ಟ್ರಂಪ್ ಶಾಂತಿ ಪಾಠ ಕೇಳೋರಿಲ್ಲ ಮತ್ತೆ ಥೈಲ್ಯಾಂಡ್, ಕಾಂಬೋಡಿಯಾ ನಡುವೆ ಯುದ್ಧ ಶುರು
ಟ್ರಂಪ್ ಶಾಂತಿ ಪಾಠವನ್ನು ಕೇಳುವವರೇ ಇಲ್ಲ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮಧ್ಯಸ್ಥಿಕೆಯಲ್ಲಿ ಮಾಡಿಕೊಂಡ ಕದನ ವಿರಾಮ ಒಪ್ಪಂದವನ್ನು ಥೈಲ್ಯಾಂಡ್, ಕಾಂಬೋಡಿಯಾ ಎರಡೂ ದೇಶಗಳೂ ಉಲ್ಲಂಘಿಸಿವೆ. ಥೈಲ್ಯಾಂಡ್ ಕಾಂಬೋಡಿಯಾದೊಂದಿಗಿನ ವಿವಾದಿತ ಗಡಿ ಪ್ರದೇಶದಲ್ಲಿ ವೈಮಾನಿಕ ದಾಳಿ ನಡೆಸಿದೆ ಎಂದು ಥಾಯ್ ಮಿಲಿಟರಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಪೂರ್ವ ಪ್ರಾಂತ್ಯದ ಉಬೊನ್ ರಾಟ್ಚಥಾನಿಯ ಎರಡು ಪ್ರದೇಶಗಳಲ್ಲಿ ನಡೆದ ಹೊಸ ಘರ್ಷಣೆಯಲ್ಲಿ ಒಬ್ಬ ಥಾಯ್ ಸೈನಿಕ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಥಾಯ್ ಸೇನೆಯ ಹೇಳಿಕೆ ತಿಳಿಸಿದೆ.

ಥೈಲ್ಯಾಂಡ್, ಡಿಸೆಂಬರ್ 08: ಟ್ರಂಪ್ ಶಾಂತಿ ಪಾಠವನ್ನು ಕೇಳುವವರೇ ಇಲ್ಲ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮಧ್ಯಸ್ಥಿಕೆಯಲ್ಲಿ ಮಾಡಿಕೊಂಡ ಕದನ ವಿರಾಮ ಒಪ್ಪಂದವನ್ನು ಥೈಲ್ಯಾಂಡ್, ಕಾಂಬೋಡಿಯಾ ಎರಡೂ ದೇಶಗಳೂ ಉಲ್ಲಂಘಿಸಿವೆ. ಥೈಲ್ಯಾಂಡ್ ಕಾಂಬೋಡಿಯಾದೊಂದಿಗಿನ ವಿವಾದಿತ ಗಡಿ ಪ್ರದೇಶದಲ್ಲಿ ವೈಮಾನಿಕ ದಾಳಿ ನಡೆಸಿದೆ ಎಂದು ಥಾಯ್ ಮಿಲಿಟರಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಪೂರ್ವ ಪ್ರಾಂತ್ಯದ ಉಬೊನ್ ರಾಟ್ಚಥಾನಿಯ ಎರಡು ಪ್ರದೇಶಗಳಲ್ಲಿ ನಡೆದ ಹೊಸ ಘರ್ಷಣೆಯಲ್ಲಿ ಒಬ್ಬ ಥಾಯ್ ಸೈನಿಕ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಥಾಯ್ ಸೇನೆಯ ಹೇಳಿಕೆ ತಿಳಿಸಿದೆ. ತನ್ನ ಪಡೆಗಳು ಕಾಂಬೋಡಿಯಾದಿಂದ ಗುಂಡಿನ ದಾಳಿಗೆ ಒಳಗಾದವು ಎಂದು ಸೇನೆಯು ತಿಳಿಸಿದೆ, ಇದರಿಂದಾಗಿ ಹಲವಾರು ಮಿಲಿಟರಿ ಸ್ಥಾನಗಳ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ.
ಏತನ್ಮಧ್ಯೆ, ಕಾಂಬೋಡಿಯಾದ ರಕ್ಷಣಾ ಸಚಿವಾಲಯವು ಇಂದು ಬೆಳಗ್ಗೆ ಥಾಯ್ ಪಡೆಗಳು ತನ್ನ ಎರಡು ಸೇನಾ ನೆಲೆಗಳ ಮೇಲೆ ದಾಳಿ ಮಾಡಿದೆ ಎಂದು ತಿಳಿಸಿದೆ. ಕಳೆದ ಹಲವಾರು ದಿನಗಳಿಂದ ಥಾಯ್ ಪಡೆಗಳು ಪ್ರಚೋದನಕಾರಿ ಚಟುವಟಿಕೆಗಳನ್ನು ನಡೆಸುತ್ತಿವೆ ಮತ್ತು ಕಾಂಬೋಡಿಯನ್ ಪಡೆಗಳು ಪ್ರತೀಕಾರ ತೀರಿಸಿಕೊಂಡಿಲ್ಲ ಎಂದು ಸಚಿವಾಲಯ ಹೇಳಿಕೊಂಡಿದೆ.
ಮತ್ತಷ್ಟು ಓದಿ: ಒಂದು ದೇವಸ್ಥಾನಕ್ಕಾಗಿ ನಡೀತಿದೆ ಥೈಲ್ಯಾಂಡ್, ಕಾಂಬೋಡಿಯಾ ನಡುವೆ ಯುದ್ಧ, ಚೀನಾದ ಪಾತ್ರವೇನು?
ಅಕ್ಟೋಬರ್‌ನಲ್ಲಿ, ಕೌಲಾಲಂಪುರದಲ್ಲಿ ಎರಡೂ ದೇಶಗಳು ವಿಸ್ತೃತ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದವು. ಜುಲೈ ಸಂಘರ್ಷದಲ್ಲಿ 48 ಜನರು ಸಾವನ್ನಪ್ಪಿದ್ದರು ಮತ್ತು ತಾತ್ಕಾಲಿಕವಾಗಿ ಸುಮಾರು 300,000 ಜನರನ್ನು ಸ್ಥಳಾಂತರಿಸಲಾಗಿತ್ತು. ಆ ಸಮಯದಲ್ಲಿ ಎರಡೂ ದೇಶಗಳು ಭಾರೀ ಫಿರಂಗಿ ಮತ್ತು ರಾಕೆಟ್ ಗುಂಡಿನ ದಾಳಿ, ಪ್ರತಿದಾಳಿ ನಡೆದಿತ್ತು. ಒಬ್ಬ ಸೈನಿಕ ಗಾಯಗೊಂಡ ನಂತರ ಥಾಯ್ ಮಿಲಿಟರಿ ಒಪ್ಪಂದವನ್ನು ಸ್ಥಗಿತಗೊಳಿಸಿತು. ಕಳೆದ ತಿಂಗಳು, ಭೂಗಣಿ ಸ್ಫೋಟದಲ್ಲಿ ಥಾಯ್ ಸೈನಿಕರೊಬ್ಬರು ಗಾಯಗೊಂಡಿದ್ದರು. ಇದರ ನಂತರ, ಥಾಯ್ ಸರ್ಕಾರವು ಕಾಂಬೋಡಿಯಾದೊಂದಿಗಿನ ಕದನ ವಿರಾಮ ಒಪ್ಪಂದವನ್ನು ಸ್ಥಗಿತಗೊಳಿಸಿತು.
ನಾಲ್ಕು ಗಡಿ ಜಿಲ್ಲೆಗಳಿಂದ 385,000 ಕ್ಕೂ ಹೆಚ್ಚು ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ ಮತ್ತು 35,000 ಕ್ಕೂ ಹೆಚ್ಚು ಜನರು ಈಗಾಗಲೇ ತಾತ್ಕಾಲಿಕ ಶಿಬಿರಗಳನ್ನು ತಲುಪಿದ್ದಾರೆ ಎಂದು ಥಾಯ್ ಮಿಲಿಟರಿ ವರದಿ ಮಾಡಿದೆ. 11 ನೇ ಶತಮಾನದ ಪ್ರಿಯಾ ವಿಹಾರ್ ದೇವಾಲಯವು ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಯುದ್ಧಕ್ಕೆ ಕಾರಣವಾಗಿದೆ.
ಈ ದೇವಾಲಯವು ಕಾಂಬೋಡಿಯಾದ ಪ್ರಿಯಾ ವಿಹಾರ್ ಪ್ರಾಂತ್ಯ ಮತ್ತು ಥೈಲ್ಯಾಂಡ್‌ನ ಸಿಸಾಕೆಟ್ ಪ್ರಾಂತ್ಯದ ಗಡಿಯಲ್ಲಿದೆ. 1962 ರಲ್ಲಿ, ಅಂತರರಾಷ್ಟ್ರೀಯ ನ್ಯಾಯಾಲಯ (ICJ) ಈ ದೇವಾಲಯವು ಕಾಂಬೋಡಿಯಾಕ್ಕೆ ಸೇರಿದೆ ಎಂದು ತೀರ್ಪು ನೀಡಿತ್ತು. ಈ ಭೂಮಿ ತನಗೆ ಸೇರಿದೆ ಎಂದು ಥೈಲ್ಯಾಂಡ್ ಹೇಳುತ್ತದೆ.
ಈ ವಿವಾದ 1907 ರಲ್ಲಿ ಪ್ರಾರಂಭವಾಯಿತು, ಆಗ ಕಾಂಬೋಡಿಯಾವನ್ನು ಆಳುತ್ತಿದ್ದ ಫ್ರಾನ್ಸ್, ಕಾಂಬೋಡಿಯಾದಲ್ಲಿನ ದೇವಾಲಯವನ್ನು ತೋರಿಸುವ ನಕ್ಷೆಯನ್ನು ಮಾಡಿತು. ಥೈಲ್ಯಾಂಡ್ ಈ ನಕ್ಷೆಯನ್ನು ಎಂದಿಗೂ ಸಂಪೂರ್ಣವಾಗಿ ಸ್ವೀಕರಿಸಲಿಲ್ಲ. 2008 ರಲ್ಲಿ, ಕಾಂಬೋಡಿಯಾ ಈ ದೇವಾಲಯವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವನ್ನಾಗಿ ಮಾಡಿದಾಗ, ಥೈಲ್ಯಾಂಡ್ ಅದನ್ನು ವಿರೋಧಿಸಿದ್ದರಿಂದ ವಿವಾದ ಮತ್ತಷ್ಟು ಹೆಚ್ಚಾಯಿತು.
ಇದರ ನಂತರ, 2008-2011 ರವರೆಗೆ, ಎರಡೂ ದೇಶಗಳ ಸೈನ್ಯಗಳ ನಡುವೆ ಅನೇಕ ಘರ್ಷಣೆಗಳು ನಡೆದವು, ಇದರಲ್ಲಿ ಅನೇಕ ಜನರು ಸಾವನ್ನಪ್ಪಿದ್ದರು.ಈ ದೇವಾಲಯವನ್ನು 11 ನೇ ಶತಮಾನದಲ್ಲಿ ಖಮೇರ್ ಚಕ್ರವರ್ತಿ ಸೂರ್ಯವರ್ಮನ್ ಶಿವನಿಗಾಗಿ ನಿರ್ಮಿಸಿದ್ದಾರೆ . ಕಾಲಾನಂತರದಲ್ಲಿ, ಈ ದೇವಾಲಯವು ಕೇವಲ ನಂಬಿಕೆಯ ಕೇಂದ್ರವಲ್ಲ, ಆದರೆ ರಾಷ್ಟ್ರೀಯತೆ, ರಾಜಕೀಯ ಮತ್ತು ಮಿಲಿಟರಿ ಶಕ್ತಿಯ ಕ್ಷೇತ್ರವಾಗಿದೆ. ಈ ದೇವಾಲಯದಲ್ಲಿ ಇನ್ನೂ ಶಿವಲಿಂಗವಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




