ಭದ್ರತಾ ಪಡೆಯನ್ನು ಮತ್ತೆ ಸಜ್ಜುಗೊಳಿಸುವುದು ನಮ್ಮ ಆದ್ಯತೆ ಎಂದ ಅಫ್ಘಾನ್​ ಅಧ್ಯಕ್ಷ ಅಶ್ರಫ್​ ಘನಿ; ರಾಜೀನಾಮೆ ಮಾತಿಲ್ಲ

Ashraf Ghani: ಅಫ್ಘಾನಿಸ್ತಾನದಲ್ಲಿ ಮತ್ತೆ ಶಾಂತಿ-ಸ್ಥಿರತೆ ಸ್ಥಾಪನೆಗೆ ಎದುರು ನೋಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರದಲ್ಲಿರುವ ಹಿರಿಯರು, ಪ್ರಮುಖ ರಾಜಕೀಯ ನಾಯಕರು, ಜನಪ್ರತಿನಿಧಿಗಳು, ಅಂತಾರಾಷ್ಟ್ರೀಯ ಸಹಭಾಗಿಗಳೊಂದಿಗೆ ನಾನು ಮಾತುಕತೆ ನಡೆಸುತ್ತಿದ್ದೇನೆ ಎಂದು ಅಶ್ರಫ್​ ಘನಿ ಹೇಳಿದ್ದಾರೆ.

ಭದ್ರತಾ ಪಡೆಯನ್ನು ಮತ್ತೆ ಸಜ್ಜುಗೊಳಿಸುವುದು ನಮ್ಮ ಆದ್ಯತೆ ಎಂದ ಅಫ್ಘಾನ್​ ಅಧ್ಯಕ್ಷ ಅಶ್ರಫ್​ ಘನಿ; ರಾಜೀನಾಮೆ ಮಾತಿಲ್ಲ
ಅಶ್ರಫ್​ ಘನಿ
Follow us
| Updated By: Lakshmi Hegde

Updated on:Aug 14, 2021 | 5:40 PM

ಅಫ್ಘಾನಿಸ್ತಾನ (Afghanistan)ವನ್ನು ತಾಲಿಬಾನ್​ ಹೋರಾಟಗಾರ (Taliban Fighters)ರು ಬಹುತೇಕ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾಗಿದೆ. ಅಫ್ಘಾನಿಸ್ತಾನದ ಒಂದೊಂದೇ ನಗರ, ಪ್ರಾಂತ್ಯಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಿರುವ ತಾಲಿಬಾನ್​, ಇಂದು ಉತ್ತರ ಅಫ್ಘಾನಿಸ್ತಾನದ ಪ್ರಮುಖ ನಗರವಾದ ಮಜರ್​ ಐ ಶರೀಫ್ (Mazar-i-Sharif)​ ಮೇಲೆ ಬಹುಹಂತದ ದಾಳಿ ನಡೆಸಿದೆ.  ಯುಎಸ್​ ತನ್ನ ಸೈನ್ಯ (US Army)ವನ್ನು ಈಗಾಗಲೇ ಶೇ.90ರಷ್ಟು ವಾಪಸ್​ ಕರೆಸಿಕೊಂಡಿದೆ. ಇನ್ನುಳಿದ ಸೈನಿಕರನ್ನು ಸೆಪ್ಟೆಂಬರ್​​ನಲ್ಲಿ ಕರೆಸಿಕೊಳ್ಳುವುದಾಗಿ ಹೇಳಿದೆ. ಅದಕ್ಕೂ ಮೊದಲೇ ತಾಲಿಬಾನ್​, ಪಶ್ಷಿಮ, ಉತ್ತರ ಮತ್ತು ದಕ್ಷಿಣ ಅಫ್ಘಾನಿಸ್ತಾನದ ಬಹುತೇಕ ಭಾಗಗಳನ್ನು ವಶಪಡಿಸಿಕೊಂಡಿದೆ. ಇದೆಲ್ಲದರ ಜತೆ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್​ ಘನಿ (Ashraf Ghani) ರಾಜೀನಾಮೆ ಕೊಡಬೇಕು ಎಂಬ ಕೂಗೂ ಹೆಚ್ಚಿದೆ.  

ಯುದ್ಧ ಸನ್ನಿವೇಶ ಇರುವ ಅಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನ್​ ಉಗ್ರರ ವಶವಾಗುತ್ತಿದೆ. ಹೀಗಾಗಿ ಅಶ್ರಫ್​ ಘನಿ ರಾಜೀನಾಮೆ ನೀಡುತ್ತಾರೆ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಜತೆ, ತಮ್ಮ ಕುಟುಂಬದೊಟ್ಟಿಗೆ ದೇಶವನ್ನೇ ಬಿಡಲಿದ್ದಾರೆ ಎಂಬುದು ಕೂಡ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿರುವ ಅಶ್ರಫ್​ ಘನಿ ತಮ್ಮ ರಾಜೀನಾಮೆ ಬಗ್ಗೆ ಯಾವುದೇ ಮಾತುಗಳನ್ನೂ ಆಡಿಲ್ಲ. ಇಂದು ಘನಿ ಅವರ ರೆಕಾರ್ಡೆಡ್​ ಸಂದೇಶ ಆ ದೇಶದ ಜನರನ್ನು ತಲುಪಿದೆ. ಅಫ್ಘಾನಿಸ್ತಾನವನ್ನು ತಾಲೀಬಾನ್ ಸ್ವಾಧೀನಕ್ಕೆ ಪಡೆಯುತ್ತಿರುವುದು ದೇಶಕ್ಕೆ ಎದುರಾಗಿರುವ ದೊಡ್ಡ ಬೆದರಿಕೆ. ಆದರೂ ಪರಿಸ್ಥಿತಿಗಳು ನಿಯಂತ್ರಣದಲ್ಲಿವೆ ಎಂದಿದ್ದಾರೆ. ಆದರೆ ತಮ್ಮ ಸಂದೇಶದ ಕೊನೆವರೆಗೂ ತಾವು ರಾಜೀನಾಮೆ ನೀಡುವ ಬಗ್ಗೆ ಯಾವುದೇ ಒಂದೂ ಮಾತುಗಳನ್ನು ಆಡಲಿಲ್ಲ.

ಹೌದು..ಅಫ್ಘಾನಿಸ್ತಾನಕ್ಕೆ ಸದ್ಯ ಬಹುದೊಡ್ಡ ಬೆದರಿಕೆ ಎದುರಾಗಿದೆ. ಹಾಗಾಗಿ ಅಫ್ಘಾನ್​ ರಕ್ಷಣೆ ಮತ್ತು ಅದಕ್ಕಾಗಿ ನಮ್ಮ ಭದ್ರತಾ ಪಡೆಯನ್ನು ಮತ್ತೆ ಸಜ್ಜುಗೊಳಿಸುವುದು ಆದ್ಯತೆಯಾಗಿದೆ. ಈಗ ಉಂಟಾಗಿರುವ ಯುದ್ಧ ಸನ್ನಿವೇಶವನ್ನು ಶಾಂತಗೊಳಿಸುವ ನಿಟ್ಟಿನಲ್ಲಿ ಸಮಾಲೋಚನೆ ಪ್ರಕ್ರಿಯೆ ನಡೆಯುತ್ತಲೇ ಇದೆ.  ಸಂಪೂರ್ಣವಾಗಿ ಯುದ್ಧ ಘೋಷಣೆಯಾಗಲು ನಾನು ಅವಕಾಶ ಕೊಡುವುದಿಲ್ಲ. ಈ ಮೂಲಕ ಐತಿಹಾಸಿಕ ಧ್ಯೇಯಕ್ಕೆ ಒತ್ತು ಕೊಡುತ್ತೇನೆ. ಯುದ್ಧದಿಂದ ಅನೇಕ ಜನರ ಜೀವ ಹೋಗುತ್ತದೆ. ಅಂಥ ಹಿಂಸಾಚಾರ ಬೇಕಾಗಿಲ್ಲ ಎಂದೂ ಅಧ್ಯಕ್ಷರು ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಮತ್ತೆ ಶಾಂತಿ-ಸ್ಥಿರತೆ ಸ್ಥಾಪನೆಗೆ ಎದುರು ನೋಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರದಲ್ಲಿರುವ ಹಿರಿಯರು, ಪ್ರಮುಖ ರಾಜಕೀಯ ನಾಯಕರು, ಜನಪ್ರತಿನಿಧಿಗಳು, ಅಂತಾರಾಷ್ಟ್ರೀಯ ಸಹಭಾಗಿಗಳೊಂದಿಗೆ ನಾನು ಮಾತುಕತೆ ನಡೆಸುತ್ತಿದ್ದೇನೆ. ತಾಲಿಬಾನ್​ನಿಂದ ಎದುರಾಗಿರುವ ಸಂಕಷ್ಟಕ್ಕೆ ಎಲ್ಲ ರೀತಿಯ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ಸುಮಾರು 20 ಸಾವಿರ ನಿರಾಶ್ರಿತರಿಗೆ ಪುನರ್ವಸತಿ ಘೋಷಿಸಿದ ಕೆನಡಾ

ಅಫ್ಘಾನಿಸ್ತಾನದಲ್ಲಿ ಯುದ್ಧ ಸನ್ನಿವೇಶ ಸೃಷ್ಟಿಸಿ, ಭಾರತವನ್ನು ಹೊಗಳಿದ ತಾಲಿಬಾನ್​..

Published On - 3:49 pm, Sat, 14 August 21