ಒಮ್ಮೆ ರಷ್ಯಾ, ಮತ್ತೊಮ್ಮೆ ಅಮೆರಿಕ: ದ್ರೋಹ-ವಿಶ್ವಾಸಗಳ ವ್ಯಾಖ್ಯಾನವನ್ನೇ ಬದಲಿಸಬಲ್ಲ ತಂತ್ರಗಾರನಿಗೆ ಅಫ್ಗನ್ ಅಧ್ಯಕ್ಷ ಗಾದಿ

ಅಫ್ಗಾನಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಪ್ರಬಲ ದೇಶ ಚೀನಾ ಮತ್ತು ಒಂದು ಕಾಲದ ತನ್ನ ವೈರಿ ರಷ್ಯಾವನ್ನೂ ಮುಲ್ಲಾ ಅಬ್ದುಲ್ ಈಗಾಗಲೇ ಓಲೈಸಿದ್ದಾನೆ.

ಒಮ್ಮೆ ರಷ್ಯಾ, ಮತ್ತೊಮ್ಮೆ ಅಮೆರಿಕ: ದ್ರೋಹ-ವಿಶ್ವಾಸಗಳ ವ್ಯಾಖ್ಯಾನವನ್ನೇ ಬದಲಿಸಬಲ್ಲ ತಂತ್ರಗಾರನಿಗೆ ಅಫ್ಗನ್ ಅಧ್ಯಕ್ಷ ಗಾದಿ
ಅಫ್ಗಾನಿಸ್ತಾನದ ಅಧ್ಯಕ್ಷ ಗಾದಿಯ ಸನಿಹದಲ್ಲಿರುವ ಮುಲ್ಲಾ ಅಬ್ದುಲ್ ಘನಿ ಬಾರದಾರ್
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Aug 15, 2021 | 7:50 PM

ಯಾವ ಮಹತ್ವಾಕಾಂಕ್ಷೆ ಇರಿಸಿಕೊಂಡು ಭಾರತ ಇರಾನ್​ ಚಾಬಹಾರ್ ಬಂದರು ಅಭಿವೃದ್ಧಿಪಡಿಸಿತ್ತೋ, ಯಾವ ಆತಂಕದಿಂದ ಅಫ್ಗಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರ ನೆಲೆಗೊಳ್ಳಬೇಕು ಎಂದು ಬಯಸಿತ್ತೋ ಅವೆಲ್ಲವೂ ಸದ್ಯದ ಮಟ್ಟಿಗೆ ಮಣ್ಣುಗೂಡಿದ ದಿನ ಈ ಭಾನುವಾರ. ತಾಲಿಬಾನಿಗಳ ಅಟ್ಟಹಾಸಕ್ಕೆ ಅಘ್ಗನ್ ಸೇನೆ ನಡುಮುರಿದು ಬಿದ್ದಾಗ ಧುತ್ತನೆ ಅಧ್ಯಕ್ಷ ಗಾದಿಗೆ ಕೇಳಿ ಬಂದ ಹೆಸರು ಮುಲ್ಲಾ ಅಬ್ದುಲ್ ಬಾರದಾರ್. ತಾlಇಬಾನ್​ನ ಸಂಸ್ಥಾಪಕ ಕಮಾಂಡರ್​ ಆಗಿರುವ ಮುಲ್ಲಾ ಅಬ್ದುಲ್, ಸೋವಿಯತ್ ವಿರುದ್ಧ ಹೋರಾಡುವಾಗ ಅಮೆರಿಕದ ಮೈತ್ರಿ ಮಾಡಿಕೊಂಡಿದ್ದ. ಅದೇ ಅಮೆರಿಕ ದೇಶವು ಅಫ್ಗಾನಿಸ್ತಾನದಿಂದ ಕಾಲ್ತೆಗೆಯುವುದಾಗಿ ಘೋಷಿಸಿದ ನಂತರ ಸರ್ಕಾರಿ ಸೇನೆಯನ್ನು ತಾಲಿಬಾನಿಗಳು ಮಣಿಸುವ ಮೊದಲೇ ರಷ್ಯಾಗೆ ತೆರಳಿ ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ಕುದುರಿಸಿಕೊಂಡ. ಅಫ್ಗಾನಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಮತ್ತೊಂದು ಪ್ರಬಲ ದೇಶ ಚೀನಾವನ್ನೂ ಮುಲ್ಲಾ ಅಬ್ದುಲ್ ಈಗಾಗಲೇ ಓಲೈಸಿದ್ದಾನೆ.

ಕೇವಲ ಮಿಲಟರಿ ವಿಜಯದಿಂದಲೇ ಎಲ್ಲವನ್ನೂ ಸಾಧಿಸಲು ಆಗುವುದಿಲ್ಲ. ಅಮೆರಿಕ ಮತ್ತು ಅಫ್ಗಾನಿಸ್ತಾನ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿ ಅಧಿಕಾರವನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಪ್ರತಿಪಾದಿಸುತ್ತಿದ್ದವ ಮುಲ್ಲಾ ಅಬ್ದುಲ್. ಇವನ ಕ್ರೌರ್ಯದ ಕಥೆಗಳು ಏನೆಲ್ಲಾ ಇದ್ದರೂ ಮಾತುಕತೆಗೆ ಕೂರುತ್ತಾನೆ ಎನ್ನುವ ಕಾರಣಕ್ಕೆ ಅಮೆರಿಕ ತುಸುಮಟ್ಟಿಗೆ ಇವನನ್ನು ನೆಚ್ಚಿಕೊಂಡಿತ್ತು. ಅದೇ ಕಾರಣಕ್ಕೆ ಪಾಕಿಸ್ತಾನದ ಜೈಲಿನಿಂದ ಬಿಡುಗಡೆಯನ್ನೂ ಮಾಡಿಸಿತ್ತು.

ಯಾರೀತಾ ಮುಲ್ಲಾ ಅಬ್ದುಲ್ ಘನಿ ಬಾರದಾರ್? ಅಫ್ಗಾನಿಸ್ತಾನ ರಾಜಧಾನಿ ಕಾಬೂಲ್​ ನಗರವನ್ನು ತಾಲಿಬಾನ್ ಉಗ್ರರು ಎಲ್ಲ ದಿಕ್ಕುಗಳಿಂದ ಸುತ್ತುವರಿದಿದ್ದಾರೆ. ನಗರದೊಳಗೆ ನಡೆಯುವ ಹೋರಾಟ ನಾಗರಿಕರ ಮಾರಣಹೋಮಕ್ಕೆ ಕಾರಣವಾಗುತ್ತದೆ ಎಂಬ ಕಾರಣಕ್ಕೆ ಸೇನೆ ಮತ್ತು ತಾಲಿಬಾನ್ ಉಗ್ರರು ತಾತ್ಕಾಲಿಕವಾಗಿ ಕದನವಿರಾಮ ಘೋಷಿಸಿದ್ದು, ಅಫ್ಗನ್ ಸರ್ಕಾರದ ಭೇಷರತ್ ಶರಣಾಗತಿಗೆ ತಾಲಿಬಾನ್ ಆಗ್ರಹಿಸುತ್ತಿದೆ. ಈ ನಡುವೆ ತಾಲಿಬಾನ್ ಕಮಾಂಡರ್ ಮುಲ್ಲಾ ಅಬ್ದುಲ್ ಘನಿ ಬಾರದಾರ್ ಅಫ್ಗಾನಿಸ್ತಾನದ ನೂತನ ಅಧ್ಯಕ್ಷ ಆಗಬಹುದು ಎಂದು ಹಲವು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅಫ್ಗಾನಿಸ್ತಾನದಲ್ಲಿ ತಾಲಿಬಾನ್​ ಪೂರ್ಣ ಪ್ರಮಾಣದಲ್ಲಿ ಹೊಸ ಸರ್ಕಾರ ರಚಿಸುವವರೆಗೂ ಅಮೆರಿಕ ಮೂಲದ ಅಲಿ ಅಹ್ಮದ್ ಜಲಾಲಿ ಹಂಗಾಮಿ ಸರ್ಕಾರ ರಚಿಸಿ, ಅಧಿಕಾರ ನಿರ್ವಹಿಸಬಹುದು ಎಂಬ ನಿರೀಕ್ಷೆಗಳು ವ್ಯಕ್ತವಾಗಿವೆ.

ಅಫ್ಗಾನಿಸ್ತಾನದಲ್ಲಿ ಹಾಲಿ ಅಧಿಕಾರದಲ್ಲಿರುವ ಅಶ್ರಫ್ ಘನಿ ನೇತೃತ್ವದ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಭಾನುವಾರ (ಆಗಸ್ಟ್​ 15) ಮುಲ್ಲಾ ಅಬ್ದುಲ್ ತಾಲಿಬಾನ್ ನಿಯೋಗವೊಂದನ್ನು ಅಧ್ಯಕ್ಷರ ಅರಮನೆಗೆ ಕೊಂಡೊಯ್ದಿದ್ದ. ಅಫ್ಗನ್ ಸರ್ಕಾರದ ಚುಕ್ಕಾಣಿ ತಾಲಿಬಾನ್ ಕೈವಶವಾದ ನಂತರ ಮುಲ್ಲಾ ಅಬ್ದುಲ್ ಅಧಿಕಾರಕ್ಕೆ ಬರುವುದನ್ನು ಇದು ಸಂಕೇತಿಸುತ್ತದೆ ಎನ್ನಲಾಗಿದೆ. ಅಫ್ಗಾನಿಸ್ತಾನದ ಪ್ರಬಲ ಪಷ್ತೂನ್ ಬುಡಕಟ್ಟಿನ ದುರಾನಿ ಪಷ್​ಉನ್ ವರ್ಗಕ್ಕೆ ಸೇರಿದ ಮುಲ್ಲಾ ಅಬ್ದುಲ್ ಒಂದು ಕಾಲದಲ್ಲಿ ಮೇಕೆ ಮೇಯಿಸಿಕೊಂಡಿದ್ದ. ಅಫ್ಗಾನಿಸ್ತಾನದ ಹಿಂದಿನ ಅಧ್ಯಕ್ಷ ಹಮೀದ್ ಕರ್ಜೈ ಸಹ ಇದೇ ಬುಡಕಟ್ಟಿನವರಾಗಿದ್ದರು. 1994ರಲ್ಲಿ ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಚಳವಳಿ ಹುಟ್ಟುಹಾಕಿದ ನಾಲ್ವರು ಸಂಸ್ಥಾಪಕರಲ್ಲಿ ಮುಲ್ಲಾ ಅಬ್ದುಲ್ ಸಹ ಒಬ್ಬ. ಅಘ್ಗಾನಿಸ್ತಾನದ ಉರ್ಝುಗನ್ ಪ್ರಾಂತ್ಯದಲ್ಲಿರುವ ದೆಹ್ರಾವುಡ್ ಜಿಲ್ಲೆ ವೀಟ್​ಮಕ್ ಗ್ರಾಮ ಇವನ ಹುಟ್ಟೂರು. ಜನಿಸಿದ್ದು 1968ರಲ್ಲಿ.

ಮುಲ್ಲಾ ಮೊಹಮದ್ ಓಮರ್ ಜತೆಗೂಡಿ 1994ರಲ್ಲಿ ತಾಲಿಬಾನ್ ಚಳವಳಿಯನ್ನು ಹುಟ್ಟುಹಾಕಿದ ನಂತರ ಮುಲ್ಲಾ ಬಾರದಾರ್ ಸೇನಾ ಕಾರ್ಯತಂತ್ರ ನಿಪುಣರಾಗಿ ಹೆಸರು ಮಾಡಿದ. ಮೊದಲು ರಷ್ಯಾ ಅನಂತರ ಅಮೆರಿಕ ಪಡೆಗಳ ವಿರುದ್ಧದ ದೈನಂದಿನ ಕಾರ್ಯಾಚರಣೆ ಮತ್ತು ವಿಶ್ವದ ಮೂಲೆಮೂಲೆಗಳಿಂದ ನಿಧಿ ಸಂಗ್ರಹಿಸುವ ಜವಾಬ್ದಾರಿ ಮುಲ್ಲಾ ಬಾರದಾರ್ ಮೇಲಿತ್ತು. 1980ರ ದಶಕದಲ್ಲಿ ಕಂದಹಾರ್ ಪ್ರಾಂತ್ಯದಲ್ಲಿ ಸೋವಿಯತ್ ಒಕ್ಕೂಟದ ವಿರುದ್ಧ ತಾಲಿಬಾನಿಗಳು ನಡೆಸಿದ ಜಿದ್ದಾಜಿದ್ದಿ ಜಿಹಾದ್​ನಲ್ಲಿ ಬಾರದಾರ್​ ಪ್ರಮುಖ ಹೋರಾಟಗಾರನಾಗಿ ಹೊರಹೊಮ್ಮಿದ. 2001ರಲ್ಲಿ ಅಮೆರಿಕ ಸೇನೆ ತಾಲಿಬಾನ್ ಸರ್ಕಾರವನ್ನು ಉರುಳಿಸಿದ ನಂತರ ಗೆರಿಲ್ಲಾ ದಾಳಿಗಳನ್ನು ಸಂಘಟಿಸುವ ಮುಖ್ಯ ನಾಯಕನಾಗಿ ಗುರುತಿಸಿಕೊಂಡ.

ಸೋವಿಯತ್ ಒಕ್ಕೂಟ, ನಾರ್ತರನ್ ಅಲಯನ್ಸ್​ ಮತ್ತು ಅಮೆರಿಕ ಸೇರಿದಂತೆ ತಾಲಿಬಾನ್ ಈವರೆಗೆ ಹೋರಾಡಿರುವ ಬಹುತೇಕ ಎಲ್ಲ ಯುದ್ಧಗಳಲ್ಲಿ ಮುಲ್ಲಾ ಬಾರದಾರ್ ತಾಲಿಬಾನ್ ಉಗ್ರಗಾಮಿಗಳ ವ್ಯೂಹ ರಚಿಸಿ, ಮುನ್ನಡೆಸಿದ್ದಾನೆ. ಅಮೆರಿಕ ಸೇನೆಯು ತಾಲಿಬಾನ್ ಸರ್ಕಾರವನ್ನು ಪದಚ್ಯುತಗೊಳಿಸಿದಾಗ ಮುಲ್ಲಾ ಬರಾದಾರ್ ರಕ್ಷಣಾ ಇಲಾಖೆಯ ಉಪಸಚಿವನಾಗಿ ಕೆಲಸ ಮಾಡುತ್ತಿದ್ದ.

ಬಂಧನ ಬಿಡುಗಡೆ ಮುಲ್ಲಾ ಬಾರದಾರ್​ನ ಹೆಂಡತಿಯು ತಾಲಿಬಾನ್​ನ ಮತ್ತೋರ್ವ ಸ್ಥಾಪಕ ಮುಲ್ಲಾ ಒಮರ್​ನ ಸೋದರಿ. ಹೀಗಾಗಿ ತಾಲಿಬಾನ್​ ನಾಯಕನ ನೆಚ್ಚಿನ ಬಂಟನಾಗಿದ್ದ ಮುಲ್ಲಾ ಬರದಾರ್ ತಾಲಿಬಾನ್​ನ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುತ್ತಿದ್ದ.

2010ರಲ್ಲಿ ಅಮೆರಿಕ ಸೇನೆ ಮುಲ್ಲಾ ಬಾರದಾರ್​ನನ್ನು ಬಂಧಿಸಿತ್ತು. ಶಾಂತಿ ಮಾತುಕತೆಗೂ ಮುನ್ನ ಬಿಡುಗಡೆ ಮಾಡಲಾಗಿತ್ತು. ತಾಲಿಬಾನ್​ನ ಇತರ ನಾಯಕರಂತೆ ಮುಲ್ಲಾ ಬಾರದಾರ್ ವಿರುದ್ಧವೂ ಅಮೆರಿಕ ರಕ್ಷಣಾ ಮಂಡಳಿಯು ಹಲವು ನಿರ್ಬಂಧಗಳನ್ನು ಹೇರಿದೆ. ಇವನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಪ್ರವಾಸ ನಿರ್ಬಂಧ ಮತ್ತು ಆಯುಧ ಬಳಕೆಗೂ ನಿರ್ಬಂಧ ಹೇರಲಾಗಿದೆ. ಅಮೆರಿಕ ಮತ್ತು ಪಾಕ್ ಸೇನೆಯ ಜಂಟಿ ಕಾರ್ಯಾಚರಣೆಯಲ್ಲಿ ಬಾರದಾರ್​ನನ್ನು ಪಾಕಿಸ್ತಾನದ ಕರಾಚಿಯಲ್ಲಿ ಫೆಬ್ರುವರಿ 2010ರಂದು ಬಂಧಿಸಲಾಗಿತ್ತು.

ಅಮೆರಿಕ ಪಡೆಗಳು ಬಂಧಿಸುವವರೆಗೂ ಮುಲ್ಲಾ ಬಾರದಾರ್​ನ ಬಗ್ಗೆ ಜಗತ್ತಿಗೆ ಅಷ್ಟಾಗಿ ಮಾಹಿತಿ ಇರಲೇ ಇಲ್ಲ. ಅಫ್ಗನ್​ನಲ್ಲಿದ್ದ ತಾಲಿಬಾನಿ ಉಗ್ರರು ಶಾಂತಿ ಮಾತುಕತೆ ನಡೆಸಲು ಮುಲ್ಲಾ ಬಾರಾದಾರ್​ನನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತಿದ್ದರು. ಬಂಧನದ ವೇಳೆ ಮುಲ್ಲಾ ಬಾರದಾರ್ ತಾಲಿಬಾನ್​ನಲ್ಲಿ 2ನೇ ಸ್ಥಾನದಲ್ಲಿದ್ದ ನಾಯಕ. ತಾಲಿಬಾನ್​ನ ಸರ್ವೋಚ್ಛ ನಾಯಕ ಮುಲ್ಲಾ ಮೊಹಮದ್​ ಓಮರ್​ನ ವಿಶ್ವಾಸಾರ್ಹ ಕಮಾಂಡರ್ ಆಗಿದ್ದ.

ಸೆಪ್ಟೆಂಬರ್ 21, 2018ರಲ್ಲಿ ಅಫ್ಗನ್ ಸರ್ಕಾರದೊಂದಿಗೆ ಶಾಂತಿ ಮಾತುಕತೆ ನಡೆಸಲೆಂದು ಪಾಕಿಸ್ತಾನಿ ಅಧಿಕಾರಿಗಳು ಮುಲ್ಲಾ ಬಾರದಾರ್​ನನ್ನು ತಮ್ಮ ಕಸ್ಟಡಿಯಿಂದ ಬಿಡುಗಡೆ ಮಾಡಿದ್ದರು. ಅಮೆರಿಕ ಮತ್ತು ಅಫ್ಗಾನ್ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು ಎಂದು ಪ್ರತಿಪಾದಿಸುತ್ತಿದ್ದ ಕೆಲವೇ ಕೆಲ ತಾಲಿಬಾನ್ ನಾಯಕರ ಪೈಕಿ ಬಾರದಾರ್ ಕೂಡ ಒಬ್ಬ. ಅಮೆರಿಕ ಸೇನೆಯು ಅಫ್ಗಾನಿಸ್ತಾನದಿಂದ ಕಾಲ್ತೆಗೆಯುವ ಪ್ರಕ್ರಿಯೆ ಆರಂಭವಾದ ನಂತರ ಅಫ್ಗನ್ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಕಾಬೂಲ್​ಗೆ ಬರುವ ಮೊದಲು ಮುಲ್ಲಾ ಬಾರದಾರ್​ ಚೀನಾ ಮತ್ತು ರಷ್ಯಾಗಳಿಗೆ ಹೋಗಿ ಅಲ್ಲಿನ ವಿದೇಶಾಂಗ ವ್ಯವಹಾರಗಳ ಸಚಿವರನ್ನು ಭೇಟಿಯಾಗಿದ್ದ. ಭವಿಷ್ಯದ ತಾಲಿಬಾನ್ ಸರ್ಕಾರಕ್ಕೆ ಈ ಸರ್ಕಾರಗಳಿಂದ ಮಾನ್ಯತೆ ಸಿಗುವಂತೆ ಮಾಡಲು ಮುಲ್ಲಾ ಪ್ರಯತ್ನಿಸಿದ್ದಾನೆ ಎಂದು ವಿಶ್ಲೇಷಿಸಲಾಗಿದೆ.

(Profile of Mullah Abdul Ghani Baradar Taliban leader rumoured to become the next president of Afghanistan)

ಇದನ್ನೂ ಓದಿ: ಅಫ್ಗಾನಿಸ್ತಾನದ ಅಭಿವೃದ್ಧಿಗೆ ಭಾರತ ಖರ್ಚು ಮಾಡಿತ್ತು 2 ಲಕ್ಷ ಕೋಟಿ ರೂಪಾಯಿ: ಏನಾಗಲಿದೆ ಅದರ ಭವಿಷ್ಯ?

ಇದನ್ನೂ ಓದಿ: ಕಾಬೂಲ್ ಪತನ: ಮತ್ತೆ ತಾಲಿಬಾನ್ ವಶಕ್ಕೆ ಅಫ್ಗಾನಿಸ್ತಾನ, ಮುಲ್ಲಾ ಅಬ್ದುಲ್ ನೂತನ ಅಧ್ಯಕ್ಷ

Published On - 7:31 pm, Sun, 15 August 21

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್