ಕಿಮ್ ಜಾಂಗ್ ಉನ್ ಆರೋಗ್ಯಕ್ಕೇನಾಯಿತು? ಮತ್ತೊಂದಿಷ್ಟು ಅನುಮಾನ ಹುಟ್ಟಿಸಿದ ಸರ್ವಾಧಿಕಾರಿಯ ತಲೆ
Kim Jong Un: ಕಳೆದ ವರ್ಷ ಕಿಮ್ ಜಾಂಗ್ ಉನ್ ಕೆಲವು ತಿಂಗಳುಗಳ ಕಾಲ ನಾಪತ್ತೆಯಾಗಿದ್ದರು. ಅವರ ಜೀವವೇ ಹೋಗಿದೆ ಎನ್ನುವಷ್ಟರ ಮಟ್ಟಿಗೆ ಸುದ್ದಿ ಹರಡಿತ್ತು. ಅದಾದ ಮೇಲೆ ಏಕಾಏಕಿ ಒಂದು ದಿನ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.
ಅದೇನೋ ಗೊತ್ತಿಲ್ಲ, ಉತ್ತರ ಕೊರಿಯಾ (North Korea) ಸರ್ವಾಧಿಕಾರಿ ಕಿಮ್ ಜಾಂಗ್ ಉನ್ (Kim Jong Un) ಅವರ ಆರೋಗ್ಯದ ವಿಚಾರ ಪದೇಪದೆ ಬೆಳಕಿಗೆ ಬರುತ್ತಿದೆ. ಇತ್ತೀಚೆಗೆ ಕಿಮ್ ಜಾಂಗ್ ಉನ್ ತುಂಬ ಸಪೂರ ಆಗಿದ್ದಾರೆ ಎಂಬ ವಿಷಯ ಬಹುದೊಡ್ಡ ಸುದ್ದಿಯಾಗಿತ್ತು. ಕಿಮ್ ಜಾಂಗ್ ಉನ್ ತುಂಬ ತೂಕ ಕಳೆದುಕೊಂಡಿದ್ದಾರೆ. ಅವರಿಗೇನೋ ಆರೋಗ್ಯ ಸಮಸ್ಯೆ ಇರಬಹುದು ಎಂದೇ ಅಂತಾರಾಷ್ಟ್ರೀಯ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು. ಈ ಬಗ್ಗೆ ದಕ್ಷಿಣ ಕೊರಿಯಾ ಗುಪ್ತಚರ ಇಲಾಖೆ ಕೂಡ ಗಮನ ಇಟ್ಟಿತ್ತು. ಕೆಲವೇ ದಿನಗಳ ಹಿಂದೆ ಕಿಮ್ ಜಾಂಗ್ ಉನ್ ಸಪೂರ ದೇಹ ಸುದ್ದಿ ಮಾಡಿದ್ದಂತೆ..ಈಗ ಅವರ ತಲೆ ಸುದ್ದಿ ಮಾಡುತ್ತಿದೆ.
ಇತ್ತೀಚೆಗೆ ಕಿಮ್ ಜಾಂಗ್ ಉನ್ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ, ಅವರ ತಲೆಯ ಹಿಂಭಾಗದಲ್ಲಿ ಇದ್ದ ಒಂದು ಚಿಕ್ಕ ಬ್ಯಾಂಡೇಜ್ ಈಗ ಗಮನಸೆಳೆದಿದೆ. ಸರ್ವಾಧಿಕಾರಿಯ ತಲೆಯ ಹಿಂದೆ ಬ್ಯಾಂಡೇಜ್ ಹಾಕುವಂಥದ್ದೇನಾಯಿತು? ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿದೆ. ಹಾಗೇ, ಮತ್ತೆ ಅವರ ಆರೋಗ್ಯದ ಬಗ್ಗೆ ಒಂದಷ್ಟು ಊಹಾಪೋಹಗಳು ಶುರುವಾಗಿವೆ.
ಜುಲೈ 24-27ರವರೆಗೆ ನಡೆದ ಕೊರಿಯನ್ ಜನರ ಸೇನಾ ಸಮಾರಂಭದಲ್ಲಿ ಕಿಮ್ ಪಾಲ್ಗೊಂಡಿದ್ದರು. ಆ ಕಾರ್ಯಕ್ರಮದ ಫೋಟೋಗಳನ್ನು ಸ್ಥಳೀಯ ಮಾಧ್ಯಮಗಳು ಪ್ರಕಟಿಸಿವೆ. ಅದರಲ್ಲಿ ಕಿಮ್ ಜಾಂಗ್ ಉನ್ ತಲೆಯ ಹಿಂಭಾಗ ಪುಟ್ಟ ಬ್ಯಾಂಡೇಜ್ ಇರುವುದು ಕಾಣಿಸುತ್ತಿದೆ. ಕಳೆದ ವರ್ಷ ಕಿಮ್ ಜಾಂಗ್ ಉನ್ ಕೆಲವು ತಿಂಗಳುಗಳ ಕಾಲ ನಾಪತ್ತೆಯಾಗಿದ್ದರು. ಅವರ ಜೀವವೇ ಹೋಗಿದೆ ಎನ್ನುವಷ್ಟರ ಮಟ್ಟಿಗೆ ಸುದ್ದಿ ಹರಡಿತ್ತು. ಅದಾದ ಮೇಲೆ ಏಕಾಏಕಿ ಒಂದು ದಿನ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಸ್ವಲ್ಪದಿನ ಎಲ್ಲವೂ ಸರಿಯಾಗಿತ್ತು..ಆದರೆ ಮತ್ತೆ ಕಿಮ್ ಜಾಂಗ್ ಉನ್ ತೂಕ ಕಳೆದುಕೊಂಡಿದ್ದು ಎಲ್ಲರ ಗಮನಸೆಳೆದಿತ್ತು. ಇಷ್ಟಾದರೂ ಅವರು ದೇಶದ ಆರ್ಥಿಕ ಚೇತರಿಕೆಗೆ, ಆಹಾರ ಕೊರತೆ ನೀಗಿಸಲು ಅವರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಒಂದಲ್ಲ ಒಂದು ಕಾರಣಕ್ಕೆ ಮತ್ತೆಮತ್ತೆ ಅವರ ಆರೋಗ್ಯದ ಬಗ್ಗೆ ಅನುಮಾನಗಳು ಏಳುತ್ತಲೇ ಇವೆ.
Mysterious spot and bandage appear on back of Kim Jong Un’s head https://t.co/IaRCEzzyTR pic.twitter.com/jd2Ppz7jdX
— Chad O’Carroll (@chadocl) August 2, 2021
ಇದನ್ನೂ ಓದಿ: ಮೈಸೂರು ಮೃಗಾಲಯದಿಂದ ನೂತನ ಪ್ರಯೋಗ; ಆನೆಗಳಿಗಾಗಿ ಈಜುಕೊಳ ನಿರ್ಮಾಣ!