ಹಳೇ ಚಾಳಿ ಮುಂದುವರಿಸಿದ ತಾಲಿಬಾನ್ ಉಗ್ರರು; ಗಾಯಕನ ಹತ್ಯೆ
Taliban Terrorists: ಅಂದ್ರಾಬ್ ಪ್ರದೇಶದ ಗಾಯಕನನ್ನು ತಾಲಿಬಾನಿಗಳು ಕೊಂದಿದ್ದನ್ನು ಸ್ಥಳೀಯ ಮಾಧ್ಯಮ ಅಸ್ವಾಕಾ ನ್ಯೂಸ್ ದೃಢಪಡಿಸಿದೆ. ಮಾಜಿ ಆಂತರಿಕ ವ್ಯವಹಾರಗಳ ಸಚಿವ ಮಸೂದ್ ಅಂದರಾಬಿ ಹೇಳಿದ್ದಾಗಿ ಉಲ್ಲೇಖಿಸಿದೆ.
ಅಫ್ಘಾನಿಸ್ತಾನದ ಅಂದ್ರಾಬ್ ಪ್ರದೇಶದಲ್ಲಿ ಗಾಯಕನೊಬ್ಬನನ್ನು ತಾಲಿಬಾನ್ ಉಗ್ರರು ಕೊಂದಿದ್ದಾಗಿ ವರದಿಯಾಗಿದೆ. ಅಫ್ಘಾನಿಸ್ತಾನದಲ್ಲಿ ನಾವು ಹಿಂಸಾಚಾರ ಮಾಡುವುದಿಲ್ಲ. ನಾವೀಗ ಹಿಂದಿನಂತೆ ಇಲ್ಲ. ಸೌಮ್ಯವಾದ ಸರ್ಕಾರ ರಚನೆ ಮಾಡುತ್ತೇವೆ ಎಂದು ತಾಲಿಬಾನಿಗಳು ಭರವಸೆ ಕೊಟ್ಟೂ ಕೂಡ, ಕಠಿಣ ಮಾರ್ಗ ಅನುಸರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಅಫ್ಘಾನ್ನಲ್ಲಿ ಆಡಳಿತ ನಡೆಸುತ್ತಿದ್ದಾಗಲೂ ಕೂಡ ತಾಲಿಬಾನ್, ಹೀಗೇ ಮಾಡುತ್ತಿತ್ತು. ಸಂಗೀತ ಇಸ್ಲಾಂನಲ್ಲಿ ನಿಷೇಧ ಎಂದು ಹೇಳಿ ಗಾಯಕರನ್ನು ಹತ್ಯೆ ಮಾಡುತ್ತಿತ್ತು.
ಅಂದ್ರಾಬ್ ಪ್ರದೇಶದ ಗಾಯಕನನ್ನು ತಾಲಿಬಾನಿಗಳು ಕೊಂದಿದ್ದನ್ನು ಸ್ಥಳೀಯ ಮಾಧ್ಯಮ ಅಸ್ವಾಕಾ ನ್ಯೂಸ್ ದೃಢಪಡಿಸಿದೆ. ಮಾಜಿ ಆಂತರಿಕ ವ್ಯವಹಾರಗಳ ಸಚಿವ ಮಸೂದ್ ಅಂದರಾಬಿ ಹೇಳಿದ್ದಾಗಿ ಉಲ್ಲೇಖಿಸಿದೆ. ಆಗಸ್ಟ್ 15ರಂದು ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದಾರೆ. ಸದ್ಯಕ್ಕಂತೂ ಅಫ್ಘಾನಿಸ್ತಾನದಿಂದ ಜನರು ಬೇರೆ ದೇಶಗಳಿಗೆ ಪರಾರಿಯಾಗುವ ಪ್ರಯತ್ನದಲ್ಲಿದ್ದಾರೆ.
#Breaking– Former Interior Minister, Massoud Andarabi told Asvaka News that the #Taliban has killed Fawad Andarabi, a local Andarb singer. According to Andarabi, killings by the Taliban continue across the country, especially in Andarb. #Taliban #Afghanishtan pic.twitter.com/Ayy4OtKZ07
— Aśvaka – آسواکا News Agency (@AsvakaNews) August 28, 2021
ಇದನ್ನೂ ಓದಿ: ಅಮ್ಮನ ಜತೆ ಸರತಿ ಸಾಲಿನಲ್ಲಿ ಸಾಗುತ್ತಿರುವ ಬಾತುಕೋಳಿ ಮರಿಗಳು; ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆ
ಭಾರತದೊಂದಿಗೆ ಸಂಬಂಧ ಬೆಳೆಸುವ ಇಂಗಿತ ವ್ಯಕ್ತಪಡಿಸಿದ ತಾಲಿಬಾನ್; ಮೊಹಮ್ಮದ್ ಅಬ್ಬಾಸ್ ಸ್ಟ್ಯಾನಿಕಜೈ ಹೇಳಿಕೆ
Published On - 9:55 am, Sun, 29 August 21