Girls Education: ಅಫ್ಘಾನಿಸ್ತಾನದಲ್ಲಿ ಬಾಲಕಿಯರ ಶಿಕ್ಷಣ ಕೇಂದ್ರಗಳನ್ನು ಮುಚ್ಚಿದ ತಾಲಿಬಾನ್

ಈಗಾಗಲೇ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಅಪಸ್ವರ ಎತ್ತಿ, ಶಿಕ್ಷಣಕ್ಕೆ ಕಡಿವಾಣ ಹಾಕುತ್ತಿರುವ ತಾಲಿಬಾನ್(Taliban) ಇದೀಗ ದಕ್ಷಿಣ ಅಫ್ಘಾನಿಸ್ತಾನದಲ್ಲಿರುವ ಬಾಲಕಿಯರ ಶಿಕ್ಷಣ ಕೇಂದ್ರಗಳನ್ನು ಮುಚ್ಚಿದೆ.

Girls Education: ಅಫ್ಘಾನಿಸ್ತಾನದಲ್ಲಿ ಬಾಲಕಿಯರ ಶಿಕ್ಷಣ ಕೇಂದ್ರಗಳನ್ನು ಮುಚ್ಚಿದ ತಾಲಿಬಾನ್
ತಾಲಿಬಾನ್ ಬಾಲಕಿಯರ ಶಿಕ್ಷಣ( ಸಾಂದರ್ಭಿಕ ಚಿತ್ರ)
Image Credit source: The Guardian

Updated on: Apr 17, 2023 | 8:18 PM

ಈಗಾಗಲೇ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಅಪಸ್ವರ ಎತ್ತಿ, ಶಿಕ್ಷಣಕ್ಕೆ ಕಡಿವಾಣ ಹಾಕುತ್ತಿರುವ ತಾಲಿಬಾನ್(Taliban) ಇದೀಗ ದಕ್ಷಿಣ ಅಫ್ಘಾನಿಸ್ತಾನದಲ್ಲಿರುವ ಬಾಲಕಿಯರ ಶಿಕ್ಷಣ ಕೇಂದ್ರಗಳನ್ನು ಮುಚ್ಚಿದೆ. ಅಫ್ಘಾನ್​ ಅಧಿಕಾರಿಗಳು ದಕ್ಷಿಣದಲ್ಲಿ ಸರ್ಕಾರೇತರ ಗುಂಪುಗಳಿಂದ ಬೆಂಬಲಿತ ಶಿಕ್ಷಣ ಕೇಂದ್ರಗಳು ಹಾಗೂ ಸಂಸ್ಥೆಗಳನ್ನು ಮುಂದಿನ ಸೂಚನೆವರೆಗೆ ಮುಚ್ಚಲು ಸೂಚನೆ ನೀಡಿದ್ದಾರೆ. ಈ ಕೇಂದ್ರಗಳು ಹೆಚ್ಚಿನದ್ದು ಬಾಲಕಿಯರಿಗಾಗಿ ಮೀಸಲಾಗಿದ್ದಾಗಿವೆ. ಅಲ್ಲಿಯ ಹೆಣ್ಣುಮಕ್ಕಳು 6ನೇ ತರಗತಿಗಿಂತ ಹೆಚ್ಚು ವಿದ್ಯಾಭ್ಯಾಸ ಮಾಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.

ಹೆಲ್ಮಂಡ್ ಮತ್ತು ಕಂದಹಾರ್‌ ಶಿಕ್ಷಣ ಕೇಂದ್ರಗಳು ಮತ್ತು ಸಂಸ್ಥೆಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಮುಚ್ಚುವಿಕೆಗೆ ವಿವರಣೆಯನ್ನು ನೀಡಿಲ್ಲ. ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಮುಂದಿನ ಸೂಚನೆ ಬರುವವರೆಗೆ ಶಿಕ್ಷಣ ಕೇಂದ್ರಗಳ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಂದಹಾರ್ ಶಿಕ್ಷಣ ಇಲಾಖೆಯ ವಕ್ತಾರ ಮುತವಕಿಲ್ ಅಹ್ಮದ್ ಖಚಿತಪಡಿಸಿದ್ದಾರೆ.

1990 ರ ದಶಕದ ಹಿಂದಿನ ಅಧಿಕಾರದ ಅವಧಿಗಿಂತ ಹೆಚ್ಚು ಮಧ್ಯಮ ಆಡಳಿತದ ಆರಂಭಿಕ ಭರವಸೆಗಳ ಹೊರತಾಗಿಯೂ, ಎರಡು ದಶಕಗಳ ಯುದ್ಧದ ನಂತರ US ಮತ್ತು NATO ಪಡೆಗಳು ಅಫ್ಘಾನಿಸ್ತಾನದಿಂದ ಹಿಂದೆ ಸರಿಯುತ್ತಿದ್ದಂತೆ 2021 ರಲ್ಲಿ ದೇಶವನ್ನು ಸ್ವಾಧೀನಪಡಿಸಿಕೊಂಡ ನಂತರ ತಾಲಿಬಾನ್ ಕಠಿಣ ಕ್ರಮಗಳನ್ನು ವಿಧಿಸಿದೆ.

ಮತ್ತಷ್ಟು ಓದಿ: Hijab: ಹಿಜಾಬ್ ಧರಿಸದ ಹೆಣ್ಣುಮಕ್ಕಳ ಮೇಲೆ ಕಣ್ಣಿಡಲು ಇರಾನ್​ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ

ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡ ಬಳಿಕ ಅಲ್ಲಿ ಮಹಿಳೆಯರ ಸ್ವಾತಂತ್ರ್ಯ ಮತ್ತು ಹಕ್ಕುಗಳ ಹರಣವಾಗುತ್ತಿದೆ.
ಜಿಮ್​ಗಳಿಗೂ ಪ್ರವೇಶಿಸದಂತೆ ಮಹಿಳೆಯರಿಗೆ ನಿಷೇಧ ಹೇರಲಾಗಿದೆ, ಹಾಗೆಯೇ ಉದ್ಯಾನಗಳಿಗೂ ಮಹಿಳೆಯರು ಭೇಟಿ ನೀಡುವಂತಿಲ್ಲ.

ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಹಳೆಯ ನಿಯಮವನ್ನು ಜಾರಿ ಮಾಡುವುದಿಲ್ಲ ಎಂದು ಹೇಳುತ್ತಲೇ ಹೆಣ್ಣುಮಕ್ಕಳು ಮಾಧ್ಯಮಿಕ ಮತ್ತು ಪ್ರೌಢಶಾಲೆಗೆ ಹೋಗುವುದಕ್ಕೆ ತಡೆ ಹಾಕಿದ್ದರು. ಔದ್ಯೋಗಿಕ ವಲಯಗಳಲ್ಲಿ ಮಹಿಳೆಯರಿಗೆ ನಿಷೇಧ ಹೇರಿದ್ದಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಕಡ್ಡಾಯಗೊಳಿಸಿದ್ದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us