ವಾಷಿಂಗ್ಟನ್: ದಿನದಿಂದ ದಿನಕ್ಕೆ ಅಮೆರಿಕದಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಅಲ್ಲದೆ, ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿತರಿರುವುದು ಅಮೆರಿಕದಲ್ಲಿ. ಈ ಮಧ್ಯೆ ಅಗತ್ಯ ಸೇವೆಗಳೆಂದು ಪರಿಗಣಿಸಿ ಲಾಕ್ಡೌನ್ನಿಂದ ಬಂದ್ ಆಗಿರುವ ಚರ್ಚ್ಗಳನ್ನು ತೆರೆಯುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ.
ದೊಡ್ಡಣ್ಣನ ಆಜ್ಞೆ..
ದೇಗುಲಗಳು, ಚರ್ಚುಗಳು, ಮಸೀದಿಗಳನ್ನು ಅಗತ್ಯ ಸೇವೆಗಳನ್ನು ಒದಗಿಸುವ ಸ್ಥಳಗಳಾಗಿ ಗುರುತಿಸುತ್ತಿದ್ದೇನೆ. ಈ ಸ್ಥಳಗಳು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಯ ಬಗ್ಗೆ ಸಮುದಾಯಗಳಿಗೆ ಮಾಹಿತಿ ನೀಡುತ್ತವೆ ಎಂದು ಟ್ರಂಪ್ ಉಲ್ಲೇಖಿಸಿದ್ದಾರೆ. ವಾರಂತ್ಯದಲ್ಲಿ ಚರ್ಚ್ಗಳನ್ನ ಕಡ್ಡಾಯವಾಗಿ ತೆರೆಯಲೇಬೇಕು. ಅಗತ್ಯ ಸೇವೆಗಳಲ್ಲಿ ಚರ್ಚ್ ಕೂಡ ಒಂದು ಅಂತಾ ಟ್ರಂಪ್ ಹೇಳಿದ್ದಾರೆ.
"Today, I am identifying houses of worship, churches, synagogues, and mosques as essential places that provide essential services." pic.twitter.com/PptCGYNAaa
— The White House (@WhiteHouse) May 22, 2020
Published On - 10:54 am, Sat, 23 May 20