ರಾಜೀನಾಮೆ ಪತ್ರಕ್ಕೆ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಸಹಿ; ನಾಳೆ ಸಂಸತ್​​ನಲ್ಲಿ ಘೋಷಣೆ

| Updated By: ರಶ್ಮಿ ಕಲ್ಲಕಟ್ಟ

Updated on: Jul 12, 2022 | 1:15 PM

Gotabaya Rajapaksa ಈ ರಾಜೀನಾಮೆ ಪತ್ರವನ್ನು ಸಂಸತ್​​ನ ಸ್ಪೀಕರ್​​ಗೆ ಹಸ್ತಾಂತರಿಸಿದ್ದು ಅವರು ಜುಲೈ 13 (ಬುಧವಾರ)  ಸಾರ್ವಜನಿಕ ಘೋಷಣೆ ಮಾಡಲಿದ್ದಾರೆ.

ರಾಜೀನಾಮೆ ಪತ್ರಕ್ಕೆ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಸಹಿ; ನಾಳೆ ಸಂಸತ್​​ನಲ್ಲಿ ಘೋಷಣೆ
ಗೊಟಬಯ ರಾಜಪಕ್ಸೆ
Follow us on

ಕೊಲಂಬೊ: ಜುಲೈ 13ಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿರುವ ಶ್ರೀಲಂಕಾದ (Sri Lnaka) ಅಧ್ಯಕ್ಷ ಗೊಟಬಯ ರಾಜಪಕ್ಸೆ (Gotabaya Rajapaksa)  ಸೋಮವಾರ ತಮ್ಮ ರಾಜೀನಾಮೆ ಪತ್ರಕ್ಕೆ ಸಹಿಹಾಕಿದ್ದಾರೆ. ಈ ರಾಜೀನಾಮೆ ಪತ್ರವನ್ನು ಸಂಸತ್​​ನ ಸ್ಪೀಕರ್​​ಗೆ ಹಸ್ತಾಂತರಿಸಿದ್ದು ಅವರು ಜುಲೈ 13 (ಬುಧವಾರ)  ಸಾರ್ವಜನಿಕ ಘೋಷಣೆ ಮಾಡಲಿದ್ದಾರೆ. ಸಹಿ ಹಾಕಿರುವ ರಾಜೀನಾಮೆ ಪತ್ರವನ್ನು ಸರ್ಕಾರದ ಹಿರಿಯ ಅಧಿಕಾರಿಗಳಿಗೆ ನೀಡಿದ್ದು ಅದನ್ನು ಅವರು ಸಂಸತ್ ಸ್ಪೀಕರ್​​ಗೆ ನೀಡಲಿದ್ದಾರೆ. ಸ್ಪೀಕರ್ ಮಹಿಂದಾ ಯಾಪ ಅಬೈವರ್ದೆನಾ (Mahinda Yapa Abeywardena) ಅವರು ನಾಳೆ ಸಂಸತ್​​ನಲ್ಲಿ ಗೊಟಬಯ ರಾಜಪಕ್ಸೆ ಅವರ ಅಧಿಕಾರ ಅವಧಿ ಮುಗಿದಿದೆ ಎಂದು ಘೋಷಣೆ ಮಾಡಲಿದ್ದಾರೆ ಎಂದು ಡೈಲಿ ಮಿರರ್ ವರದಿ ಮಾಡಿದೆ.

ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಬುಧವಾರ ಶ್ರೀಲಂಕಾ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜುಲೈ 20ರಂದು ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದು ಅಲ್ಲಿಯವರೆಗೆ ತಾತ್ಕಾಲಿಕವಾಗಿ ವಿಕ್ರಮಸಿಂಘೆ ಅಧ್ಯಕ್ಷ ಸ್ಥಾನದಲ್ಲಿರಲಿದ್ದಾರೆ. ಸಂವಿಧಾನದ ಪ್ರಕಾರ ಸಂಸತ್​​ನಲ್ಲಿ ಮತಚಲಾವಣೆ  ಮಾಡುವ ಮೂಲಕ ಪಕ್ಷದ ನಾಯಕರು ಜುಲೈ 20ರಂದು ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ ಎಂದು ಸ್ಪೀಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಜುಲೈ 19ರಂದು ನಾಮನಿರ್ದೇಶನ ಸಲ್ಲಿಸಲು ಕರೆ ನೀಡಲಾಗಿದೆ.

ಇಲ್ಲಿಯವರೆಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳೆಂದರೆ ಪ್ರಧಾನಿ ಮತ್ತು ವಿಪಕ್ಷ ನೇತಾರ ಸಜಿತ್ ಪ್ರೇಮದಾಸ. ಶ್ರೀಲಂಕಾದ ಆರ್ಥಿಕತೆಯನ್ನು ಮೇಲೆತ್ತಲು ತಾನು ಸಿದ್ದ ಎಂದಿದ್ದಾರೆ ಪ್ರೇಮದಾಸ.

ಇದನ್ನೂ ಓದಿ
ಜುಲೈ 20 ರಂದು ಶ್ರೀಲಂಕಾ ಹೊಸ ಅಧ್ಯಕ್ಷರ ಆಯ್ಕೆ: ಲಂಕಾ ಸಂಸತ್​ ಸ್ಪೀಕರ್​ ಹೇಳಿಕೆ
ಸರ್ವಪಕ್ಷ ಸರ್ಕಾರ ರಚನೆಗೆ ಒಪ್ಪಿಗೆ ದೊರೆತ ತಕ್ಷಣವೇ ತಮ್ಮ ಜವಾಬ್ದಾರಿಯನ್ನು ಹಸ್ತಾಂತರಿಸಲು ಸಿದ್ಧ
ಜನರ ಪ್ರತಿಭಟನೆ ಕಚೇರಿ ತಲುಪುತ್ತಿದ್ದಂತೆ ಗ್ಯಾಸ್ ವಿತರಣೆಗೆ ಅಜ್ಞಾತ ಸ್ಥಳದಿಂದಲೇ ಆದೇಶಿಸಿದ ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ

ತಾನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶ್ರೀಲಂಕಾ ಅಧ್ಯಕ್ಷರು ಶನಿವಾರ ಘೋಷಿಸಿದ್ದರು. ಆದಾಗ್ಯೂ ಅಧ್ಯಕ್ಷರು ಬೇರೊಂದು ದೇಶಕ್ಕೆ ಪಲಾಯನ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅವರು ದೇಶದಲ್ಲೇ ಇದ್ದಾರೆ ಎಂದು ಸಂಸತ್​​ನ ಸ್ಪೀಕರ್ ಹೇಳಿದ್ದಾರೆ. ಸಶಸ್ತ್ರ ಪಡೆಗಳ ರಕ್ಷಣೆಯಲ್ಲಿ ಅಧ್ಯಕ್ಷ ರಾಜಪಕ್ಸೆ ಇದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

Published On - 12:54 pm, Tue, 12 July 22