ಕಾಬೂಲ್ ಪತನ: ಮತ್ತೆ ತಾಲೀಬಾನ್ ವಶಕ್ಕೆ ಅಫ್ಗಾನಿಸ್ತಾನ, ಮುಲ್ಲಾ ಅಬ್ದುಲ್ ನೂತನ ಅಧ್ಯಕ್ಷ

Taliban Enters Kabul: ಅಫ್ಗಾನಿಸ್ತಾನ ರಾಜಧಾನಿ ಕಾಬೂಲ್ ನಗರವನ್ನು ತಾಲೀಬಾನ್​ ಪಡೆಗಳಿಗೆ ಒಪ್ಪಿಸಲು ಸರ್ಕಾರ ನಿರ್ಧರಿಸಿದೆ. ಶರಣಾಗತಿಯ ಅಧಿಕೃತ ಘೋಷಣೆ ಹೊರಬಿದ್ದಿದ್ದು, ವಿಧಿವಿಧಾನಗಳು ಆರಂಭವಾಗಿವೆ.

ಕಾಬೂಲ್ ಪತನ: ಮತ್ತೆ ತಾಲೀಬಾನ್ ವಶಕ್ಕೆ ಅಫ್ಗಾನಿಸ್ತಾನ, ಮುಲ್ಲಾ ಅಬ್ದುಲ್ ನೂತನ ಅಧ್ಯಕ್ಷ
ಕಾಬೂಲ್​ನಲ್ಲಿ ತಾಲೀಬಾನ್ ಉಗ್ರರು
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 15, 2021 | 6:08 PM

ಕಾಬೂಲ್: ತಾಲಿಬಾನ್​ ಉಗ್ರಗಾಮಿಗಳಿಗೆ ಅಫ್ಗಾನಿಸ್ತಾನ ಸರ್ಕಾರ ಅಧಿಕೃತವಾಗಿ ಶರಣಾಗಿದ್ದು, ಮುಲ್ಲಾ ಅಬ್ದುಲ್ ಘನಿ ಬರಾದಾರ್  ಅವರನ್ನು ದೇಶದ ನೂತನ ಅಧ್ಯಕ್ಷರಾಗಿ ಘೋಷಿಸಲಾಗಿದೆ. ಅಫ್ಗಾನಿಸ್ತಾನ ರಾಜಧಾನಿ ಕಾಬೂಲ್ ನಗರವನ್ನು ತಾಲೀಬಾನ್​ ಪಡೆಗಳಿಗೆ ಒಪ್ಪಿಸಲು ಸರ್ಕಾರ ನಿರ್ಧರಿಸಿದೆ. ಶರಣಾಗತಿಯ ಅಧಿಕೃತ ಘೋಷಣೆ ಹೊರಬಿದ್ದಿದ್ದು, ವಿಧಿವಿಧಾನಗಳು ಆರಂಭವಾಗಿವೆ. ಶಾಂತಿಯುವಾಗಿ ಅಧಿಕಾರ ಹಸ್ತಾಂತರಿಸುವುದಾಗಿ ಅಫ್ಗಾನಿಸ್ತಾನದ ಒಳಾಡಳಿತ ಇಲಾಖೆ (ಗೃಹ ಇಲಾಖೆ) ತಿಳಿಸಿದೆ ಎಂದು ಹಲವು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಉಗ್ರಗಾಮಿಗಳು ಕಾಬೂಲ್ ನಗರವನ್ನು ಸುತ್ತುವರಿದಿದ್ದಾರೆ. ಸುಮಾರು 40 ಲಕ್ಷ ಜನರು ವಾಸವಿರುವ ಕಾಬೂಲ್ ನಗರದಲ್ಲಿ ಉಗ್ರಗಾಮಿಗಳು ಹಾಗೂ ಸೇನಾಪಡೆಗಳ ಸಂಘರ್ಷ ನಡೆದರೆ ನಾಗರಿಕರ ಸಾವುನೋವಿನ ಸಂಖ್ಯೆ ಹೆಚ್ಚಾಗುತ್ತದೆ ಅಧ್ಯಕ್ಷ ಅಶ್ರಫ್ ಘನಿ ಶರಣಾಗತಿಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಅಫ್ಗನ್ ಅಧ್ಯಕ್ಷರ ನಿವಾಸದಲ್ಲಿಯೇ ತಾಲೀಬಾನ್ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಯುತ್ತಿದೆ.

ಸೂಚನೆ ನೀಡುವವರೆಗೆ ಕಾಬೂಲ್ ನಗರ ಪ್ರವೇಶಿಸಬಾರದು ಎಂದು ತಾಲೀಬಾನ್ ಉಗ್ರರಿಗೆ ಸರ್ಕಾರ ಸೂಚನೆ ನೀಡಿದೆ. ತಾಲೀಬಾನ್ ಮತ್ತು ಸರ್ಕಾರದ ಪ್ರತಿನಿಧಿಗಳ ನಡುವೆ ಮಾತುಕತೆ ನಡೆಯುತ್ತಿದ್ದು, ಅಧಿಕಾರ ಹಸ್ತಾಂತರದ ವಿಧಿವಿಧಾನಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಸರ್ಕಾರಿ ಪಡೆಗಳು ಉಗ್ರಗಾಮಿಗಳಿಗೆ ಶರಣಾಗುವುದರೊಂದಿಗೆ ಇಡೀ ದೇಶ ಈಗ ಇಸ್ಲಾಮಿಕ್ ಎಮಿರೇಟ್ಸ್‌ ನಿಯಂತ್ರಣಕ್ಕೆ ಬಂದಿದೆ. ಜನದಟ್ಟಣೆ ಹೆಚ್ಚಾಗಿರುವ ಕಾಬೂಲ್​ ನಗರದಲ್ಲಿ ಸಂಘರ್ಷ ನಡೆಸುವುದಿಲ್ಲ ಎಂದು ತಾಲೀಬಾನ್ ಈ ಮೊದಲೂ ಘೋಷಿಸಿತ್ತು.

ಅಧಿಕಾರ ಹಸ್ತಾಂತರ ಪ್ರಕ್ರಿಯೆ ಮುಗಿದ ನಂತರ ಪ್ರತಿಕ್ರಿಯಿಸಿರುವ ತಾಲೀಬಾನ್ ವಕ್ತಾರರು, ನಾವು ಯಾರ ಮೇಲೂ ಪ್ರತೀಕಾರ ತೆಗೆದುಕೊಳ್ಳಲು ಬಯಸುವುದಿಲ್ಲ. ಮಿಲಿಟರಿ, ನಾಗರಿಕ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸುವುದಿಲ್ಲ. ಕಾಬೂಲ್ ಜೈಲು ವಶಪಡಿಸಿಕೊಂಡ ತಾಲಿಬಾನ್ ಉಗ್ರಗಾಮಿ ಸಂಘಟನೆ ಜೈಲಿನಲ್ಲಿದ್ದ 5 ಸಾವಿರ ಕೈದಿಗಳು ಬಿಡುಗಡೆ ಮಾಡಿದೆ.

ಭವಿಷ್ಯದಲ್ಲಿ ಇಸ್ಲಾಮಿಕ್ ವ್ಯವಸ್ಥೆ ಆಧರಿತ ಜವಾಬ್ದಾರಿಯುತ ಸರ್ಕಾರ ರಚಿಸಲಾಗುವುದು. ಇದು ಎಲ್ಲರಿಗೂ ಒಪ್ಪಿತವಾಗುವಂತೆ ಕಾರ್ಯನಿರ್ವಹಿಸುತ್ತದೆ ಎಂದು ತಾಲೀಬಾನ್ ಹೇಳಿದೆ.

ಕಾಬೂಲ್​ನಲ್ಲಿರುವ ವಿದೇಶಿ ಪ್ರಜೆಗಳು ಹೆಲಿಕಾಪ್ಟರ್​ಗಳ ಮೂಲಕ ತರಾತುರಿಯಲ್ಲಿ ನಗರ ತೊರೆಯುತ್ತಿದ್ದಾರೆ. ಅಮೆರಿಕ ದೂತಾವಾಸದ ಸುತ್ತಮುತ್ತಲು ಹೆಲಿಕಾಪ್ಟರ್​ ಹಾರಾಟ ಹೆಚ್ಚಾಗಿದೆ. ಕೆಲ ಹೆಲಿಕಾಪ್ಟರ್​ಗಳು ಕ್ಷಿಪಣಿ ನಿರೋಧ ಟ್ರ್ಯಾಪ್​ಗಳನ್ನೂ ಆಗಾಗ ಬಳಸುತ್ತಿವೆ. ಕಾಬೂಲ್​ನಲ್ಲಿ ಗೊಂದಲ, ಭಯದ ವಾತಾವರಣ ನಿರ್ಮಾಣವಾಗಿದೆ.

ಅಫ್ಗಾನಿಸ್ತಾನದ ಅಧ್ಯಕ್ಷರ ಅರಮನೆಯಲ್ಲಿ ತಾಲಿಬಾನ್ ಉಗ್ರಗಾಮಿ ಸಂಘಟನೆಗೆ ದೇಶದ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಆರಂಭವಾಗಿದೆ. ಅಫ್ಗಾನಿಸ್ತಾನ ಸರ್ಕಾರ ಮತ್ತು ನಿಯಂತ್ರಣದಲ್ಲಿದ್ದ ಸೇನೆ ತಾಲೀಬಾನಿಗಳಿಗೆ ಸಂಪೂರ್ಣವಾಗಿ ಶರಣಾಗಿದೆ.

ಭಾರತ ದೂತಾವಾಸ ಸಿಬ್ಬಂದಿ ಸ್ಥಳಾಂತರ ಆಫ್ಘನ್‌ ರಾಜಧಾನಿ ಕಾಬೂಲ್‌ ನಗರವನ್ನು ತಾಲೀಬಾನ್ ಉಗ್ರರು ವಶಕ್ಕೆ ಪಡೆದುಕೊಂಡ ನಂತರ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಸ್ಥಳಾಂತರಿಸಲು ಭಾರತ ಸರ್ಕಾರ ತೀರ್ಮಾನಿಸಿದೆ. ಸದ್ಯಕ್ಕೆ ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಿಕೊಡಲಾಗುತ್ತಿದೆ.

ಅಮೆರಿಕ ಸರ್ಕಾರ ಸಹ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಸ್ಥಳಾಂತರಿಸುತ್ತಿದ್ದು, ವಿಮಾನಗಳನ್ನು ಬಳಸುತ್ತಿದೆ.

(Afghanistan Government Collapses Taliban Takes Control of Kabul)

ಇದನ್ನೂ ಓದಿ: Afghanistan Crisis: ಪ್ರಮುಖ ನಗರಗಳನ್ನು ವಶಪಡಿಸಿಕೊಂಡ ತಾಲೀಬಾನ್; ಅಫ್ಘಾನಿಸ್ತಾನದಲ್ಲಿನ ಪ್ರಮುಖ ಬೆಳವಣಿಗೆಗಳು ಏನೇನು?

ಇದನ್ನೂ ಓದಿ: Tv9 Exclusive: ಅಫ್ಗಾನಿಸ್ತಾನದಿಂದ ಟಿವಿ9 ಗ್ರೌಂಡ್​ ರಿಪೋರ್ಟ್​: ಶಾಂಕ್ ವಾಯುನೆಲೆ ಸಮೀಪ ಅಫ್ಗನ್-ತಾಲೀಬಾನ್ ಸಂಘರ್ಷ

Published On - 3:22 pm, Sun, 15 August 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ