Modi China Visit: ಟ್ರಂಪ್ ಸೊಕ್ಕು ಮುರಿಯಲು ಚೀನಾದಲ್ಲಿ ವೇದಿಕೆ ಸಿದ್ಧ, ತಿಯಾಂಜಿನ್ಗೆ ಬಂದಿಳಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಅವರು ಚೀನಾದ ತಿಯಾಂಜಿನ್ಗೆ ಬಂದಿಳಿದ್ದಾರೆ. ಇದೀಗ ಅವರನ್ನು ಚೀನಾ ಸಚಿವ ಲೀ ಲೆಚೆಂಗ್ ಸ್ವಾಗತಿಸಿದ್ದು, ಅದ್ಧೂರಿಯಾಗಿ ಸ್ವಾಗತ ಸಿಕ್ಕಿದೆ. ತಿಯಾಂಜಿನ್ನಲ್ಲಿ ಎಸ್ಸಿಒ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಭಾಗಿಯಾಗಲಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಕೂಡ ಮೋದಿ ಅವರು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚೀನಾದ (China) ತಿಯಾಂಜಿನ್ಗೆ ಬಂದಿಳಿದ್ದಾರೆ. ಮೋದಿ ಅವರಿಗೆ ತಿಯಾಂಜಿನ್ ಏರ್ಪೋರ್ಟ್ನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಚೀನಾ ಸಚಿವ ಲೀ ಲೆಚೆಂಗ್ ಅವರು ಪ್ರಧಾನಮಂತ್ರಿ ಮೋದಿ ಅವರನ್ನು ಬರಮಾಡಿಕೊಂಡಿದ್ದಾರೆ. ಇನ್ನು ತಿಯಾಂಜಿನ್ನಲ್ಲಿ ಎಸ್ಸಿಒ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಲಿದ್ದಾರೆ. ಚೀನಾ ಅಧ್ಯಕ್ಷ ಷಿ ಜಿನ್ ಜಿಂಪಿಂಗ್ ಅವರನ್ನು ಕೂಡ ಮೋದಿ ಅವರು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ನಾಳೆ ಬೆಳಗ್ಗೆ 9.30ಕ್ಕೆ ಕ್ಸಿ ಜಿನ್ಪಿಂಗ್ ಮಾತನಾಡಲಿದ್ದಾರೆ ಎಂದು ಹೇಳಲಾಗಿದೆ. ಇದರ ಜತೆಗೆ ರಷ್ಯಾ ಅಧ್ಯಕ್ಷ ಪುಟಿನ್ರನ್ನು ಸಹ ಭೇಟಿಯಾಗಲಿದ್ದಾರೆ.
ಪ್ರಧಾನಿ ಮೋದಿ ಅವರು 2018ರ ನಂತರ ಮೊದಲ ಬಾರಿಗೆ ಚೀನಾ ಭೇಟಿ ನೀಡಿದ್ದಾರೆ. ಗಲ್ವಾನ್ ಕಣಿವೆಯಲ್ಲಿನ ಘರ್ಷಣೆಯ ನಂತರ 2020 ರಲ್ಲಿ ಹದಗೆಟ್ಟಿದ್ದ ಭಾರತ-ಚೀನಾ ಸಂಬಂಧ ಮತ್ತೆ ಸುಧಾರಿಸುವ ಸಾಧ್ಯತೆಗಳು ಇದೆ ಎಂದು ಹೇಳಲಾಗಿದೆ. ಈ ಮೂಲಕ ಭಾರತ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಇನ್ನು ಚೀನಾ ಇದೆ ಮೊದಲು ಬಾರಿ ಒಂದು ದೇಶದ ಪ್ರಧಾನಿಗೆ ರೆಡ್ ಕಾರ್ಪೆಟ್ ಮೂಲಕ ಸ್ವಾಗತಿಸುವುದು ಅಪರೂಪವಾಗಿದೆ. ಸುಮಾರು ಏಳು ವರ್ಷಗಳ ನಂತರ ಪ್ರಧಾನಿ ಮೋದಿ ಚೀನಾಕ್ಕೆ ಭೇಟಿ ನೀಡಿರುವುದು ವಿಶ್ವದ ಗಮನ ಸೆಳೆದಿದೆ.
ಇದನ್ನೂ ಓದಿ: ಜಪಾನ್ ಪ್ರಧಾನಿ ಇಶಿಬಾ ಮತ್ತವರ ಪತ್ನಿಗೆ ಪ್ರಧಾನಿ ಮೋದಿ ನೀಡಿದ ಉಡುಗೊರೆಗಳೇನು?
ಇಲ್ಲಿದೆ ನೋಡಿ ವಿಡಿಯೋ:
VIDEO | Japan: PM Narendra Modi (@narendramodi) arrives in Tianjin, China, to attend the SCO Summit.
During the visit, he is scheduled to hold bilateral meetings with Chinese President Xi Jinping and Russian President Vladimir Putin.
(Source: Third party) pic.twitter.com/fa8e5LQIDT
— Press Trust of India (@PTI_News) August 30, 2025
ಇನ್ನು ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧ ಈಗಾಗಲೇ ಹದ್ದಗೆಟ್ಟಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಾಪರ ಯುದ್ಧವನ್ನು ಶುರು ಮಾಡಿದ್ದು, ಚೀನಾದ ಈ ಶೃಂಗಸಭೆಯಲ್ಲಿ 50% ಸುಂಕವನ್ನು ವಿಧಿಸುವುದರೊಂದಿಗೆ, ಪ್ರಾದೇಶಿಕ ಭದ್ರತಾ ಬಗ್ಗೆಯೂ ಚರ್ಚೆಯಾಗಲಿದೆ ಎಂದು ಹೇಳಲಾಗಿದೆ. ರಷ್ಯಾದ ತೈಲದ ಎರಡು ದೊಡ್ಡ ಗ್ರಾಹಕರಾದ ಚೀನಾ ಮತ್ತು ಭಾರತದೊಂದಿಗೆ ವೇದಿಕೆ ಹಂಚಿಕೊಳ್ಳಲು ಈ ಶೃಂಗಸಭೆಯು ಪುಟಿನ್‌ಗೆ ಒಂದು ಅವಕಾಶವಾಗಲಿದೆ. ರಷ್ಯಾದ ಇಂಧನ ಮತ್ತು ರಕ್ಷಣಾ ಉತ್ಪನ್ನಗಳನ್ನು ಖರೀದಿಸಿದ್ದಕ್ಕಾಗಿ ಟ್ರಂಪ್ ಭಾರತದ ಮೇಲೆ 25% ಹೆಚ್ಚುವರಿ ಸುಂಕ ವಿಧಿಸಿರುವುದು ಭಾರತಕ್ಕೆ ದೊಡ್ಡ ಹೊರೆಯಾಗಿದೆ. ಆದರೆ ಚೀನಾದ ಮೇಲೆ ಅಂತಹ ಯಾವುದೇ ಸುಂಕವನ್ನು ವಿಧಿಸಲಾಗಿಲ್ಲ. ಭಾರತ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವ ವರೆಗೆ ಈ ಹಿಂಸೆ ತಪ್ಪಿದಲ್ಲ.
ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:31 pm, Sat, 30 August 25




