Tv9 Exclusive: ಅಫ್ಗಾನಿಸ್ತಾನದಿಂದ ಟಿವಿ9 ಗ್ರೌಂಡ್​ ರಿಪೋರ್ಟ್​: ಶಾಂಕ್ ವಾಯುನೆಲೆ ಸಮೀಪ ಅಫ್ಗನ್-ತಾಲೀಬಾನ್ ಸಂಘರ್ಷ

Tv9 Exclusive: ಅಫ್ಗಾನಿಸ್ತಾನದಿಂದ ಟಿವಿ9 ಗ್ರೌಂಡ್​ ರಿಪೋರ್ಟ್​: ಶಾಂಕ್ ವಾಯುನೆಲೆ ಸಮೀಪ ಅಫ್ಗನ್-ತಾಲೀಬಾನ್ ಸಂಘರ್ಷ
ಅಫ್ಗಾನಿಸ್ತಾನದ ಗುಪ್ತ ಸೆರೆಮೆಯೊಂದರಲ್ಲಿ ತಾಲೀಬಾನ್ ಉಗ್ರರನ್ನು ಮಾತನಾಡಿಸುತ್ತಿರುವ ಟಿವಿ9 ಭಾರತ್​ವರ್ಷ್​ ವರದಿಗಾರ ಸುಮಿತ್ ಚೌಧರಿ

ತಾಲೀಬಾನ್ ಉಗ್ರರ ವಿರುದ್ಧ ಅಫ್ಗನ್ ಸೇನೆ ನಡೆಸುತ್ತಿರುವ ಕಾರ್ಯಾಚರಣೆ ಕುರಿತು ಟಿವಿ9 ಭಾರತ್​ವರ್ಷ್ ಸುದ್ದಿವಾಹಿನಿಯ​ ಪ್ರತಿನಿಧಿ ಸುಮಿತ್ ಚೌಧರಿ ವರದಿ ಮಾಡಿದ್ದಾರೆ. ಶಾಂಕ್ ವಾಯುನೆಲೆಯ ಸಮೀಪ ನಡೆಯುತ್ತಿರುವ ಕಾರ್ಯಾಚರಣೆಯ ಮಾಹಿತಿಯನ್ನು ಅವರು ನೀಡಿದ್ದಾರೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Aug 02, 2021 | 10:41 PM


ದೆಹಲಿ: ಅಫ್ಗಾನಿಸ್ತಾನದ ಶಾಂಕ್ ವಾಯುನೆಲೆ ಸಮೀಪ ತಾಲೀಬಾನ್ ಮತ್ತು ಅಫ್ಗನ್ ಸೇನೆಯ ನಡುವೆ ಸಂಘರ್ಷ ತೀವ್ರಗೊಳ್ಳುತ್ತಿದೆ. ತಾಲೀಬಾನ್ ಉಗ್ರರ ವಿರುದ್ಧ ಅಫ್ಗನ್ ಸೇನೆ ನಡೆಸುತ್ತಿರುವ ಕಾರ್ಯಾಚರಣೆ ಕುರಿತು ಟಿವಿ9 ಭಾರತ್​ವರ್ಷ್ ಸುದ್ದಿವಾಹಿನಿಯ​ ಪ್ರತಿನಿಧಿ ಸುಮಿತ್ ಚೌಧರಿ ವರದಿ ಮಾಡಿದ್ದಾರೆ. ಶಾಂಕ್ ವಾಯುನೆಲೆಯ ಸಮೀಪ ನಡೆಯುತ್ತಿರುವ ಕಾರ್ಯಾಚರಣೆಯ ಮಾಹಿತಿಯನ್ನು ಅವರು ನೀಡಿದ್ದಾರೆ.

ಶಾಂಕ್ ವಾಯುನೆಲೆಯ ಸಮೀಪ ಅಫ್ಗನ್ ಸೇನೆ ಮತ್ತು ತಾಲೀಬಾನ್ ಉಗ್ರರ ನಡುವೆ ಯುದ್ಧ ನಡೆಯುತ್ತಿತ್ತು. ತಾಲೀಬಾನಿಗಳನ್ನು ಸೇನಾ ಸಿಬ್ಬಂದಿ ಬಂಧಿಸಿದರು. ಇವರು ತಾಲೀಬಾನ್ ಉಗ್ರರೋ ಅಥವಾ ಪಾಕಿಸ್ತಾನದ ಮಿಲಿಟರಿಗೆ ಸೇರಿದವರೋ ಎಂಬ ಬಗ್ಗೆ ವಿಚಾರಣೆ ನಡೆಸಲಾಯಿತು. ಬಂಧಿತರ ಕೈಕಟ್ಟಿ ಹಾಕಲಾಗಿದ್ದು, ಸೆರೆಮನೆಗೆ ಕರೆದೊಯ್ಯಲಾಯಿತು.

ಪಾಕಿಸ್ತಾನದ ಗಡಿಯಲ್ಲಿರುವ ಅಫ್ಗಾನಿಸ್ತಾನದ ಶಾಂಕ್ ವಾಯುನೆಲೆಯಲ್ಲಿ ಈ ಮೊದಲು ಅಮೆರಿಕ ಸೇನಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. 8000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಅಲ್ಲಿದ್ದರು. ಡ್ರೋಣ್ ಸೇರಿದಂತೆ ಹತ್ತಾರು ಬಗೆಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಈ ನೆಲೆಯಲ್ಲಿ ಶೇಖರಿಸಿಡಲಾಗಿತ್ತು. ಅಮೆರಿಕ ಸೇನಾಪಡೆಗಳು ಸ್ವದೇಶಕ್ಕೆ ಮರಳಿದ ನಂತರ ಈ ನೆಲೆಯಲ್ಲೀಗ ಅಫ್ಗನ್ ಸೇನಾಪಡೆಗಳು ನೆಲೆ ನಿಂತಿವೆ.

ಅಫ್ಗನ್ ಸೈನಿಕರಿಂದ ವಾಯುದಾಳಿ; 254 ಉಗ್ರರ ಹತ್ಯೆ
ಅಫ್ಗಾನಿಸ್ತಾನದ ಕಂದಹಾರ್ ವಿಮಾನ ನಿಲ್ದಾಣದ ಮೇಲೆ ತಾಲಿಬಾನ್​ ಉಗ್ರರು ರಾಕೆಟ್ ದಾಳಿ ಬೆನ್ನಲ್ಲೇ ಅಫ್ಗನ್ ರಕ್ಷಣಾ ಪಡೆಗಳು ತಾಲೀಬಾನ್​ ಉಗ್ರರ ನೆಲೆಗಳ ಮೇಲೆ ವಾಯುದಾಳಿ ನಡೆಸಿವೆ. ಉಗ್ರರ ಒಟ್ಟು 13 ವಿವಿಧ ನೆಲೆಗಳ ಮೇಲೆ ನಡೆದ ವಾಯುದಾಳಿಯಲ್ಲಿ 254 ಉಗ್ರರು ಹತರಾಗಿದ್ದು, 97 ಮಂದಿ ಗಾಯಗೊಂಡಿದ್ದಾರೆ.

ಅಮೆರಿಕ ಸೈನಿಕರು ಅಫ್ಗಾನಿಸ್ತಾನದಿಂದ ಹಿಂದೆ ಸರಿದ ನಂತರ ತಾಲೀಬಾನ್​ ಉಗ್ರರು ಮತ್ತು ಅಫ್ಗನ್ ಭದ್ರತಾ ಪಡೆಗಳ ನಡುವಣ ಸಂಘರ್ಷ ಹೆಚ್ಚಾಗಿದೆ.

(Ground Report From Afghanistan Taliban Afghan Army Fight near Shank Air Base)

ಇದನ್ನೂ ಓದಿ: ಅಫ್ಗನ್ ಅಶಾಂತಿ: ತಾಲೀಬಾನ್ ವಶಕ್ಕೆ ಕಂದಹಾರ್ ಜಿಲ್ಲೆ, ತಜಕಿಸ್ತಾನಕ್ಕೆ ಓಡಿಹೋದ ಅಫ್ಗಾನಿಸ್ತಾನದ ಸೇನಾಪಡೆ

ಇದನ್ನೂ ಓದಿ: ತಾಲಿಬಾನ್ ಹೊಸ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಿದ್ದಂತೆ ರಾಜತಾಂತ್ರಿಕ, ಭದ್ರತಾ ಸಿಬ್ಬಂದಿಯನ್ನು ಕಂದಹಾರ್‌ನಿಂದ ಸ್ಥಳಾಂತರಿಸಿದ ಭಾರತ


Follow us on

Related Stories

Most Read Stories

Click on your DTH Provider to Add TV9 Kannada