Pakistan: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮೂವರು ಹಿಂದೂ ಯುವತಿಯರ ಮತಾಂತರಗೊಳಿಸಿ ವಿವಾಹವಾದ ಅಪಹರಣಕಾರರು

|

Updated on: Jul 21, 2023 | 6:55 PM

ಹಿಂದೂ ಉದ್ಯಮಿ ಲೀಲಾ ರಾಮ್ ಅವರ ಪುತ್ರಿಯರಾದ ಚಾಂದಿನಿ, ರೋಶ್ನಿ ಮತ್ತು ಪರಮೇಶ್ ಕುಮಾರಿ ಅವರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿದ್ದಾರೆ ಎಂದು ಪಾಕಿಸ್ತಾನದ ದರೆವಾರ್ ಇತೆಹಾದ್ ಮುಖ್ಯಸ್ಥ ಶಿವ ಕಚ್ಚಿ ಹೇಳಿದ್ದಾರೆ.

Pakistan: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮೂವರು ಹಿಂದೂ ಯುವತಿಯರ ಮತಾಂತರಗೊಳಿಸಿ ವಿವಾಹವಾದ ಅಪಹರಣಕಾರರು
ಸಾಂದರ್ಭಿಕ ಚಿತ್ರ
Follow us on

ಇಸ್ಲಾಮಾಬಾದ್: ಪಾಕಿಸ್ತಾನದ ಸಿಂಧ್ (Sindh Province) ಪ್ರಾಂತ್ಯದಲ್ಲಿ ಮೂವರು ಹಿಂದೂ (Hindu) ಸಹೋದರಿಯರನ್ನು ಅಪಹರಿಸಿ ಬಲವಂತದಿಂದ ಇಸ್ಲಾಂಗೆ ಮತಾಂತರಿಸಲಾಗಿದ್ದು, ಅಪಹರಣಕಾರರನ್ನೇ ಮದುವೆಯಾಗುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಹಿಂದೂ ಉದ್ಯಮಿಯ ಮೂವರು ಪುತ್ರಿಯರನ್ನು ಅಪಹರಣ ಮಾಡಲಾಗಿದೆ. ಅವರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ ಅಪಹರಣಕಾರರು ವಿವಾಹವಾಗಿದ್ದಾರೆ ಎಂದು ಪಾಕಿಸ್ತಾನದ ಪ್ರಮುಖ ಅಲ್ಪಸಂಖ್ಯಾತ ಹಕ್ಕುಗಳ ಗುಂಪು ಆರೋಪಿಸಿದೆ.

ಹಿಂದೂ ಉದ್ಯಮಿ ಲೀಲಾ ರಾಮ್ ಅವರ ಪುತ್ರಿಯರಾದ ಚಾಂದಿನಿ, ರೋಶ್ನಿ ಮತ್ತು ಪರಮೇಶ್ ಕುಮಾರಿ ಅವರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿದ್ದಾರೆ ಎಂದು ಪಾಕಿಸ್ತಾನದ ದರೆವಾರ್ ಇತೆಹಾದ್ ಮುಖ್ಯಸ್ಥ ಶಿವ ಕಚ್ಚಿ ಹೇಳಿದ್ದಾರೆ.

ಪೀರ್ ಜಾವೇದ್ ಅಹ್ಮದ್ ಖಾದ್ರಿ ಎಂಬಾತನಿಂದ ಯುವತಿಯರ ಮತಾಂತರ ಮಾಡಿಸಲಾಯಿತು ಮತ್ತು ನಂತರ ಅವರನ್ನು ಮುಸ್ಲಿಂ ಪುರುಷರು ವಿವಾಹವಾದರು ಎಂದು ಶಿವ ದೂರಿದ್ದಾರೆ.

ಸಂಘಟನೆಯ ವತಿಯಿಂದ ಮನವಿಗಳನ್ನು ನೀಡಿದ ಹೊರತಾಗಿಯೂ ಪೊಲೀಸರು ಮತ್ತು ಅಧಿಕಾರಿಗಳು ಆರೋಪಿಗಳನ್ನು ಬಂಧಿಸದಿರುವ ಕಾರಣ, ಹಿಂದೂ ಹುಡುಗಿಯರ ಬಲವಂತದ ಮತಾಂತರದ ಸಮಸ್ಯೆ ಮುಂದುವರಿದಿದೆ ಎಂದು ಕಚ್ಚಿ ಹೇಳಿದ್ದಾರೆ.

ಇದನ್ನೂ ಓದಿ: ಪಬ್ ಜಿ ಲವ್ ಸ್ಟೋರಿ; ಪಾಕ್ ಪ್ರಜೆ ಸೀಮಾರಿಂದ 2 ವಿಡಿಯೋ ಕ್ಯಾಸೆಟ್, 4 ಫೋನ್, 6 ಪಾಸ್​​​ಪೋರ್ಟ್ ವಶಕ್ಕೆ

ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಭಾರತದ ಯುವಕನನ್ನು ಪ್ರೀತಿಸಿ ದೇಶ ತೊರೆದ ಘಟನೆಯ ನಂತರ ನದಿತೀರದ ಪ್ರದೇಶಗಳಲ್ಲಿ ಹಿಂದೂ ಸಮುದಾಯದ ಮೇಲೆ ದಾಳಿಗಳು ಹೆಚ್ಚಿವೆ ಎಂದು ಕಚ್ಚಿ ಹೇಳಿದ್ದಾರೆ. ನಾಲ್ಕು ಮಕ್ಕಳ ತಾಯಿಯಾಗಿರುವ ಸೀಮಾ ಹೈದರ್ ಪಬ್​​ಜಿ ಆನ್​​ಲೈನ್ ಗೇಮ್ ಮೂಲಕ ಪರಿಚಯವಾದ ಹಿಂದೂ ವ್ಯಕ್ತಿ ಸಚಿನ್ ಮೀನಾ ಅವರೊಂದಿಗೆ ವಾಸಿಸಲು ಭಾರತಕ್ಕೆ ನುಸುಳಿದ್ದರು. ಅವರು ಆನ್‌ಲೈನ್ ಗೇಮ್ ಪ್ಲಾಟ್‌ಫಾರ್ಮ್ ಮೂಲಕ ಸಂಪರ್ಕಕ್ಕೆ ಬಂದಿದ್ದರು. ಈ ಘಟನೆಯಿಂದಾಗಿ ಹಿಂದೂಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ನದಿಯ ಪ್ರದೇಶಗಳಲ್ಲಿ ಡಕಾಯಿತರಿಂದ ಪ್ರತಿದಿನ ಬೆದರಿಕೆಗಳು ನಡೆಯುತ್ತಿವೆ ಎಂದು ಕಚ್ಚಿ ಹೇಳಿದ್ದಾರೆ.

ಕಳೆದ ವಾರ, ಸಿಂಧ್ ಪ್ರಾಂತ್ಯದ ಕಾಶ್ಮೋರ್ ಪ್ರದೇಶದಲ್ಲಿ ದುಷ್ಕರ್ಮಿಗಳ ತಂಡವು ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿತ್ತು. ಪಾಕಿಸ್ತಾನದ ಬಹುಪಾಲು ಹಿಂದೂ ಜನಸಂಖ್ಯೆಯು ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ