ಜನರ ಪ್ರತಿಭಟನೆ ಕಚೇರಿ ತಲುಪುತ್ತಿದ್ದಂತೆ ಗ್ಯಾಸ್ ವಿತರಣೆಗೆ ಅಜ್ಞಾತ ಸ್ಥಳದಿಂದಲೇ ಆದೇಶಿಸಿದ ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ

ಇಂದು ಮಧ್ಯಾಹ್ನ ಮೊದಲ ಹಡಗು ಕೆರವಲಪಿಟಿಯಕ್ಕೆ ಆಗಮಿಸುತ್ತಿದ್ದಂತೆ ಅನಿಲ ಇಳಿಸುವಿಕೆ ಮತ್ತು ವಿತರಣೆಯನ್ನು ಕೈಗೊಳ್ಳುವಂತೆ ಅಧ್ಯಕ್ಷ ರಾಜಪಕ್ಸೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜನರ ಪ್ರತಿಭಟನೆ ಕಚೇರಿ ತಲುಪುತ್ತಿದ್ದಂತೆ ಗ್ಯಾಸ್ ವಿತರಣೆಗೆ ಅಜ್ಞಾತ ಸ್ಥಳದಿಂದಲೇ ಆದೇಶಿಸಿದ ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ
ಗೊಟಬಯ ರಾಜಪಕ್ಸೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 10, 2022 | 8:52 PM

ಕೊಲಂಬೊ: ಪ್ರತಿಭಟನಾಕಾರರು ತಮ್ಮ ಕಚೇರಿ ಮತ್ತು ಅಧಿಕೃತ ನಿವಾಸ ಎರಡನ್ನೂ ಆಕ್ರಮಿಸಿಕೊಂಡಾಗಿನಿಂದ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ (Gotabaya Rajapaksa) ಎಲ್ಲಿದ್ದಾರೆ ಎಂಬುದು ಇನ್ನೂ ತಿಳಿದಿಲ್ಲ. ಆದರೆ ಇಂಧನವಿಲ್ಲದೆ ಪರಿತಪಿಸುತ್ತಿರುವ ಶ್ರೀಲಂಕಾಕ್ಕೆ (Sri Lanka )ಇದೀಗ 3,700 ಮೆಟ್ರಿಕ್ ಟನ್ ಎಲ್‌ಪಿ ಗ್ಯಾಸ್ (LPG) ಪಡೆದಿದ್ದು ,ಅಡುಗೆ ಅನಿಲವನ್ನು ಸುಗಮವಾಗಿ ವಿತರಿಸುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ ಎಂದು ಅವರ ಕಚೇರಿ ಭಾನುವಾರ ತಿಳಿಸಿದೆ. ಶ್ರೀಲಂಕಾ ತೀವ್ರವಾದ ಅನಿಲ ಕೊರತೆಯ ಅನುಭವಿಸುತ್ತಿದ್ದು ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದ ಜನರು ದೇಶದಾದ್ಯಂತ ರಸ್ತೆಗಳನ್ನು ನಿರ್ಬಂಧಿಸುತ್ತಿದ್ದಾರೆ. ಇಂದು ಮಧ್ಯಾಹ್ನ ಮೊದಲ ಹಡಗು ಕೆರವಲಪಿಟಿಯಕ್ಕೆ ಆಗಮಿಸುತ್ತಿದ್ದಂತೆ ಅನಿಲ ಇಳಿಸುವಿಕೆ ಮತ್ತು ವಿತರಣೆಯನ್ನು ಕೈಗೊಳ್ಳುವಂತೆ ಅಧ್ಯಕ್ಷ ರಾಜಪಕ್ಸೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 3,740 ಮೆಟ್ರಿಕ್ ಟನ್ ಅನಿಲವನ್ನು ಸಾಗಿಸುವ ಎರಡನೇ ಹಡಗು ಜುಲೈ 11 ರಂದು ಬರಲಿದೆ ಮತ್ತು 3,200 ಮೆಟ್ರಿಕ್ ಟನ್ ಅನಿಲವನ್ನು ಹೊತ್ತ ಮೂರನೇ ಹಡಗು ಜುಲೈ 15 ರಂದು ತಲುಪಲಿದೆ ಎಂದು ಶ್ರೀಲಂಕಾ ಮಾಧ್ಯಮಗಳು ತಿಳಿಸಿವೆ.

ಪ್ರತಿಭಟನಾಕಾರರ ಒಂದು ದೊಡ್ಡ ಗುಂಪು ಅಧ್ಯಕ್ಷರ  ಮತ್ತು ಪ್ರಧಾನ ಮಂತ್ರಿಗಳ ಸಾಂಪ್ರದಾಯಿಕ ಆಡಳಿತಾತ್ಮಕ ಕಟ್ಟಡಗಳನ್ನು ಆಕ್ರಮಿಸುವುದನ್ನು ಮುಂದುವರೆಸಿದೆ. ಇವು ಅಧಿಕೃತ ನಿವಾಸಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ಭಾನುವಾರ ಯಾವುದೇ ಪ್ರಮುಖ ಭದ್ರತಾ ಉಲ್ಲಂಘನೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರದಂದು ಗುಂಪೊಂದು ಕಟ್ಟಡಕ್ಕೆ ನುಗ್ಗಿದಾಗ ಅಧ್ಯಕ್ಷ ರಾಜಪಕ್ಸೆ ಅಧ್ಯಕ್ಷೀಯ ಭವನದಲ್ಲಿ ಇರಲಿಲ್ಲ.

ಇದನ್ನೂ ಓದಿ
Image
Sri Lanka Crisis: ಪ್ರವಾಸಿ ತಾಣದಂತಾದ ಶ್ರೀಲಂಕಾ ಅಧ್ಯಕ್ಷರ ನಿವಾಸ; ಮನೆಯೊಳಗೆ ನುಗ್ಗಿ ಸಂಭ್ರಮಿಸಿದ ಪ್ರತಿಭಟನಾಕಾರರು
Image
Sri Lanka Economic Crisis: ಅಧ್ಯಕ್ಷರ ನಿವಾಸದಲ್ಲಿ ಕೋಟಿಗಟ್ಟಲೆ ಹಣ ಪತ್ತೆಯಾಯ್ತು ಎಂದ ಪ್ರತಿಭಟನಾಕಾರರು
Image
Sri Lanka Crisis: ಬೈಕಿಂದ ಇಳಿದು ಹೆಲ್ಮೆಟ್ ಎಸೆದು ಪ್ರತಿಭಟನಾಕಾರರನ್ನು ಬೆಂಬಲಿಸಿದ ಶ್ರೀಲಂಕಾದ ಪೊಲೀಸಪ್ಪ ವೈರಲ್
Image
ಶ್ರೀಲಂಕಾ ಬಿಕ್ಕಟ್ಟು: ಪ್ರತಿಭಟನೆಕಾರರ ಕ್ರಮವನ್ನು ಲೆಜೆಂಡರಿ ಕ್ರಿಕೆಟರ್​ಗಳಾದ ಸಂಗಕ್ಕಾರ ಮತ್ತು ಜಯಸೂರ್ಯ ಸಮರ್ಥಿಸಿದರು

22 ಮಿಲಿಯನ್ ಜನರಿರುವ ದೇಶವಾದ ಶ್ರೀಲಂಕಾ ಆರ್ಥಿಕ ಕೊರತೆ ಅನುಭವಿಸುತ್ತಿದೆ. ವಿದೇಶಿ ವಿನಿಮಯದ ತೀವ್ರ ಕೊರತೆಯಿಂದ ದುರ್ಬಲಗೊಂಡಿದೆ. ಹಾಗಾಗಿ ಇಂಧನ ಮತ್ತು ಇತರ ಅಗತ್ಯ ವಸ್ತುಗಳ ಅಗತ್ಯ ಆಮದುಗಳಿಗೆ ಪಾವತಿಸಲು ಹೆಣಗಾಡುತ್ತಿದೆ.

Published On - 8:37 pm, Sun, 10 July 22

70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ