ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನೆರವಾಗಲು ಎರಡನೇ ಹಂತದಲ್ಲಿ ಅಮೆರಿಕ 100 ವೆಂಟಿಲೇಟರ್‌ಗಳನ್ನು ಒದಗಿಸಿದೆ.
US ಸರ್ಕಾರ, ಯುಎಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (USAID) ಮೂಲಕ, ಭಾರತ ಸರ್ಕಾರ ಮತ್ತು ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಸಹಯೋಗದೊಂದಿಗೆ ಎರಡನೇ ಹಂತದಲ್ಲಿ 100 ಹೊಸ ವೆಂಟಿಲೇಟರ್‌ಗಳನ್ನು ನೀಡಿದೆ. ಈ ಮೂಲಕ COVID-19 ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಹಾಯ ಮಾಡಲು ಮುಂದಾಗಿದೆ. ಜೂನ್ ತಿಂಗಳಿನಲ್ಲಿ ಮೊದಲ ಹಂತವಾಗಿ 100 ವೆಂಟಿಲೇಟರ್‌ಗಳನ್ನು ಪೂರೈಸಲಾಗಿತ್ತು. ಈಗ ಪುನಃ 100 ವೆಂಟಿಲೇಟರ್‌ಗಳನ್ನು ನೀಡಿದ್ದಾರೆ.
ವೆಂಟಿಲೇಟರ್‌ಗಳನ್ನು ಅಮೆರಿಕದಲ್ಲಿ ತಯಾರಿಸಲಾಗುತ್ತದೆ. ವೈರಸ್ ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಭಾರತಕ್ಕೆ ಅನುಕೂಲಕರವಾಗಿರುತ್ತವೆ. ವೆಂಟಿಲೇಟರ್‌ಗಳ ಜೊತೆಗೆ, ಯುಎಸ್‌ಐಐಡಿ ಈ ಯಂತ್ರಗಳನ್ನು ನಿರ್ವಹಿಸಲು ಅಗತ್ಯವಾದ ಹೆಚ್ಚುವರಿ ವಸ್ತುಗಳನ್ನು ಒಳಗೊಂಡಿರುವ ಪ್ಯಾಕೇಜ್ ಒದಗಿಸಲಾಗುತ್ತಿದೆ. ಉದಾಹರಣೆಗೆ ಟ್ಯೂಬ್‌ಗಳು, ಫಿಲ್ಟರ್‌ಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ವೆಂಟಿಲೇಟರ್‌ಗಳ ಜೊತೆ ನೀಡಲಾಗುತ್ತೆ.
ಮೊದಲ ಹಂತದಲ್ಲಿ ಜೂನ್ 14 ರಂದು ಭಾರತಕ್ಕೆ 100 ವೆಂಟಿಲೇಟರ್‌ಗಳನ್ನು ಪೂರೈಸಲಾಗಿತ್ತು. ಈಗ ಮತ್ತೆ 200 ವೆಂಟಿಲೇಟರ್‌ಗಳನ್ನು ನೀಡುವ ಮೂಲಕ ಒಟ್ಟು 200 ವೆಂಟಿಲೇಟರ್‌ಗಳನ್ನು ದೇಣಿಗೆ ನೀಡಿ ಆರೋಗ್ಯ ಕ್ಷೇತ್ರದಲ್ಲಿ ಭಾರತ ಮತ್ತು ಅಮೆರಿಕ ಸಹಯೋಗದ ಇತಿಹಾಸ ಸೃಷ್ಟಿಯಾಗಿದೆ.
https://www.youtube.com/watch?v=WcjiwI8QErk&feature=youtu.be
Published On - 10:14 am, Thu, 20 August 20