AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pink Lake: ಇಲ್ಲಿನ ನದಿಗೆ ಗುಲಾಬಿ ರಂಗು; ಬಣ್ಣ ಬದಲಾಯಿಸಿದ ನೀರಿನಿಂದ ಆತಂಕ ಹೆಚ್ಚಾಗಿದ್ಯಾಕೆ?

ರಾಸಾಯನಿಕಗಳು ಬೆರೆತ ಕಾರಣ ಅರ್ಜೆಂಟೀನಾದ ನದಿ ಗುಲಾಬಿಯಾಗಿದ್ದು, ಈ ನೀರನ್ನು ಬಳಸಿದರೆ ಏನಾದರೂ ರೋಗ ಬರಬಹುದು ಎಂದು ಸುತ್ತಮುತ್ತಲಿನ ಜನರು ಆತಂಕಕ್ಕೀಡಾಗಿದ್ದಾರೆ.

Pink Lake: ಇಲ್ಲಿನ ನದಿಗೆ ಗುಲಾಬಿ ರಂಗು; ಬಣ್ಣ ಬದಲಾಯಿಸಿದ ನೀರಿನಿಂದ ಆತಂಕ ಹೆಚ್ಚಾಗಿದ್ಯಾಕೆ?
ಪಿಂಕ್ ನದಿ
TV9 Web
| Edited By: |

Updated on:Aug 02, 2021 | 6:38 PM

Share

ನೀರಿಗೆ ತನ್ನದೇ ಆದ ಯಾವ ಬಣ್ಣವೂ ಇರುವುದಿಲ್ಲ. ಸಮುದ್ರದಲ್ಲಿ ನಿಂತ ನೀರು ತಿಳಿನೀಲಿ ಬಣ್ಣದಲ್ಲಿ ಕಾಣುತ್ತದೆ. ಕೊಳಚೆ ತುಂಬಿದ ನೀರು ಕಪ್ಪಾಗಿ ಕಾಣುತ್ತದೆ. ಆದರೆ, ಅರ್ಜೆಂಟಿನಾದ ಪಟಗೋನಿಯಾದ ಕರಾವಳಿಯ ನದಿಗಳೆಲ್ಲವೂ ಗುಲಾಬಿ ಬಣ್ಣಕ್ಕೆ ತಿರುಗಿದೆ. ಎಲ್ಲಿ ನೋಡಿದರೂ ಹರಡಿನಿಂತಿರುವ ಗುಲಾಬಿ ಬಣ್ಣದ ನದಿಗಳ ದೃಶ್ಯವನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

ಅರ್ಜೆಂಟೀನಾದ ಕರಾವಳಿ ತೀರದ ಲಗೂನ್ ನದಿಯ ನೀರು ಕಡು ಗುಲಾಬಿ ಬಣ್ಣಕ್ಕೆ ತಿರುಗಲು ಕಾರಣವೇನು? ರಾಸಾಯನಿಕಗಳು ಬೆರೆತ ಕಾರಣ ಇಲ್ಲಿನ ನದಿ ಗುಲಾಬಿಯಾಗಿದ್ದು, ಈ ನೀರನ್ನು ಬಳಸಿದರೆ ಏನಾದರೂ ರೋಗ ಬರಬಹುದು ಎಂದು ಸುತ್ತಮುತ್ತಲಿನ ಜನರು ಆತಂಕಕ್ಕೀಡಾಗಿದ್ದಾರೆ. ‌ಅರ್ಜೆಂಟಿನಾದ ಹೊರವಲಯದಲ್ಲಿರುವ ಈ ನದಿಗೆ ಸ್ಥಳೀಯ ಕೈಗಾರಿಕೆಗಳು ತಮ್ಮ ರಾಸಾಯನಿಕಗಳು ಅಥವಾ ಸಂಸ್ಕರಿಸಿದ ನೀರನ್ನು ಬಿಡುತ್ತಿವೆ. ಈ ನದಿಗೆ ವಿಷಪೂರಿತ ರಾಸಾಯನಿಕಗಳು ಸೇರ್ಪಡೆಯಾಗುತ್ತಿರುವುದರಿಂದ ನೀರು ಸಂಪೂರ್ಣವಾಗಿ ಕಲುಷಿತಗೊಂಡು ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ.

pink lake

ಗುಲಾಬಿ ನದಿ

ಕೈಗಾರಿಕೆಗಳು ಇಡೀ ನದಿಯ ನೀರು ಕಲುಷಿತವಾಗುವಂತೆ ಮಾಡಿರುವುದಕ್ಕೆ ಪರಿಸರವಾದಿಗಳು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲಿನ ಸುತ್ತಮುತ್ತಲಿನ ಕಾರ್ಖಾನೆಗಳು, ಕೈಗಾರಿಕೆಗಳ ಎದುರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಈ ಕಲುಷಿತವಾಗಿರುವ ನದಿ ನೀರಿನಲ್ಲಿರುವ ಚಿಪ್ಪುಮೀನುಗಳನ್ನು ಸಂರಕ್ಷಿಸಲು ಸೋಡಿಯಂ ಸಲ್ಫೈಟ್‌ ಹಾಕಿರುವುದರಿಂದ ನದಿ ನೀರೆಲ್ಲ ಗುಲಾಬಿ ಬಣ್ಣವಾಗಿದೆ ಎಂಬ ಅನುಮಾನವೂ ವ್ಯಕ್ತವಾಗಿದೆ.

pink lake

ಗುಲಾಬಿ ನದಿ

ಅಲ್ಲದೆ, ಲಗೂನ್‌ ನದಿಯ ಸುತ್ತಲಿನ ದುರ್ವಾಸನೆ ಮತ್ತು ಇತರ ಪರಿಸರ ಸಮಸ್ಯೆಗಳ ಬಗ್ಗೆ ನಿವಾಸಿಗಳು ಬಹಳ ವರ್ಷಗಳಿಂದ ದೂರು ನೀಡುತ್ತಿದ್ದಾರೆ. ಆದರೂ ಕಾರ್ಖಾನೆಗಳು, ಕೈಗಾರಿಕೆಗಳು ತ್ಯಾಜ್ಯವನ್ನು ನದಿಗೆ ಬಿಡುವುದನ್ನು ಇನ್ನೂ ನಿಲ್ಲಿಸಿಲ್ಲ. ಇದರಿಂದ ನೀರಿನ ದಡದಲ್ಲಿ ಗಬ್ಬು ವಾಸನೆ ಹೆಚ್ಚಾಗಿದ್ದು, ಅಕ್ಕಪಕ್ಕದಲ್ಲಿರುವ ಮನೆಗಳಲ್ಲಿ ವಾಸ ಮಾಡುವುದು ಕೂಡ ಕಷ್ಟವಾಗಿದೆ.

ಇದನ್ನೂ ಓದಿ: Viral News: 2 ಲಕ್ಷ ರೂ.ಗೆ ಮಾರಾಟವಾಯ್ತು 90 ಪೈಸೆಯ ಚಮಚ! ಹರಾಜಿಗೆ ಹಾಕಿದ್ದ ಮಾಲೀಕನೇ ಶಾಕ್

Viral News: 2 ಲಕ್ಷ ರೂ.ಗೆ ಮಾರಾಟವಾಯ್ತು 90 ಪೈಸೆಯ ಚಮಚ! ಹರಾಜಿಗೆ ಹಾಕಿದ್ದ ಮಾಲೀಕನೇ ಶಾಕ್

(Lakes and Rivers in Argentina turn pink Here is why its a worrying sign)

Published On - 6:37 pm, Mon, 2 August 21

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್