ಇದು ನಮ್ಮಲ್ಲಿ ಅಷ್ಟೇ ಅಲ್ಲ, ವಿದೇಶದಲ್ಲೂ ನಡೆಯುತ್ತದೆ ಇಂತಹ ಅಮಾನುಷ ಘಟನೆಗಳು..

ಮನೆ ಮಕ್ಕಳನ್ನೇ ದಶಕಗಟ್ಟಲೆ ಗೃಹ ಬಂಧನದಲ್ಲಿಡುವ ಸುದ್ದಿಗಳು ಭಾರತಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಇಂಥದ್ದೇ ಒಂದು ಅಮಾನವೀಯ ಘಟನೆ ಸ್ವೀಡನ್​ನಲ್ಲಿ ನಡೆದಿದೆ.

ಇದು ನಮ್ಮಲ್ಲಿ ಅಷ್ಟೇ ಅಲ್ಲ, ವಿದೇಶದಲ್ಲೂ ನಡೆಯುತ್ತದೆ ಇಂತಹ ಅಮಾನುಷ ಘಟನೆಗಳು..
ಮನೆ ಮಕ್ಕಳನ್ನೇ ದಶಕಗಟ್ಟಲೆ ಗೃಹ ಬಂಧನದಲ್ಲಿಡುವ ಸುದ್ದಿಗಳು ನಮ್ಮ ಕರ್ನಾಟಕ, ಭಾರತದಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಆದರೆ ಇಂತಹ ಅಮಾನುಷ ಘಟನೆಗಳು ನಮ್ಮಲ್ಲಷ್ಟೇ ಅಲ್ಲ, ಮುಂದುವರಿದ ದೇಶಗಳಲ್ಲೂ ಜರುಗುತ್ತವೆ
Updated By: ಸಾಧು ಶ್ರೀನಾಥ್​

Updated on: Dec 02, 2020 | 2:31 PM

ಮನೆ ಮಕ್ಕಳನ್ನೇ ದಶಕಗಟ್ಟಲೆ ಗೃಹ ಬಂಧನದಲ್ಲಿಡುವ ಸುದ್ದಿಗಳು ನಮ್ಮ ಕರ್ನಾಟಕ, ಭಾರತದಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಆದರೆ ಇಂತಹ ಅಮಾನುಷ ಘಟನೆಗಳು ನಮ್ಮಲ್ಲಷ್ಟೇ ಅಲ್ಲ, ಮುಂದುವರಿದ ದೇಶಗಳಲ್ಲೂ ಜರುಗುತ್ತವೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಸಿಕ್ಕಿದೆ.

ಸ್ವೀಡನ್​ ದೇಶದ ಸ್ಟಾಕ್​ಹೋಮ್​ನ ಮಹಿಳೆಯೋರ್ವಳು ತನ್ನ ಮಗನನ್ನು ಬರೋಬ್ಬರಿ 30 ವರ್ಷದಿಂದ ಗೃಹ ಬಂಧನದಲ್ಲಿ ಇರಿಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಕಳೆದ ತಿಂಗಳು ಮಹಿಳೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆಗ, ಸಂಬಂಧಿಯೋರ್ವರು ಆಕೆಯ ಮನೆಗೆ ಹೋಗಿದ್ದಾರೆ. ಮನೆಯಲ್ಲಿ ಬಂಧನದಲ್ಲಿದ್ದ ಮಹಿಳೆಯ ಆ ನತದೃಷ್ಟ ಮಗ ಕಣ್ಣಿಗೆ ಬಿದ್ದಿದ್ದಾನೆ. ಮನೆ ಭೂತ ಬಂಗಲೆಯಂತೆ ಭಾಸವಾಗುತ್ತಿತ್ತು ಎಂದು ಸಂಬಂಧಿ ಹೇಳಿದ್ದಾರೆ.

12 ವರ್ಷವಾಗುವ ಮೊದಲಿಂದಲೇ ಬಂಧನ..

ಮಗನಿಗೆ 12 ವರ್ಷ ಆಗುವ ಮೊದಲೇ ಈ ಮಹಾತಾಯಿ ತನ್ನದೇ ಕರುಳ ಕುಡಿಯನ್ನು ಗೃಹ ಬಂಧನದಲ್ಲಿರಿಸಿದ್ದಾಳೆ. ಈ ಕುರಿತು ನೆರೆ ಮನೆಯವರಿಗೆ ಕಿಂಚಿತ್ ಸುಳಿವೂ ಸಿಗದಂತೆ ನಿಭಾಯಿಸಿದ್ದಾಳೆ. ಅಕ್ಕ ಪಕ್ಕದ ಮನೆಯವರು ಈ ಹುಡುಗ ಯಾಕೋ ಶಾಲೆಗೆ ಹೋಗುತ್ತಿಲ್ಲ ಎಂದು ಒಮ್ಮೆ ಯೋಚಿಸಿದ್ದಾರೆ. ಹೆಚ್ಚು ತಲೆಕೆಡಿಸಿಕೊಳ್ಳದೇ, ಮಗನನ್ನು ಮನೆಯಲ್ಲೇ ಬೆಳೆಸುತ್ತಿರಬಹುದು ಎಂದು ಭಾವಿಸಿ ಸುಮ್ಮನಾಗಿದ್ದಾರೆ.

41 ವರ್ಷವಾದರೂ ಬೆಳೆದಿಲ್ಲ ಹಲ್ಲುಗಳು

ಆ ಬಂಧಿತ ವ್ಯಕ್ತಿಗೆ ಪೌಷ್ಠಿಕಾಂಶದ ಕೊರತೆಯಿಂದ 41 ವರ್ಷವಾದರೂ ಹಲ್ಲುಗಳೇ ಬೆಳೆದಿಲ್ಲ! ನಡೆದಾಡಲು ಮತ್ತು ಮಾತನಾಡಲೂ ಆಗದ ಸ್ಥಿತಿಯಲ್ಲಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಮಹಾತಾಯಿಯನ್ನು ಬಂಧಿಸಿದ್ದಾರೆ. ಆದರೆ, ಆಕೆ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾಳೆ.