ಅಫ್ಘಾನಿಸ್ತಾನವೀಗ ಸಂಪೂರ್ಣವಾಗಿ ತಾಲಿಬಾನ್ ಉಗ್ರ (Taliban Terrorists)ರ ಕೈವಶದಲ್ಲಿದೆ. ಅಲ್ಲಿನ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ (Ashraf Ghani) ಈಗಾಗಲೇ ದೇಶ ಬಿಟ್ಟಾಗಿದೆ. ಈಗಂತೂ ಅಫ್ಘಾನಿಸ್ತಾನ ಅಧ್ಯಕ್ಷರ ಭವನ, ಸಂಸತ್ತುಗಳಲ್ಲೆಲ್ಲ ತಾಲಿಬಾನ್ ಉಗ್ರರದ್ದೇ ಕಾರುಬಾರು. ಕೈಯಲ್ಲಿ ಬಂದೂಕಿನಿಂತಹ ಶಸ್ತ್ರಾಸ್ತ್ರ ಹಿಡಿದ ಉಗ್ರರು ಅಧ್ಯಕ್ಷರ ಭವನ, ಸಂಸತ್ತಿನ ಆಸನಗಳಲ್ಲಿ ಕುಳಿತಿರುವ ಫೋಟೋ-ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿವೆ.
ಕಳೆದ ಎರಡು ವಾರಗಳ ಹಿಂದಷ್ಟೇ ಅಫ್ಘಾನ್ ರಾಜಕೀಯ ನಾಯಕರಿಗಾಗಿ ಮೀಸಲಿದ್ದ ಸಂಸತ್ತನ್ನು ಇದೀಗ ತಾಲಿಬಾನ್ ಉಗ್ರರು ಶಸ್ತ್ರಾಸ್ತ್ರ ಸಮೇತ ಪ್ರವೇಶಿಸಿದ್ದಾರೆ. ಇಷ್ಟು ದಿನ ಅಶ್ರಫ್ ಘನಿ ಅಲ್ಲಿ ಜಂಟಿ ಅಧಿವೇಶನಗಳನ್ನು ನಡೆಸುತ್ತಿದ್ದರು. ಈಗ ತಾಲಿಬಾನ್ ಉಗ್ರರು ಒಟ್ಟೊಟ್ಟಿಗೆ ಕುಳಿತು ಮೊಬೈಲ್ ನೋಡುತ್ತಿದ್ದಾರೆ. ತುಂಬ ಖುಷಿಯಿಂದ ಮಾತುಕತೆ ನಡೆಸುತ್ತಿದ್ದಾರೆ. ಸಂಸತ್ತಿನ ಕುರ್ಚಿಗಳ ಮೇಲೆ ತಾಲಿಬಾನ್ ಉಗ್ರರು ಶಸ್ತ್ರಾಸ್ತ್ರ ಸಮೇತರಾಗಿ ಕುಳಿತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಅಫ್ಘಾನ್ ಅಧ್ಯಕ್ಷರ ಕಾಬೂಲ್ ಮತ್ತು ಅಫ್ಘಾನಿಸ್ತಾನ ಎರಡೂ ಕಡೆ ಇರುವ ಭವನಗಳೂ ತಾಲಿಬಾನ್ ಉಗ್ರರ ವಶವಾಗಿದೆ. ಭಾನುವಾರ (ಆಗಸ್ಟ್ 15) ಇಡೀ ಅಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನ್ ಉಗ್ರರ ಕೈವಶವಾಗಿದೆ. ಅಲ್ಲಿನ ಸರ್ಕಾರ ಬಿದ್ದು, ಅಧ್ಯಕ್ಷ ಅಶ್ರಫ್ ಘನಿ ಈಗಾಗಲೇ ದೇಶ ಬಿಟ್ಟಾಗಿದೆ. ಸದ್ಯಕ್ಕಂತೂ ತಾಲಿಬಾನ್ ಉಗ್ರರು ಪೂರ್ತಿಯಾಗಿ ಶಸ್ತ್ರಾಸ್ತ್ರಗಳೊಂದಿಗೆ ಇಡೀ ಕಾಬೂಲ್ನಲ್ಲಿ ತಿರುಗುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಮುಕ್ತ, ಅಂತರ್ಗತ ಇಸ್ಲಾಮಿಕ್ ಸರ್ಕಾರ ರಚನೆ ಮಾಡುವ ಸಂಬಂಧ ಮಾತುಕತೆ, ಚರ್ಚೆಗಳನ್ನು ನಡೆಸುತ್ತೇವೆ ಎಂದು ತಾಲಿಬಾನ್ ವಕ್ತಾರ ಸುಹೇಲ್ ಶಹೀನ್ ತಿಳಿಸಿದ್ದಾರೆ.
Taliban have entered the Parliament of Afghanistan. This building was built by India.#Kabul #Taliban #Afghanistan #KabulHasFallen pic.twitter.com/BEYowxdstA
— Wajahat Kazmi (@KazmiWajahat) August 16, 2021
ಇದನ್ನೂ ಓದಿ: ಅಫ್ಘಾನಿಸ್ತಾನದ ಹಿಂದೂ-ಸಿಖ್ಖರು ಭಾರತಕ್ಕೆ ಬರಲು ನೆರವು: ಸರ್ಕಾರದ ಭರವಸೆ
ಅಫ್ಘನ್ಗಳು ಪ್ರಾಣಭಯದಿಂದ ದೇಶಬಿಟ್ಟು ಪಲಾಯನ ಮಾಡುತ್ತಿದ್ದಾರೆ, ಅಲ್ಲಿನ ಮಹಿಳೆಯರು ನರಕಯಾತನೆ ಅನುಭವಿಸುತ್ತಿದ್ದಾರೆ
(Taliban have entered the Parliament of Afghanistan with Weapons)
Published On - 8:27 pm, Mon, 16 August 21