ಚೀನಾದ ಪಬ್ಲಿಕ್​ ಟಾಯ್ಲೆಟ್​ಗಳಲ್ಲಿವೆ ಟೈಮರ್​ಗಳು​, ಕಾರಣವೇನು?

|

Updated on: Jun 14, 2024 | 2:30 PM

ಚೀನಾದ ಸಾರ್ವಜನಿಕ ಶೌಚಾಲಯಗಳಲ್ಲಿ ಟೈಮರ್​ಗಳನ್ನು ಅಳವಡಿಸಲಾಗಿದ್ದು, ಪ್ರವಾಸಿಗರು ಈ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಯುನೆಸ್ಕೋ ಮಾನ್ಯತೆ ಪಡೆದ ಪ್ರಸಿದ್ಧ ಪರಂಪರೆಯಿದೆ, ಇಲ್ಲಿನ ಶೌಚಾಲಯಗಳಿಗೆ ಟೈಮರ್‌ಗಳನ್ನು ಅಳವಡಿಸಲಾಗಿದ್ದು, ಜನರು ಎಷ್ಟು ಸಮಯ ಒಳಗೆ ಇದ್ದಾರೆ ಎಂಬುದನ್ನು ತಿಳಿಸುತ್ತದೆ. ಅದನ್ನು ತೆಗೆಯಬೇಕು ಎನ್ನುವ ಬೇಡಿಕೆಯೂ ಬಂದಿದೆ.

ಚೀನಾದ ಪಬ್ಲಿಕ್​ ಟಾಯ್ಲೆಟ್​ಗಳಲ್ಲಿವೆ ಟೈಮರ್​ಗಳು​, ಕಾರಣವೇನು?
Follow us on

ಜನರು ವರ್ಷವಿಡೀ ಒಂದಲ್ಲಾ ಒಂದು ಕಡೆ ಸುತ್ತಾಡುತ್ತಲೇ ಇರುತ್ತಾರೆ, ಎಲ್ಲಾ ಪ್ರವಾಸಿ ತಾಣಗಳಲ್ಲಿ ಏನು ಇಲ್ಲದಿದ್ದರೂ ತೊಂದರೆಯಿಲ್ಲ ಸಾರ್ವಜನಿಕ ಶೌಚಾಲಯದ ಅಗತ್ಯ ಮಾತ್ರ ತುಂಬಾ ಇರುತ್ತದೆ. ಚೀನಾದ ಪ್ರವಾಸಿ ತಾಣಗಳಲ್ಲಿದ್ದ ಅನನುಕೂಲತೆಗೆ ಈಗ ಪರಿಹಾರ ಸಿಕ್ಕಿದೆ.

ಯುನೆಸ್ಕೋ ಮಾನ್ಯತೆ ಪಡೆದ ಪ್ರಸಿದ್ಧ ಪರಂಪರೆಯಿದೆ, ಇಲ್ಲಿನ ಶೌಚಾಲಯಗಳಿಗೆ ಟೈಮರ್‌ಗಳನ್ನು ಅಳವಡಿಸಲಾಗಿದ್ದು, ಜನರು ಎಷ್ಟು ಸಮಯ ಒಳಗೆ ಇದ್ದಾರೆ ಎಂಬುದನ್ನು ತಿಳಿಸುತ್ತದೆ. ಅದನ್ನು ತೆಗೆಯಬೇಕು ಎನ್ನುವ ಬೇಡಿಕೆಯೂ ಬಂದಿದೆ. ಮಹಿಳಾ ಶೌಚಾಲಯಗಳಲ್ಲಿ ಅಳವಡಿಸಲಾಗಿದೆ.

ಚೀನಾದ ಶಾಂಗ್ಕ್ಸಿ ಪ್ರಾಂತ್ಯದಲ್ಲಿ ಯುಗಾಂಗ್ ಬೌದ್ಧ ಗ್ರೊಟೊಸ್ ಚೀನಾ ಇದೆ. ಇದು ಪುರಾತನ ಬೌದ್ಧ ದೇವಾಲಯವಾಗಿದ್ದು, ಇಲ್ಲಿ 200 ಕ್ಕೂ ಹೆಚ್ಚು ಗುಹೆಗಳು ಮತ್ತು ಸಾವಿರಾರು ಬುದ್ಧನ ಪ್ರತಿಮೆಗಳಿವೆ.

ಇದು ಯುನೆಸ್ಕೋದಿಂದ ವಿಶ್ವ ಪರಂಪರೆಯ ಸ್ಥಾನಮಾನವನ್ನು ಪಡೆದಿದೆ. ಇಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಗಳಿಗೆ ಟೈಮರ್ ಅಳವಡಿಸಲಾಗಿದೆ. ಟೈಮರ್ (ಚೀನಾ ಪ್ರವಾಸಿ ತಾಣ) ಬಾಗಿಲು ಎಷ್ಟು ಸಮಯದವರೆಗೆ ಮುಚ್ಚಲ್ಪಟ್ಟಿದೆ ಎಂದು ಹೇಳುತ್ತದೆ, ಅಂದರೆ ಒಬ್ಬ ವ್ಯಕ್ತಿಯು ಬಾತ್ರೂಮ್ ಒಳಗೆ ಎಷ್ಟು ಸಮಯ ಇದ್ದಾರೆ, ಖಾಲಿ ಇರುವ ಬಾತ್​ರೂಂ ಯಾವುದು ಎಂಬುದು ಇದರಲ್ಲಿ ತಿಳಿಯುತ್ತದೆ.

ಅಲ್ಲಿಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಈ ಟೈಮರ್‌ಗಳನ್ನು ಅಳವಡಿಸಲಾಗಿದೆ. ಅನೇಕ ಬಾರಿ ಪ್ರವಾಸಿಗರು ಸ್ನಾನಗೃಹದಲ್ಲಿ ಅಗತ್ಯಕ್ಕಿಂತ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಬಾತ್ರೂಮ್ ಒಳಗೆ ಅವರಿಗೆ ಏನಾದರೂ ಸಂಭವಿಸಿದಲ್ಲಿ, ಅಥವಾ ತುರ್ತು ಪರಿಸ್ಥಿತಿ ಉದ್ಭವಿಸಿದರೆ, ಅಂತಹ ಸಂದರ್ಭದಲ್ಲಿ ಅವರನ್ನು ಉಳಿಸಬಹುದು. ಅವರ ಸುರಕ್ಷತೆಗಾಗಿ ಈ ಟೈಮರ್ ಅನ್ನು ಸ್ಥಾಪಿಸಲಾಗಿದೆ.

ಮತ್ತಷ್ಟು ಓದಿ: ಬೆಂಗಳೂರು: ಬ್ಯಾಗ್ ರಸ್ತೆಬದಿ ಇಟ್ಟು ಶೌಚಾಲಯ ತೆರಳಿ ಸ್ವಲ್ಪಹೊತ್ತು ಆತಂಕ ಸೃಷ್ಟಿಸಿದ ಮಹಿಳೆ

ಈ ಟೈಮರ್‌ಗಳು ಬಾತ್‌ರೂಮ್ ಬಳಸುವ ಸಮಯವನ್ನು ನಿರ್ಧರಿಸುವುದಿಲ್ಲ, ಯಾರು ಬೇಕಾದರೂ ಸಮಯ ತೆಗೆದುಕೊಳ್ಳಬಹುದು, ಎಷ್ಟು ಸಮಯದವರೆಗೆ ಬಾಗಿಲು ಮುಚ್ಚಲಾಗಿದೆ ಎಂಬುದನ್ನು ಮಾತ್ರ ತೋರಿಸುತ್ತೆ ಎಂದು ಉದ್ಯೋಗಿಯೊಬ್ಬರು ಹೇಳಿದ್ದಾರೆ.

ಹೊರಗೆ ಇರುವ ಜನರು ಅನಗತ್ಯವಾಗಿ ಬಾಗಿಲು ಬಡಿಯುವ ಅಗತ್ಯವಿಲ್ಲ. ಸಮಯ ಮಿತಿಯನ್ನು ಮೀರಿದರೆ ಯಾರನ್ನೂ ಸ್ನಾನಗೃಹದಿಂದ ಹೊರಗೆ ಕಳುಹಿಸುವುದಿಲ್ಲ. ಬರುವ ಪ್ರವಾಸಿಗರು ತಮ್ಮ ಖಾಸಗಿತನಕ್ಕೆ ಧಕ್ಕೆಯಾದಂತೆ ಅನಿಸುತ್ತದೆ ಎನ್ನುತ್ತಾರೆ ಎಂದು ಸಿಬ್ಬಂದಿ ಹೇಳಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ