Afghanistan Crisis: ಪ್ರಮುಖ ನಗರಗಳನ್ನು ವಶಪಡಿಸಿಕೊಂಡ ತಾಲೀಬಾನ್; ಅಫ್ಘಾನಿಸ್ತಾನದಲ್ಲಿನ ಪ್ರಮುಖ ಬೆಳವಣಿಗೆಗಳು ಏನೇನು?

| Updated By: ರಶ್ಮಿ ಕಲ್ಲಕಟ್ಟ

Updated on: Aug 15, 2021 | 12:37 PM

Taliban: ಇನ್ನೊಂದು ಬೆಳವಣಿಗೆಯಲ್ಲಿ ಬಂಡುಕೋರರು ಶನಿವಾರ ಕಂದಹಾರ್‌ನ ಮುಖ್ಯ ರೇಡಿಯೋ ಕೇಂದ್ರವನ್ನು ಸ್ವಾಧೀನಪಡಿಸಿಕೊಂಡರು ಮತ್ತು ಅದನ್ನು ವಾಯ್ಸ್ ಆಫ್ ಶೆರಿಯಾ (Voice of Sharia) ಅಥವಾ ಇಸ್ಲಾಮಿಕ್ ಲಾ (Islamic law) ಎಂದು ಮರುನಾಮಕರಣ ಮಾಡಿದ್ದಾರೆ

Afghanistan Crisis: ಪ್ರಮುಖ ನಗರಗಳನ್ನು ವಶಪಡಿಸಿಕೊಂಡ ತಾಲೀಬಾನ್; ಅಫ್ಘಾನಿಸ್ತಾನದಲ್ಲಿನ ಪ್ರಮುಖ ಬೆಳವಣಿಗೆಗಳು ಏನೇನು?
ಘಜನಿಯಲ್ಲಿ ತಾಲೀಬಾನ್ ಹೋರಾಟಗಾರರು
Follow us on

ಕಾಬೂಲ್: ಅಫ್ಘಾನಿಸ್ತಾನದ (Afghanistan) ಪ್ರಮುಖ ನಗರಗಳನ್ನು ತಾಲೀಬಾನ್ (Taliban) ವಶಕ್ಕೆ ತೆಗೆದುಕೊಳ್ಳುತ್ತಿದ್ದು  ಈ ನಡುವೆ ಶನಿವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ (Ashraf Ghani) ಅಫ್ಘಾನ್ ಮೇಲೆ ಯುದ್ಧವನ್ನು ಹೇರಲು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಮತ್ತಷ್ಟು ಹತ್ಯೆ ನಡೆಯಲಿದ್ದು ಕಳೆದ 20 ವರ್ಷಗಳ ಲಾಭ ನಷ್ಟ, ಸಾರ್ವಜನಿಕ ಆಸ್ತಿಯ ನಾಶ ಮತ್ತು ನಿರಂತರ ಅಸ್ಥಿರತೆಯನ್ನು ತರಲು ಅನುಮತಿಸುವುದಿಲ್ಲ ಎಂದು ಘನಿ ಹೇಳಿರುವುದಾಗಿ ಟೊಲೊ ನ್ಯೂಸ್ ( TOLOnews) ವರದಿ ಮಾಡಿದೆ. “ನಿಮ್ಮ ಅಧ್ಯಕ್ಷರಾಗಿ ನನ್ನ ಗಮನವು ಮತ್ತಷ್ಟು ಅಸ್ಥಿರತೆ, ಹಿಂಸೆ ಮತ್ತು ಜನರ ಸ್ಥಳಾಂತರವನ್ನು ತಡೆಯುವುದು ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ” ಎಂದು ಹೇಳಿದ ಘನಿ ಪರಿಸ್ಥಿತಿಯ ಬಗ್ಗೆ ಸ್ಥಳೀಯ ನಾಯಕರು ಮತ್ತು ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಸಮಾಲೋಚಿಸುತ್ತಿರುವುದಾಗಿ ಹೇಳಿದ್ದಾರೆ.

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಿಂದ ದಕ್ಷಿಣಕ್ಕೆ 80 ಕಿಲೋಮೀಟರ್‌ಗಿಂತ ಕಡಿಮೆ ದೂರದಲ್ಲಿರುವ ಲೋಗರ್ ಪ್ರಾಂತ್ಯವನ್ನು ತಾಲಿಬಾನ್ ವಶಪಡಿಸಿಕೊಂಡಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಲೋಗರ್‌ನ ಶಾಸಕರಾದ ಹೋಮಾ ಅಹ್ಮದಿ, ತಾಲಿಬಾನ್ ಈಗ ತನ್ನ ರಾಜಧಾನಿ ಸೇರಿದಂತೆ ಇಡೀ ಪ್ರಾಂತ್ಯವನ್ನು ನಿಯಂತ್ರಿಸುತ್ತಿದೆ. ನೆರೆಯ ಕಾಬೂಲ್ ಪ್ರಾಂತ್ಯದ ಜಿಲ್ಲೆಯನ್ನು ಕೂಡ ತಲುಪಿದೆ ಎಂದು ಹೇಳಿದ್ದಾರೆ.

ಇನ್ನೊಂದು ಬೆಳವಣಿಗೆಯಲ್ಲಿ ಬಂಡುಕೋರರು ಶನಿವಾರ ಕಂದಹಾರ್‌ನ ಮುಖ್ಯ ರೇಡಿಯೋ ಕೇಂದ್ರವನ್ನು ಸ್ವಾಧೀನಪಡಿಸಿಕೊಂಡರು ಮತ್ತು ಅದನ್ನು ವಾಯ್ಸ್ ಆಫ್ ಶೆರಿಯಾ (Voice of Sharia) ಅಥವಾ ಇಸ್ಲಾಮಿಕ್ ಲಾ (Islamic law) ಎಂದು ಮರುನಾಮಕರಣ ಮಾಡಿದ್ದಾರೆ. ತಾಲೀಬಾನ್ ಬಿಡುಗಡೆ ಮಾಡಿದ ವಿಡಿಯೊದಲ್ಲಿ ಇನ್ನು ಮುಂದೆ ಸುದ್ದಿ ಪ್ರಸಾರ ಮಾಡಲು ಮತ್ತು ಕುರಾನ್ ಪಠಿಸಲು ಇದನ್ನು ಬಳಸಲಾಗುವುದು ಎಂದು ಹೇಳಿದರು. ಸಂಗೀತವನ್ನು ಇನ್ನು ಮುಂದೆ ಪ್ಲೇ ಮಾಡಲಾಗುವುದಿಲ್ಲ ಎಂದು ಸಂಘಟನೆ ಹೇಳಿದೆ.

ರಾಜಧಾನಿ ಕಾಬೂಲ್ ಮೇಲೆ ದಾಳಿ ಹತ್ತಿರವಾಗಬಹುದು ಎಂಬ ಭಯ ಹೆಚ್ಚುತ್ತಿದೆ. “ಕಾಬೂಲ್ ನಗರ ಭಯಭೀತವಾಗಿದೆ ಮತ್ತು ಮುಂದೆ ಏನಾಗುತ್ತದೆಯೋ ಎಂಬ ಭಯವಿದೆ., ಮಹಿಳೆಯರಿಗೆ ಹಕ್ಕುಗಳಿಲ್ಲದಿದ್ದಾಗ, ಸಂಗೀತವು ನಿಷಿದ್ಧ ಮತ್ತು ಜೀವನಲ್ಲೇ ಇಲ್ಲದಿರುವ ಹಿಂದಿನ ನರ್ಷಗಳನ್ನು ನೆನೆದು ಅವರು ಭಯಭೀತರಾಗಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

“ಕಾಬೂಲ್ ನಲ್ಲಿ ಅಧಿಕಾರಿಗಳು ಮತ್ತು ರಾಜತಾಂತ್ರಿಕರು ತಾಲಿಬಾನ್ ಅಧಿಪತ್ಯವನ್ನು ಬಹಳ ಕಳವಳದಿಂದಲೇ ನೋಡುತ್ತಿದ್ದಾರೆ. ಕಾಬೂಲ್‌ನಲ್ಲಿ ರಾಜಕೀಯ ಪರಿಸ್ಥಿತಿಯು ವೇಗವಾಗಿ ತೆರೆದುಕೊಳ್ಳುತ್ತಿದೆ, ಮತ್ತು ನಾಯಕತ್ವದ ಬದಲಾವಣೆಯ ಊಹೆಗಳಿವೆ. ಬಹುಶಃ ಅಧಿಕಾರವನ್ನು ಹಂಚಿಕೊಳ್ಳುವ ವ್ಯವಸ್ಥೆಯು ರಕ್ತಪಾತವನ್ನು ನಿಲ್ಲಿಸಬಹುದು. ಆದಾಗ್ಯೂ ಈ ಬಗ್ಗೆ ಖಚಿತವಾದ ಮಾಹಿತಿ ಇಲ್ಲ.

ಮಜರ್ ಇ ಶರೀಫ್ ನಗರವೂ ತಾಲೀಬಾನ್ ಕೈವಶವಾದ ಬೆನ್ನಲ್ಲೇ ನೂರಾರು ಜನರು ಪಾಸ್‌ಪೋರ್ಟ್ ಕಚೇರಿಗೆ ನುಗ್ಗಿ, ಅಫ್ಘಾನಿಸ್ತಾನದಿಂದ ಹೊರಬರಲು ಕಾಯುತಿದ್ದಾರೆ.  ಆದರೆ ಶನಿವಾರ, ಉತ್ತರದ ಪ್ರಮುಖ ನಗರವಾದ ಮಜರ್-ಇ-ಶರೀಫ್ ತಾಲಿಬಾನ್‌ ಕೈವಶವಾಗುವ ಕೆಲವು ಗಂಟೆಗಳ ಮೊದಲು ಕಾರ್ಟೆ ಸೆಹ್ ಚಟುವಟಿಕೆಗಳಿಂದ ಗಿಜಿಗುಟ್ಟಿದ್ದು, ಜನರು ಗುಂಪು ಗುಂಪಾಗಿ ಮುಖ್ಯ ಪಾಸ್‌ಪೋರ್ಟ್ ಕಚೇರಿಗೆ ತೆರಳುವುದು ಕಂಡುಬಂತು.

ಅಫ್ಘಾನಿಸ್ತಾನದ ಜನರಿಗೆ ಸಹಾಯ ಮಾಡಲು 1000ಕ್ಕಿಂತಲೂ ಹೆಚ್ಚು ಅಮೆರಿಕ ಪಡೆ
ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರು ಶನಿವಾರ ಅಫ್ಘಾನಿಸ್ತಾನಕ್ಕೆ ಹೆಚ್ಚುವರಿ 1,000 ಯುಎಸ್ ಪಡೆಗಳನ್ನು ನಿಯೋಜಿಸಿದ್ದಾರೆ. ಸುಮಾರು ಎರಡು ದಶಕಗಳ ಯುದ್ಧದ ಸಮಯದಲ್ಲಿ ಮಿಲಿಟರಿಯೊಂದಿಗೆ ಕೆಲಸ ಮಾಡಿದ ಆಫ್ಘನ್ನರನ್ನು ಸ್ಥಳಾಂತರಿಸಲು ಅಮೆರಿಕ ಪಡೆಗಳು ಸಹಾಯ ಮಾಡುತ್ತವೆ.

 ಪ್ರಾಂತ್ಯ ತಾಲಿಬಾನ್​ಗೆ ಶರಣಾದ ಮಧ್ಯ ಅಫ್ಘಾನ್
ಅಫಘಾನಿಸ್ತಾನದ ಶಾಸಕರೊಬ್ಬರು ಕೇಂದ್ರ ಪ್ರಾಂತ್ಯದ ದಾಯ್ಕುಂಡಿಯು ಯಾವುದೇ ಹೋರಾಟವಿಲ್ಲದೆ ತಾಲಿಬಾನ್‌ಗೆ ಶರಣಾಗಿದ್ದಾರೆ ಎಂದು ಹೇಳುತ್ತಾರೆ. ಎಲ್ಲಾ ಪ್ರಾಂತೀಯ ಸ್ಥಾಪನೆಗಳನ್ನು ಬಂಡುಕೋರರಿಗೆ ಒಪ್ಪಿಸುವ ಮೊದಲು ಪ್ರಾಂತ್ಯದ ರಾಜಧಾನಿ ನಿಲಿಯಲ್ಲಿ ಕೇವಲ ಎರಡು ಗುಂಡಿನ ಶಬ್ದಗಳನ್ನು ಕೇಳಿಸಿದೆ ಎಂದು ಪ್ರಾಂತೀಯ ಶಾಸಕರಾದ ಸಯ್ಯದ್ ಮೊಹಮ್ಮದ್ ದೌದ್ ನಾಸಿರಿ ಹೇಳಿದ್ದಾರೆ.

ಇದನ್ನೂ ಓದಿ:  ಅಫ್ಘಾನಿಸ್ತಾನದ ಪ್ರಮುಖ ನಗರಗಳಾದ ಲಷ್ಕರ್ ಗಹ್, ಕಂದಹಾರ್ ವಶಪಡಿಸಿಕೊಂಡ ತಾಲೀಬಾನ್

ಇದನ್ನೂ ಓದಿ:  ಭದ್ರತಾ ಪಡೆಯನ್ನು ಮತ್ತೆ ಸಜ್ಜುಗೊಳಿಸುವುದು ನಮ್ಮ ಆದ್ಯತೆ ಎಂದ ಅಫ್ಘಾನ್​ ಅಧ್ಯಕ್ಷ ಅಶ್ರಫ್​ ಘನಿ; ರಾಜೀನಾಮೆ ಮಾತಿಲ್ಲ

(Taliban capture major cities Will not allow the imposed war says Afghanistan President Ashraf Ghani)