ರಜಾ ದಿನಗಳಲ್ಲಿ ವಿದೇಶ ಪ್ರವಾಸ(Tour) ಹೋಗಲು ನೀವು ಆಲೋಚಿಸುತ್ತಿದ್ದರೆ, ಸೆಲ್ಫಿ ಪ್ರಿಯರಾಗಿದ್ದರೆ ಪೋರ್ಟೋಫಿನೋಗೆ ಮಾತ್ರ ಹೋಗ್ಬೇಡಿ. ಇಲ್ಲಿ ಸೆಲ್ಫಿ ತೆಗೆದುಕೊಂಡರೆ 25 ಸಾವಿರ ರೂ. ದಂಡ ಕಟ್ಬೇಕು. ಇಲ್ಲಿ ಹೋಗಿಯೂ ಫೋಟೊ ತೆಗೆಯಲು ಸಾಧ್ಯವಾಗಿಲ್ಲ ಅಂದ್ರೆ ಹೇಗೆ ಹೇಳಿ. ಬಿಬಿಸಿ ವರದಿ ಪ್ರಕಾರ, ಸೆಲ್ಪಿ ಪ್ರಿಯರಾಗಿದ್ದರೆ ನೀವು ಭೇಟಿ ನೀಡಲು ಪೋರ್ಟೋಫಿನೋ ಉತ್ತಮ ಸ್ಥಳವಲ್ಲ. ಇಟಾಲಿಯನ್ ರಿವೇರಿಯಾದ ನಗರವು ಪ್ರವಾಸಿಗರು ಜನಪ್ರಿಯ ಸೌಂದರ್ಯ ತಾಣಗಳಲ್ಲಿ ಚಿತ್ರಗಳನ್ನು ತೆಗೆದುಕೊಳ್ಳುವುದನ್ನು ತಡೆಯಲು ನೋ-ವೇಟಿಂಗ್ ಝೋನ್ ಅನ್ನು ಪರಿಚಯಿಸಿದೆ.
ಈಗ ನೋ-ವೇಟಿಂಗ್ ಜೋನ್ನಲ್ಲಿ ದೀರ್ಘಕಾಲ ಸುತ್ತಾಡಿದರೆ 25 ಸಾವಿರ ರೂ.ವರೆಗೂ ದಂಡ ವಿಧಿಸಬಹುದು. ಪೋರ್ಟೊಫಿನೊ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದಾಗ ಈಸ್ಟರ್ ವಾರಾಂತ್ಯದಲ್ಲಿ ನಿಯಮಗಳು ಮೊದಲು ಜಾರಿಗೆ ಬಂದವು.
ಮತ್ತಷ್ಟು ಓದಿ: Spirit of Goa: ಗೋವಾದಲ್ಲಿ ಏ.21 ರಿಂದ 23ರವರೆಗೆ ನಡೆಯಲಿದೆ ‘ಸ್ಪಿರಿಟ್ ಆಫ್ ಗೋವಾ’ ಉತ್ಸವ
ಆದರೆ ಈ ನಿಯಮಗಳು ಅಕ್ಟೋಬರ್ ವರೆಗೆ ಜಾರಿಯಲ್ಲಿರುತ್ತವೆ. ಬೇಸಿಗೆಯ ತಿಂಗಳುಗಳಲ್ಲಿ ನಗರವು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ನಿರೀಕ್ಷಿಸುತ್ತಿರುವುದರಿಂದ, ಈ ನಿಯಮಗಳು ಪ್ರತಿದಿನ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಜಾರಿಯಲ್ಲಿರುತ್ತವೆ.
ಸೆಲ್ಫಿಗಳನ್ನು ನಿಷೇಧಿಸುವ ಏಕೈಕ ಸ್ಥಳ ಪೋರ್ಟೋಫಿನೋ ಅಲ್ಲ, ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್ ಮತ್ತು UK ಯ ಕೆಲವು ಸ್ಥಳಗಳು ಈ ನಿಯಮಗಳನ್ನು ಹೊಂದಿವೆ. ನ್ಯೂಯಾರ್ಕ್ ಮತ್ತು ಕ್ಯಾಲಿಫೋರ್ನಿಯಾ ಎರಡೂ ಪ್ರಾಣಿಸಂಗ್ರಹಾಲಯಗಳಲ್ಲಿ ಮತ್ತು ಆ ಪ್ರದೇಶಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದನ್ನು ಕಾನೂನಿನ ಮೂಲಕ ನಿಷೇಧಿಸಿವೆ. ಭದ್ರತಾ ಕಾರಣಗಳಿಗಾಗಿ, ಲಂಡನ್ ಟವರ್‌ನ ಕೆಲವು ಪ್ರದೇಶಗಳಲ್ಲಿ ಸೆಲ್ಫಿಗಳನ್ನು ನಿಷೇಧಿಸಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ