಿ, ಬಂಡವಾಳವು ಕೇವಲ ಬೆಳೆಯುವುದಿಲ್ಲ, ಅದು ದುಪ್ಪಟ್ಟಾಗುತ್ತದೆ ಎಂದರು. ಭಾರತದ ರಾಜಕೀಯ ಮತ್ತು ಆರ್ಥಿಕ ಸ್ಥಿರತೆಯನ್ನು ಬಿಂಬಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶವು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದರು.

ಮತ್ತಷ್ಟು ಓದಿ: ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಸ್ಥಿರತೆ ತರಲು ಭಾರತ ಹಾಗೂ ಚೀನಾ ಒಟ್ಟಾಗಿ ಕೆಲಸ ಮಾಡುವುದು ಮುಖ್ಯ: ಮೋದಿ

ಮೆಟ್ರೋ ರೈಲಿನಿಂದ ಉತ್ಪಾದನೆಯವರೆಗೆ, ಸೆಮಿಕಂಡಕ್ಟರ್‌ಗಳಿಂದ ಸ್ಟಾರ್ಟ್‌ಅಪ್‌ಗಳವರೆಗೆ ಜಪಾನ್ ಸಾ ಭಾರತದ ಪ್ರಮುಖ ಪಾಲುದಾರನಾಗಿದೆ ಎಂದು ಅವರು ಹೇಳಿದರು. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಿಂದಲೂ ಅನೇಕ ಜಪಾನಿನ ವ್ಯಾಪಾರ ನಾಯಕರೊಂದಿಗಿನ ತಮ್ಮ ವೈಯಕ್ತಿಕ ಸಂಬಂಧಗಳನ್ನು ಮೋದಿ ನೆನಪಿಸಿದರು.

ಜಪಾನಿನ ವ್ಯಾಪಾರ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ಎಂಬ ಆಹ್ವಾನ ನೀಡಿದರು. ಜಾಗತಿಕವಾಗಿ ಉತ್ಪಾದನೆ ಮತ್ತು ನಾವೀನ್ಯತೆಯನ್ನು ಹೆಚ್ಚಿಸಲು ಭಾರತದ ಪಾರದರ್ಶಕ ಆಡಳಿತ ಮತ್ತು ಬಲವಾದ ನೀತಿ ವಾತಾವರಣವನ್ನು ಬಳಸಿಕೊಳ್ಳುವಂತೆ ಅವರು ಕಂಪನಿಗಳನ್ನು ಒತ್ತಾಯಿಸಿದರು.

ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆಯ (ಎಸ್‌ಸಿಒ) ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಮೋದಿ ಜಪಾನ್‌ನಿಂದ ಎರಡು ದಿನಗಳ ಭೇಟಿಗಾಗಿ ಚೀನಾಕ್ಕೆ ಪ್ರಯಾಣಿಸಲಿದ್ದಾರೆ.

ಜಪಾನ್ ಮತ್ತು ಚೀನಾಕ್ಕೆ ನನ್ನ ಭೇಟಿ ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳು ಹಾಗೂ ಆದ್ಯತೆಗಳನ್ನು ಮತ್ತಷ್ಟು ಹೆಚ್ಚಿಸುತ್ತವೆ. ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ, ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ಫಲಪ್ರದ ಸಹಕಾರವನ್ನು ನಿರ್ಮಿಸಲು ಸಹಕಾರಿಯಗಲಿದೆ ಎಂದು ನನಗೆ ವಿಶ್ವಾಸವಿದೆ ಎಂದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ