ನಾಪತ್ತೆಯಾಗಿದ್ದ ಬೋಯಿಂಗ್ 737-500 ವಿಮಾನ ಸಮುದ್ರದಲ್ಲಿ ಪತನ
ರಾಜಧಾನಿ ಜಕಾರ್ತದಿಂದ ಹೊರಟಿದ್ದ ಖಾಸಗಿ ವಿಮಾನ ಬೋಯಿಂಗ್ 737-500 ಟೇಕ್ ಆಫ್ ಆದ 4 ನಿಮಿಷದಲ್ಲೇ ಸಮುದ್ರಕ್ಕೆ ಬಿದ್ದಿದೆ.
ಇಂಡೋನೇಷ್ಯಾದಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದೆ. ರಾಜಧಾನಿ ಜಕಾರ್ತದಿಂದ ಹೊರಟಿದ್ದ ಖಾಸಗಿ ವಿಮಾನ ಬೋಯಿಂಗ್ 737-500 ಟೇಕ್ ಆಫ್ ಆದ 4 ನಿಮಿಷದಲ್ಲೇ ಸಮುದ್ರಕ್ಕೆ ಬಿದ್ದಿದೆ. ಈ ವಿಮಾನದಲ್ಲಿ 62 ಜನರಿದ್ದರು.
ಘಟನೆಯಲ್ಲಿ ಪ್ರಾಣಹಾನಿ ಸಂಭವಿಸಿರುವ ಕುರಿತು ಇಂಡೋನೇಷಿಯಾ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಸುಮಾರು 10 ಸಾವಿರ ಅಡಿ ಎತ್ತರದಿಂದ ವಿಮಾನ ಸಮುದ್ರಕ್ಕೆ ಬಿದ್ದ ಹಿನ್ನೆಲೆ 62 ಜನ ಬದುಕುಳಿಯುವುದು ಅನುಮಾನ ಎನ್ನಲಾಗುತ್ತಿದೆ.
ಏರ್ಪೋರ್ಟ್ನಲ್ಲಿ ಕಾಯ್ತಿದ್ದ ಕುಟುಂಬದವರಿಗೆ ಶಾಕ್ ಮೀನುಗಾರರಿಗೆ ವಿಮಾನದ ಅವಶೇಷ ದೊರೆತಿದೆ.ಪ್ರಯಾಣಿಕರ ದೇಹದ ಭಾಗ, ಬಟ್ಟೆ ಚೂರುಗಳು ಪತ್ತೆಯಅಗಿವೆ. ಅಷ್ಟಕ್ಕೂ ಮಳೆ ಕಾರಣ ನಿಗದಿತ ಸಮಯಕ್ಕಿಂತ 30 ನಿಮಿಷ ವಿಳಂಬವಾಗಿ ವಿಮಾನ ಹೊರಟಿತ್ತು. ಪಶ್ಚಿಮ ಕಾಲಿಮಂತನ್ ಪ್ರಾಂತ್ಯದ ಪಾಂಟಿಯಾನಾಕ್ಗೆ ತೆರಳುತ್ತಿದ್ದ ವಿಮಾನ ಮಧ್ಯಾಹ್ನ 2.40ಕ್ಕೆ ರೇಡಾರ್ ನಿಂದ ನಾಪತ್ತೆಯಾಗಿತ್ತು. ವಿಮಾನವು 26 ವರ್ಷ ಹಳೆಯದಾಗಿತ್ತು.
ಜಕಾರ್ತ ಮತ್ತು ಪಾಂಟಿಯಾನಾಕ್ ಏರ್ಪೋರ್ಟ್ನಲ್ಲಿ ಕಾಯ್ತಿದ್ದ ಕುಟುಂಬದವರು ಮತ್ತು ಸ್ನೇಹಿತರಿಗೆ ಈ ಘಟನೆ ಶಾಕ್ ನೀಡಿದೆ. 2018ರಲ್ಲಿ ಜಕಾರ್ತದಲ್ಲಿ ಲಯನ್ ಏರ್ ಕಂಪನಿಯ ಬೋಯಿಂಗ್ 737 ಮ್ಯಾಕ್ಸ್ ವಿಮಾನ ಪತನವಾಗಿ 189 ಪ್ರಯಾಣಿಕರು ಮೃತಪಟ್ಟಿದ್ದರು. ಈ ಘಟನೆ ಮಾಸುವ ಮೊದಲೇ ಮತ್ತೊಂದು ಘೋರ ದುರಂತ ನಡೆದುಹೋಗಿದೆ.
Flight #SJ182 was operated by a Boeing 737-500 "classic" with registration number PK-CLC (MSN 27323). First flight for this aircraft was in May 1994 (26 years old). pic.twitter.com/2rakDifhTm
— Flightradar24 (@flightradar24) January 9, 2021
Published On - 8:10 am, Sun, 10 January 21