
ವಾಷಿಂಗ್ಟನ್, ಜನವರಿ 19: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ (Donald Trump) ಅವರು ಜನವರಿ 20ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಆಯ್ಕೆ ಆಗಿದ್ದು, ಪದಗ್ರಹಣಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ. ಹೀಗಾಗಿ ಕ್ಯಾಪಿಟಲ್ ಹಿಲ್ನಿಂದ ಶ್ವೇತಭವನದವರೆಗೆ ನಡೆಯಲಿರುವ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಭಾರತೀಯ ಅಮೆರಿಕನ್ ಡೋಲ್ ಬ್ಯಾಂಡ್ ಆದ ಶಿವಂ ಡೋಲ್ ತಾಶಾ ಪಾಠಕ್ ಗೆ ಆಹ್ವಾನ ನೀಡಲಾಗಿದೆ.
ಟೆಕ್ಸಾಸ್ ಮೂಲದ ಭಾರತೀಯ ಸಾಂಪ್ರದಾಯದ ಶಿವಂ ಡೋಲ್ ತಾಶಾ ಪಾಠಕ್ ತನ್ನ ರೋಮಾಂಚಕಾರಿ ಪ್ರದರ್ಶನದಿಂದ ಎಲ್ಲರ ಮನ ಗೆಲ್ಲಲು ಸಜ್ಜಾಗಿದೆ. ಈ ಕಾರ್ಯಕ್ರಮದಲ್ಲಿ ವಿಶ್ವದಾದ್ಯಂತ ಭಾರತದ ಶ್ರೀಮಂತ ಸಂಗೀತ ಸಂಪ್ರದಾಯಗಳ ಒಂದು ನೋಟವನ್ನು ನೀಡಲಿದೆ.
ಇನ್ನು ಈ ಬಗ್ಗೆ ಶಿವಂ ಡೋಲ್ ತಾಶಾ ಪಾಠಕ್ ಬ್ಯಾಂಡ್ ಸೋಶಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡಿದೆ. ಇದು ಎಲ್ಲಾ ಭಾರತೀಯರಿಗೆ ಹೆಮ್ಮೆಯ ಕ್ಷಣವಾಗಿದೆ. ಜನವರಿ 20ರಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ 60ನೇ ಅಧ್ಯಕ್ಷೀಯ ಉದ್ಘಾಟನಾ ಪೆರೇಡ್ನಲ್ಲಿ ಪ್ರದರ್ಶನ ನೀಡಲು ಶಿವಂ ಡೋಲ್ ತಾಶಾ ಬ್ಯಾಂಡ್ಗೆ ಆಹ್ವಾನಿಸಿರುವುದು ನಿಮ್ಮೊಂದಿಗೆ ಹಂಚಿಕೊಳ್ಳಲು ಖುಪಿಯಾಗುತ್ತಿದೆ ಎಂದು ಪೋಸ್ಟ್ ಮಾಡಿದೆ.
ಈ ಐತಿಹಾಸಿಕ ಕ್ಷಣವನ್ನು ವೈವಿಧ್ಯತೆಯಲ್ಲಿ ಏಕತೆ ಮತ್ತು ಜಾಗತಿಕ ಸಂಪ್ರದಾಯಗಳ ಮೆಚ್ಚುಗೆಗೆ ಯುಎಸ್ನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಅಂತಹ ಕಾರ್ಯಕ್ರಮದಲ್ಲಿ ಮೊದಲ ಭಾರಿಗೆ ಭಾರತೀಯ ಕಲೆಯ ಪ್ರದರ್ಶನ ಸೇರ್ಪಡೆಯಾಗಿದೆ. ಈ ಮೈಲಿಗಲ್ಲನ್ನು ಆಚರಿಸೋಣ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತ ಪರಂಪರೆಯ ರೋಮಾಂಚಕಾರಿ ಪ್ರದರ್ಶಿನ ನೀಡಲಿರುವ ಶಿವಂ ಬ್ಯಾಂಡ್ಗೆ ನಿಮ್ಮ ಬೆಂಬಲವಿರಲಿ ಎಂದು ತಿಳಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:07 pm, Sun, 19 January 25