ಜರ್ಮನಿಯ ಪತ್ರಕರ್ತ ಸಿಗದೇ ಇದ್ದಾಗ ಆತನ ಸಂಬಂಧಿ ಮೇಲೆ ಗುಂಡು ಹಾರಿಸಿ ಹತ್ಯೆಗೈದ ತಾಲಿಬಾನ್

Taliban: ಡಿಡಬ್ಲ್ಯೂ ಡೈರೆಕ್ಟರ್ ಜನರಲ್ ಪೀಟರ್ ಲಿಂಬರ್ಗ್ ಈ ಹತ್ಯೆಯನ್ನು ಖಂಡಿಸಿದ್ದು, ಪತ್ರಕರ್ತರು ಮತ್ತು ಅಫ್ಘಾನಿಸ್ತಾನದಲ್ಲಿರುವ ಅವರ ಕುಟುಂಬಗಳಿಗೆ ಅಪಾಯವಿದೆ ಎಂಬುದನ್ನು ಇದು ತೋರಿಸುತ್ತದೆ ಎಂದಿದ್ದಾರೆ

ಜರ್ಮನಿಯ ಪತ್ರಕರ್ತ ಸಿಗದೇ ಇದ್ದಾಗ ಆತನ ಸಂಬಂಧಿ ಮೇಲೆ ಗುಂಡು ಹಾರಿಸಿ ಹತ್ಯೆಗೈದ ತಾಲಿಬಾನ್
ತಾಲಿಬಾನ್ ಹೋರಾಟಗಾರರು

ಬರ್ಲಿನ್ (ಜರ್ಮನಿ): ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹೋರಾಟಗಾರರು ಡೊಯಿಚಿ ವೆಲ್ಲೆ (Deutsche Welle ) ಪತ್ರಕರ್ತನಿಗಾಗಿ ಹುಡುಕಾಡಿ ಆತ ಸಿಗದೇ ಇದ್ದಾಗ ಆತನ ಸಂಬಂಧಿಯನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಜರ್ಮನ್ ಸಾರ್ವಜನಿಕ ಮಾಹಿತಿ ಅಧಿಕಾರಿ ತಿಳಿಸಿದ್ದಾರೆ. ಈಗ ಜರ್ಮನಿಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗಾಗಿ ಉಗ್ರರು ಮನೆ-ಮನೆಗೆ ಶೋಧ ನಡೆಸುತ್ತಿದ್ದಾರೆ ಎಂದು ಡಿಡಬ್ಲ್ಯೂ ಗುರುವಾರ ಹೇಳಿದೆ. ಮತ್ತೊಬ್ಬ ಸಂಬಂಧಿ ಗಂಭೀರವಾಗಿ ಗಾಯಗೊಂಡರು, ಇತರರು ತಪ್ಪಿಸಿಕೊಂಡರು ಎಂದು ಘಟನೆಯ ವಿವರಗಳನ್ನು ನೀಡದೆಯೇ ಡಿಡಬ್ಯೂ ಹೇಳಿದೆ.

ಡಿಡಬ್ಲ್ಯೂ ಡೈರೆಕ್ಟರ್ ಜನರಲ್ ಪೀಟರ್ ಲಿಂಬರ್ಗ್ ಈ ಹತ್ಯೆಯನ್ನು ಖಂಡಿಸಿದ್ದು, ಪತ್ರಕರ್ತರು ಮತ್ತು ಅಫ್ಘಾನಿಸ್ತಾನದಲ್ಲಿರುವ ಅವರ ಕುಟುಂಬಗಳಿಗೆ ಅಪಾಯವಿದೆ ಎಂಬುದನ್ನು ಇದು ತೋರಿಸುತ್ತದೆ ಎಂದಿದ್ದಾರೆ. “ನಿನ್ನೆ ತಾಲಿಬಾನ್ ನಮ್ಮ ಸಂಪಾದಕರೊಬ್ಬರ ಹತ್ತಿರದ ಸಂಬಂಧಿಯನ್ನು ಹತ್ಯೆ ಮಾಡಿರುವುದು ಖಂಡನೀಯ. ಅಫ್ಘಾನಿಸ್ತಾನದಲ್ಲಿರುವ ನಮ್ಮ ಎಲ್ಲಾ ಉದ್ಯೋಗಿಗಳು ಮತ್ತು ಅವರ ಕುಟುಂಬಗಳು ಇಲ್ಲಿ ತೀವ್ರ ಅಪಾಯದಲ್ಲಿವೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ” ಎಂದು ಅವರು ಹೇಳಿದರು.

“ತಾಲಿಬಾನ್ ಈಗಾಗಲೇ ಪತ್ರಕರ್ತರಿಗಾಗಿ ಕಾಬೂಲ್ ಮತ್ತು ಪ್ರಾಂತ್ಯಗಳಲ್ಲಿ ಸಂಘಟಿತ ಹುಡುಕಾಟಗಳನ್ನು ನಡೆಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ನಮ್ಮಲ್ಲೀಗ ಸಮಯವಿಲ್ಲ ಎಂದಿದ್ದಾರೆ ಲಿಂಬರ್ಗ್. ತಾಲಿಬಾನ್ ಕನಿಷ್ಠ ಮೂರು ಇತರ ಡಿಡಬ್ಲ್ಯೂ ಪತ್ರಕರ್ತರ ಮನೆಗಳ ಮೇಲೆ ದಾಳಿ ಮಾಡಿದೆ ಎಂದು ಬ್ರಾಡ್‌ಕಾಸ್ಟರ್ ಹೇಳಿದ್ದಾರೆ.

ಡಿಬ್ಲ್ಯೂ ಮತ್ತು ಇತರ ಜರ್ಮನ್ ಮಾಧ್ಯಮ ಸಂಸ್ಥೆಗಳು ತಮ್ಮ ಅಫ್ಘಾನ್ ಸಿಬ್ಬಂದಿಗೆ ಸಹಾಯ ಮಾಡಲು ತ್ವರಿತ ಕ್ರಮ ಕೈಗೊಳ್ಳುವಂತೆ ಜರ್ಮನ್ ಸರ್ಕಾರಕ್ಕೆ ಕರೆ ನೀಡಿವೆ. ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ, ತಾಲಿಬಾನ್‌ಗಳು ಮಾಧ್ಯಮ ಸ್ವಾತಂತ್ರ್ಯವನ್ನು ಮತ್ತು ತಮ್ಮ ಎಲ್ಲ ವಿರೋಧಿಗಳಿಗೆ ಕ್ಷಮೆಯನ್ನು ನೀಡುವ ಭರವಸೆಯನ್ನು ನೀಡುವ ಸಾರ್ವಜನಿಕ ಸಂಪರ್ಕವನ್ನು ಪ್ರಾರಂಭಿಸಿದರು.

ಆದಾಗ್ಯೂ ಎಎಫ್‌ಪಿ ನೋಡಿರುವ ಗೌಪ್ಯ ಯುಎನ್ ಡಾಕ್ಯುಮೆಂಟ್ ನಲ್ಲಿ ತಾಲಿಬಾನ್ ಅಮೆರಿಕ ಮತ್ತು ನ್ಯಾಟೋ ಪಡೆಗಳೊಂದಿಗೆ ಕೆಲಸ ಮಾಡಿದ ಜನರ ಹುಡುಕಾಟವನ್ನು ತೀವ್ರಗೊಳಿಸುತ್ತಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ:  ಅಫ್ಘಾನಿಸ್ತಾನಕ್ಕಾಗಿ ಹೋರಾಡುತ್ತಿರುವ ತಾಲಿಬಾನ್ ಉಗ್ರ ಸಂಘಟನೆಯಲ್ಲ; ಭಾರತದ ಕವಿಯ ವಿವಾದಾತ್ಮಕ ಹೇಳಿಕೆ

ಇದನ್ನೂ ಓದಿ: ಕಂದಹಾರ್ ಮತ್ತು ಹೆರಾತ್‌ನಲ್ಲಿ ಮುಚ್ಚಿದ ಭಾರತೀಯ ರಾಯಭಾರ ಕಚೇರಿಯಲ್ಲಿ ತಾಲಿಬಾನ್ ದಾಳಿ: ಗುಪ್ತಚರ ಸಂಸ್ಥೆ ಮಾಹಿತಿ

(Taliban fighters in Afghanistan have shot and killed a relative of a Deutsche Welle journalist says German public broadcaster)

Read Full Article

Click on your DTH Provider to Add TV9 Kannada