
ಯುಕೆ, ಸೆಪ್ಟೆಂಬರ್ 14: ಮುಂಬೈ ಮೂಲದ ಯೋಗೇಶ್ ಅಲೆಕಾರಿ ಒಬ್ಬರೇ ಪ್ರಪಂಚ ಸುತ್ತಲು ಹೊರಟಿದ್ದರು. 17 ದೇಶಗಳನ್ನು ತಮ್ಮ ಬೈಕ್ನಲ್ಲೇ ಸುತ್ತಿ ಇನ್ನೇನು ಆಫ್ರಿಕಾದಲ್ಲಿ ತಮ್ಮ ಪ್ರವಾಸ(Tour)ವನ್ನು ಕೊನೆಗೊಳಿಸುವವರಿದ್ದರು. ಯುಕೆಗೆ ತೆರಳಿ ಅಲ್ಲಿ ಪಾರ್ಕ್ ಬಳಿ ಬೈಕ್ ನಿಲ್ಲಿಸಿದ್ದಾಗ ಬೈಕ್ ಕಳ್ಳತನವಾಗಿದೆ.
ಅವರಿಗೆ ಮುಂದೇನು ಮಾಡಬೇಕೆಂದು ತೋಚದಂತಾಗಿತ್ತು, ತಾನು ಇಷ್ಟ ಪಟ್ಟು ಕೊಂಡಿದ್ದ ಬೈಕ್ ಕಳೆದುಕೊಂಡು ಕುಸಿದುಹೋಗಿದ್ದರು.
ಏನೂ ತೋಚದೆ ಕುಳಿತಿದ್ದ ಯೋಗೇಶ್ಗೆ ಅಚ್ಚರಿಯೊಂದು ಕಾದಿತ್ತು. ಮ್ಯಾನ್ಸ್‌ಫೀಲ್ಡ್ ವುಡ್‌ಹೌಸ್‌ನ ದಿ ಆಫ್ ರೋಡ್ ಸೆಂಟರ್ ಒಂದು ಬೈಕ್ನ್ನು ಉಡುಗೊರೆಯಾಗಿ ಯೋಗೇಶ್ಗೆ ನೀಡಿದ್ದು, ಅವರ ವಿಶ್ವ ಸುತ್ತುವ ಕನಸನ್ನು ಮುಂದುವರೆಸಲು ಅವಕಾಶ ಮಾಡಿಕೊಟ್ಟಿದೆ. ಅಲೆಕಾರಿ ಅವರಿಗೆ ಆಫ್ರಿಕಾದಲ್ಲಿ ತಮ್ಮ ಕೊನೆಯ ಹಂತದ ಪ್ರವಾಸವನ್ನು ಮುಂದುವರಿಸಲು ಬದಲಿ ಬೈಕನ್ನು ಉಡುಗೊರೆಯಾಗಿ ನೀಡಿತು. ಈ ಉಡುಗೊರೆ ಯೋಗೇಶ್ರನ್ನು ಮೂಕವಿಸ್ಮಿತರನ್ನಾಗಿಸಿತ್ತು. 10 ದಿನಗಳ ಬಳಿಕ ಈಗ ನಾನು ನಗಬಲ್ಲೆ.ನನಗೆ ಏನು ಹೇಳಲು ಮಾತೇ ಬರುತ್ತಿಲ್ಲ ಎಂದು ಹೇಳಿದರು.
ಆಫ್ ರೋಡ್ ಸೆಂಟರ್ಗೆ ಧನ್ಯವಾದ ತಿಳಿಸಿದರು. ಆಗಸ್ಟ್ 28 ರಂದು ನಾಟಿಂಗ್‌ಹ್ಯಾಮ್‌ನ ವೊಲಾಟನ್ ಪಾರ್ಕ್‌ನಲ್ಲಿ ನಿಲ್ಲಿಸಿದ್ದಾಗ , ಕೆಟಿಎಂ ಬೈಕ್ ಕಳ್ಳತನವಾಗಿತ್ತು, ಅದೇ ಬೈಕ್ನಲ್ಲಿ ಅವರು 17 ದೇಶಗಳನ್ನು ಸುತ್ತಿದ್ದರು. ವಸ್ಥಾಪಕ ನಿರ್ದೇಶಕ ಬೆನ್ ಲೆಡ್ವಿಡ್ಜ್ ಮತ್ತು ದಿ ಆಫ್ ರೋಡ್ ಸೆಂಟರ್‌ನ ಮಾಲೀಕ ಡೇನಿಯಲ್ ವ್ಯಾಟ್ಸ್ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ನೋಡಿ ಅಲೆಕಾರಿಗೆ ಸಹಾಯ ಮಾಡಲು ನಿರ್ಧಾರಿಸಿದರು.
ನಮ್ಮ ಬಳಿ ಈ ಬೈಕ್ ಇದೆ, ನಾವು ಅವರಿಗೆ ಸಹಾಯ ಮಾಡಬೇಕು ಎಂದುಕೊಂಡೆವು ಎಂದು ಮಾಲೀಕರು ತಿಳಿಸಿದ್ದಾರೆ. ಅಲೆಕಾರಿ ಈ ವರ್ಷದ ಮೇ ತಿಂಗಳಲ್ಲಿ ಪ್ರವಾಸ ಆರಂಭಿಸಿದ್ದರು. ಬೈಕ್ ಖರೀದಿಸಲು ಮತ್ತು ಪ್ರವಾಸ ಮಾಡಲು ವರ್ಷಗಳಿಂದ ಹಣ ಕೂಡಿಟ್ಟಿದ್ದರು.
24,000 ಕಿಲೋಮೀಟರ್‌ಗಳು ಮತ್ತು 17 ದೇಶಗಳನ್ನು ಕ್ರಮಿಸಿದ ನಂತರ, ಅವರು ಯುಕೆ ತಲುಪಿದರು ಮತ್ತು ಅವರ ಮುಂದಿನ ನಿಲ್ದಾಣ ಆಫ್ರಿಕಾ ಆಗಿತ್ತು.ಆದರೆ, ಆಗಸ್ಟ್ 28 ರಂದು ನಾಟಿಂಗ್‌ಹ್ಯಾಮ್‌ನಲ್ಲಿ ಅವರ ಬೈಕ್ ಕಳ್ಳತನವಾದಾಗ ಅವರ ಸಾಹಸಮಯ ಪ್ರಯಾಣ ಸ್ಥಗಿತಗೊಂಡಿತ್ತು.
ಯೋಗೇಶ್ ಪಾಸ್‌ಪೋರ್ಟ್, ಹಣ ಮತ್ತು ದ್ವಿಚಕ್ರ ವಾಹನದಲ್ಲಿ ಇಟ್ಟುಕೊಂಡಿದ್ದರು ಕೆಲವು ದಾಖಲೆಗಳನ್ನು ಸಹ ಕಳೆದುಕೊಂಡಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:07 am, Sun, 14 September 25