ಪ್ರಧಾನಿ ಮೋದಿ ಭಾರತದಲ್ಲಿರುವ ಮುಸ್ಲಿಮರನ್ನು ಹಿಂದೂಗಳನ್ನಾಗಿ ಪರಿವರ್ತಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ಗಡಿಪಾರಾಗಿರುವ ಟಿಬೆಟಿಯನ್ ಅಧ್ಯಕ್ಷ ಪೆನ್ಪಾ ಸೆರಿಂಗ್(Penpa Tsering) ಹೇಳಿದ್ದಾರೆ. ಭಾರತದಲ್ಲಿ ನಡೆಯುತ್ತಿರುವುದೇ ಬೇರೆ ಬೇರೆ ದೇಶಗಳಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಬೇರೆ ರೀತಿಯಲ್ಲಿಯೇ ಅರ್ಥೈಸಲಾಗುತ್ತಿದೆ. ನಾನು ಕೂಡ ಭಾರತದಲ್ಲೇ ಹುಟ್ಟಿದವನು ಅಲ್ಲಿಯೇ ವಾಸಿಸಿದ್ದೇನೆ, ದೇಶದ ಬಗ್ಗೆ ಸಂಪೂರ್ಣವಾಗಿ ನನಗೆ ತಿಳಿದಿದೆ ಎಂದಿದ್ದಾರೆ.
ಆಸ್ಟ್ರೇಲಿಯಾ ಪ್ರೆಸ್ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು ದಬ್ಬಾಳಿಕೆ ನೀತಿ ಅನುಸರಿಸುತ್ತಲೂ ಇಲ್ಲ , ಅವರು ಮುಸ್ಲಿಮರನ್ನು ಹಿಂದೂಗಳಾಗಿ ಬದಲಾಯಿಸುವ ಪ್ರಯತ್ನವನ್ನೂ ಮಾಡುತ್ತಿಲ್ಲ, ಸರ್ಕಾರವನ್ನು ದೂಷಿಸುವವರು ಈ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲಿ ವೈವಿಧ್ಯಮಯ ಸಂಸ್ಕೃತಿ ಇದೆ, ಎಲ್ಲಾ ಜನಾಂಗದವರು ಒಟ್ಟಿಗೆ ವಾಸಿಸುತ್ತಿದ್ದಾರೆ, ಮೇಲು ಕೀಳು ಭಾವನೆಗಳಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ: Explainer | ಟಿಬೆಟ್ನ ದೇಶಭ್ರಷ್ಟ ಸಂಸತ್ಗೆ ಚುನಾವಣೆ: ಹೇಗಿರುತ್ತೆ ಪ್ರತಿನಿಧಿಗಳ ಆಯ್ಕೆ? ಮತದಾನ ಪ್ರಕ್ರಿಯೆ?
ದೇಶಕ್ಕೆ ಕೆಟ್ಟ ಹೆಸರು ತರಬೇಕೆಂದು ಆಲೋಚನೆ ಮಾಡುವವರು ಎಲ್ಲೆಡೆ ಇದ್ದಾರೆ, ಇವರ ಆಲೋಚನೆಗಳು ಹಾಗೂ ಮಾತುಗಳಿಂದ ಇಡೀ ದೇಶವನ್ನು ದೂಷಿಸಲು ಸಾಧ್ಯವಿಲ್ಲ.
India is the most tolerant country n most diverse country in the world – where every citizen has equal rights #NewIndia https://t.co/vlIZOFfyG6
— Rajeev Chandrasekhar ?? (@Rajeev_GoI) June 22, 2023
ಪೆನ್ಪಾ ಅವರ ವಿಡಿಯೋವನ್ನು ಹಂಚಿಕೊಂಡಿರುವ ಸಚಿವ ರಾಜೀವ್ ಚಂದ್ರಶೇಖರ್ ಭಾರತವು ಅತ್ಯಂದ ಸಹಿಷ್ಣು ರಾಷ್ಟ್ರವಾಗಿದೆ, ಪ್ರತಿಯೊಬ್ಬ ನಾಗರಿಕನಿಗೂ ಇಲ್ಲಿ ಸಮಾನ ಹಕ್ಕಿದೆ ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ