
ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ಪಡೆದುಕೊಂಡಿರುವ ತಾಲಿಬಾನ್ ಉಗ್ರರು ಇದೀಗ ಸಿಕ್ಕಾಪಟೆ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಎಲ್ಲೇ ಹೋಗಲಿ, ಏನೇ ಮಾಡಲಿ ಶಸ್ತ್ರಾಸ್ತ್ರಗಳನ್ನು ಮಾತ್ರ ಕೈ ಬಿಡುತ್ತಿಲ್ಲ. ಉಗ್ರರು ನಿನ್ನೆ ಅಫ್ಘಾನಿಸ್ತಾನದ ಸಂಸತ್ತನ್ನು ಪ್ರವೇಶಿಸಿ ಎಲ್ಲೆಂದರೆಲ್ಲ ಕುಳಿತು, ಮೊಬೈಲ್ ನೋಡುತ್ತಿದ್ದ ಫೋಟೋ-ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಅವರು ಫನ್ನಿಯಾಗಿ ಸಮಯ ಕಳೆಯುತ್ತಿರುವ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಉಗ್ರರ ಕ್ರೌರ್ಯಕ್ಕೆ ಅದೆಷ್ಟೋ ಜನರು ನಿರಾಶ್ರಿತರಾಗಿ ಒದ್ದಾಡುತ್ತಿದ್ದರೆ, ಇತ್ತ ಇವರು ಅಮ್ಯೂಸ್ಮೆಂಟ್ ಪಾರ್ಕ್ಗಳಲ್ಲಿ ಮಕ್ಕಳಾಟ ಆಡುತ್ತ, ನಗುತ್ತ, ಕೇಕೆ ಹಾಕುತ್ತಿದ್ದಾರೆ.
ತಾಲಿಬಾನ್ ಉಗ್ರರು ಕೈಯಲ್ಲಿ ಬಂದೂಕು ಹಿಡಿದು, ಕಾಬೂಲ್ನ ಮನರಂಜನಾ ಪಾರ್ಕ್ವೊಂದರಲ್ಲಿ ಎಲೆಕ್ಟ್ರಿಕ್ ಬಂಪರ್ ಕಾರ್ ಆಟ ಆಡುತ್ತಿರುವುದನ್ನು ಒಂದು ವಿಡಿಯೋದಲ್ಲಿ ನೋಡಬಹುದು. ಹಾಗೇ, ಇನ್ನೊಂದು ಪ್ರತ್ಯೇಕ ವಿಡಿಯೋದಲ್ಲಿ ಆಟದ ಕುದುರೆಗಳನ್ನೇರಿ ಎಂಜಾಯ್ ಮಾಡುತ್ತಿದ್ದಾರೆ. ಮತ್ತೊಂದಷ್ಟು ಉಗ್ರರು ಸುತ್ತಲೂ ನಿಂತು ನೋಡುತ್ತಿದ್ದಾರೆ.
ಉಗ್ರರ ಕೈವಶವಾದ ತಾಲಿಬಾನ್ನಿಂದ ಪರಾರಿಯಾಗಿಲು ಸಾವಿರಾರು ಜನರು ಯುಎಸ್ ಮಿಲಿಟರಿ ವಿಮಾನವನ್ನು ಬೇಕಾಬಿಟ್ಟಿ ಹತ್ತಿ, ನೂಕುನುಗ್ಗಲು ಉಂಟಾದ ವಿಡಿಯೋಗಳು ನಿನ್ನೆ ವೈರಲ್ ಆಗಿದ್ದವು. ವಿಮಾನದ ರೆಕ್ಕೆಗಳ ಮೇಲೆ, ಎಂಜಿನ್ ಎಲ್ಲೆಂದರೆಲ್ಲ ಹತ್ತುವುದನ್ನು ವಿಡಿಯೋದಲ್ಲಿ ನೋಡಬಹುದಿತ್ತು. ಒಂದೆಡೆ ದುಃಖ..ನೋವಿನ ವಿಡಿಯೋಗಳಾದರೆ, ಇನ್ನೊಂದೆಡೆ ಉಗ್ರರ ಖುಷಿ, ಅಬ್ಬರದ ನಗುವಿನ ವಿಡಿಯೋಗಳು. ಹೀಗೆ ಒಂದಕ್ಕೊಂದು ವ್ಯತಿರಿಕ್ತ ವಿಡಿಯೋಗಳನ್ನು ನೋಡಿದರೆ ಅಲ್ಲಿನ ಪರಿಸ್ಥಿಯ ಬಗ್ಗೆ ಸ್ಪಷ್ಟವಾದೊಂದು ಚಿತ್ರಣ ಸಿಗುತ್ತದೆ.
ಇದನ್ನೂ ಓದಿ: ಬಿಗ್ ಬಾಸ್ ನಿರೂಪಣೆ ಬಗ್ಗೆ ಸುದೀಪ್ ಫ್ಯಾನ್ಸ್ಗೆ ಇದ್ದ ಅನುಮಾನಕ್ಕೆ ಪರಮ್ ಫುಲ್ ಸ್ಟಾಪ್
Late Night Eating: ರಾತ್ರಿ ತಡವಾಗಿ ಊಟ ಮಾಡುವ ಅಭ್ಯಾಸ ಇದೆಯೇ? ಅಪಾಯದ ಬಗ್ಗೆ ಎಚ್ಚರ ಇರಲಿ
Published On - 9:50 am, Tue, 17 August 21