ಕಂದಹಾರ್ನ ರೇಡಿಯೋ, ಟಿವಿಗಳಲ್ಲಿ ಮಹಿಳೆಯರ ಧ್ವನಿ ಕೇಳುವಂತಿಲ್ಲ; ತಾಲಿಬಾನಿಗಳ ಆದೇಶ
ಆಗಸ್ಟ್ 15ರಂದು ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಕೆಲವು ಸುದ್ದಿ ವಾಹಿನಿಗಳು ತಮ್ಮಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ನಿರೂಪಕರನ್ನು ಕೆಲಸದಿಂದ ತೆಗೆದಿದ್ದವು.
ನಾವು ಮಹಿಳೆಯರಿಗೆ ತೊಂದರೆ ಕೊಡುವುದಿಲ್ಲ. ಅವರ ಹಕ್ಕುಗಳನ್ನು ಗೌರವಿಸುತ್ತೇವೆ ಎಂದು ಹೇಳಿದ್ದ ತಾಲಿಬಾನಿಗಳು (Taliban Terrorists) ನಿಧಾನವಾಗಿ ಮಹಿಳೆಯರ ಮೇಲಿನ ಕಟ್ಟುಪಾಡು ಹೆಚ್ಚಿಸುತ್ತಿದ್ದಾರೆ. ಇದೀಗ ಅಫ್ಘಾನಿಸ್ತಾನದ ಕಂದಹಾರ್ (Kandahar)ನ ರೇಡಿಯೋ ಮತ್ತು ಟಿವಿ ಚಾನಲ್ಗಳಲ್ಲಿ ಮಹಿಳೆಯರ ಧ್ವನಿ, ಸಂಗೀತ ಕಾರ್ಯಕ್ರಮವನ್ನು ತಾಲಿಬಾನ್ ಉಗ್ರರು ನಿಷೇಧಿಸಿದ್ದಾರೆ.
ಆಗಸ್ಟ್ 15ರಂದು ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಕೆಲವು ಸುದ್ದಿ ವಾಹಿನಿಗಳು ತಮ್ಮಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ನಿರೂಪಕರನ್ನು ಕೆಲಸದಿಂದ ತೆಗೆದಿದ್ದವು. ತಾಲಿಬಾನಿಗಳ ಕ್ರೂರ ಕಾನೂನಿಗೆ ಹೆದರಿ ಈ ನಿರ್ಧಾರ ಕೈಗೊಂಡಿದ್ದವು. ಈ ಮಧ್ಯೆ ತಾಲಿಬಾನ್ ಉಗ್ರರು, ಮಹಿಳೆಯರನ್ನೂ ಕೆಲಸಕ್ಕೆ ಕರೆಯುತ್ತಿದ್ದಾರೆ. ಇಸ್ಲಾಮಿಕ್ ಕಾನೂನಿನಡಿ ಮಹಿಳೆಯರ ಶಿಕ್ಷಣ ಮತ್ತು ಉದ್ಯೋಗಕ್ಕೆ ಅವಕಾಶ ನೀಡುವುದಾಗಿ ತಾಲಿಬಾನಿಗಳು ಭರವಸೆ ಕೊಟ್ಟಿದ್ದಾರೆ ಎಂದೂ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಇದೀಗ ತಾಲಿಬಾನ್ ಉಲ್ಟಾ ಹೊಡೆದಿದೆ. ಹುಡುಗಿಯರು-ಹುಡುಗರು ಒಟ್ಟಾಗಿ ಶಿಕ್ಷಣವನ್ನೂ ಕಲಿಯುವಂತಿಲ್ಲ ಎಂದೂ ಹೇಳಿದೆ.
ಅದೆಲ್ಲದರ ಹೊರತಾಗಿಯೂ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಕಷ್ಟಪಡುತ್ತಿರುವ ಬಗ್ಗೆ ದಿನನಿತ್ಯವೂ ವರದಿಯಾಗುತ್ತಿದೆ. ಈ ಹಿಂದೆ 20 ವರ್ಷಗಳ ಹಿಂದೆ ತಾಲಿಬಾನ್ ಆಡಳಿತ ಇದ್ದಾಗಲೂ ಸಹ ಮಹಿಳೆಯರು ಸಿಕ್ಕಾಪಟೆ ಕಷ್ಟ ಅನುಭವಿಸಿದ್ದಾರೆ. ತಾಲಿಬಾನಿಗಳ ಶರಿಯಾ ಕಾನೂನಿನ ಅನ್ವಯ ಮಹಿಳೆಯರು ಮುಖ ಮುಚ್ಚಿಕೊಳ್ಳದೆ, ಜತೆಯಲ್ಲಿ ರಕ್ತ ಸಂಬಂಧಿ ಪುರುಷ ಅಥವಾ ಪತಿ ಇಲ್ಲದೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಂತಿರಲಿಲ್ಲ.
ಇದನ್ನೂ ಓದಿ: Yakshagana: ಬರೆದದ್ದರಲ್ಲಿ ಏನೂ ಇಲ್ಲ ಅನಿಸಿದರೆ ಒಂದು ವಿಡಿಯೋ ಹಾಕಿದ್ದೇನೆ; ಅದನ್ನು ನೋಡಿ ನಕ್ಕುಬಿಡಿ
‘ಭಾರತ್ ಸರಣಿ’ಯಲ್ಲಿ ವಾಹನ ನೋಂದಣಿ; ಕೇಂದ್ರ ಸರ್ಕಾರ ಪರಿಚಯಿಸಿದ ನೂತನ ಪದ್ಧತಿಯ ಸಮಗ್ರ ವಿವರ ಇಲ್ಲಿದೆ
Published On - 4:39 pm, Sun, 29 August 21