G7 Summit: ಭಾರತೀಯ ಸಂಸ್ಕೃತಿಗೆ ಮನಸೋತ ಇಟಲಿ ಪ್ರಧಾನಿ ಮೆಲೋನಿ; ಕೈ ಮುಗಿದು ಜಿ7 ಶೃಂಗಸಭೆಯ ಅತಿಥಿಗಳಿಗೆ ಸ್ವಾಗತ
Italy PM Giorgia Meloni Video: ಜೂನ್ 14ರಂದು ಜಿ7 ಶೃಂಗಸಭೆ ಇಟಲಿಯಲ್ಲಿ ನಡೆಯುತ್ತಿದ್ದು, ಇಂದು ಕೆಲವು ದೇಶಗಳ ಪ್ರಧಾನಿಗಳು ಮತ್ತು ಅಧ್ಯಕ್ಷರು ಇಟಲಿಯನ್ನು ತಲುಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ದೆಹಲಿಯಿಂದ ವಿಮಾನದಲ್ಲಿ ಹೊರಟಿದ್ದಾರೆ. ಇದೆಲ್ಲದರ ನಡುವೆ ಜಿ7 ಶೃಂಗಸಭೆಗೆ ಬಂದಿರುವ ಜಾಗತಿಕ ನಾಯಕರನ್ನು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಕೈ ಮುಗಿದು ಸ್ವಾಗತಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ನವದೆಹಲಿ: ಇಟಲಿಯಲ್ಲಿ ನಾಳೆಯಿಂದ (ಜೂ. 14) ಜಿ7 ಶೃಂಗಸಭೆ (G7 Summit) ನಡೆಯಲಿದೆ. ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ (Italian Prime Minister Giorgia Meloni) ಅವರ ಆಹ್ವಾನದ ಮೇರೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಕೂಡ ಇಂದು ದೆಹಲಿಯಿಂದ ಇಟಲಿಗೆ ಪ್ರಯಾಣ ಬೆಳೆಸಿದ್ದಾರೆ. ಈಗಾಗಲೇ ಕೆಲವು ದೇಶಗಳ ನಾಯಕರು ಇಟಲಿಯಲ್ಲಿ ಶೃಂಗಸಭೆ ನಡೆಯುವ ಸ್ಥಳವನ್ನು ತಲುಪಿದ್ದು, ಅವರನ್ನು ಇಟಲಿ ಪ್ರಧಾನಿ ಸ್ವಾಗತಿಸಿದ್ದಾರೆ. ಆದರೆ. ವಿಶೇಷವೆಂದರೆ ಹಸ್ತಲಾಘವದ ಬದಲು ಇಟಲಿ ಪ್ರಧಾನಿ ಮೆಲೋನಿ ತಮ್ಮ ಆಹ್ವಾನಿತ ಗಣ್ಯರಿಗೆ ಕೈ ಮುಗಿದು ನಮಸ್ತೆ ಮಾಡುವ ಮೂಲಕ ಸ್ವಾಗತಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಭಾರತೀಯ ಸಂಸ್ಕೃತಿ ಜಗತ್ತಿನೆಲ್ಲೆಡೆ ಹರಡುತ್ತಿದೆ ಎಂದು ಅನೇಕರು ಮೆಲೋನಿ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಟಲಿಯಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಇಟಾಲಿಯನ್ ಪ್ರಧಾನಿ ‘ನಮಸ್ತೆ’ ಮಾಡುವ ಮೂಲಕ ಹಲವಾರು ನಾಯಕರನ್ನು ಸ್ವಾಗತಿಸುವ ವೀಡಿಯೊಗಳು ವೈರಲ್ ಆಗಿವೆ. ಈ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ನಮಸ್ತೆ ಟ್ರೆಂಡಿಂಗ್ನಲ್ಲಿದೆ. ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಯುರೋಪಿಯನ್ ಕಮಿಷನ್ ಅಧ್ಯಕ್ಷರಾದ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರನ್ನು ಇಟಲಿ ಪ್ರಧಾನಿ ಮೆಲೋನಿ ಕೈ ಮುಗಿದು ಸ್ವಾಗತಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
Italian 🇮🇹 Prime Minister #GiorgiaMeloni greeting guests at G7 summit with Namaste 🙏 Namaste goes global. pic.twitter.com/UpZmj0yQ6o
— Sudhir Chaudhary (@sudhirchaudhary) June 13, 2024
ಇದನ್ನೂ ಓದಿ: ಎನ್‌ಎಸ್‌ಎ ಆಗಿ ಅಜಿತ್ ದೋವಲ್ ಮರುನೇಮಕ; ಮೋದಿ ಪ್ರಧಾನ ಕಾರ್ಯದರ್ಶಿಯಾಗಿ ಪಿಕೆ ಮಿಶ್ರಾ ಮುಂದುವರಿಕೆ
ಹಲವಾರು ಭಾರತೀಯ ನೆಟಿಜನ್‌ಗಳು ಮೆಲೋನಿ ಹ್ಯಾಂಡ್‌ಶೇಕ್ ಬದಲಿಗೆ ಜನರನ್ನು ಸ್ವಾಗತಿಸುವ ಭಾರತೀಯ ವಿಧಾನದ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಇಟಲಿ ಪ್ರಧಾನಿ ಮೆಲೋನಿ ಕೂಡ ಭಾರತೀಯ ಸಂಸ್ಕೃತಿಗೆ ಮನಸೋತಿದ್ದಾರೆ ಎಂದು ಅನೇಕರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಜಿ7 ಶೃಂಗಸಭೆಯನ್ನು ಇಟಲಿಯಲ್ಲಿ ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಪ್ರಪಂಚದಾದ್ಯಂತದ ಉನ್ನತ ನಾಯಕರ ಸಭೆ ನಡೆಯಲಿದೆ. ಇದೇ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಈ ವಿಡಿಯೋ ವೈರಲ್ ಆಗಿದೆ.
Italian PM receives global leaders at Borgo Egnazia in Italy for 50th G7 Summit
Read @ANI Story | https://t.co/T5E0bwmXt5#G7Summit #Italy #GiorgiaMeloni #RishiSunak #US #UK #JoeBiden pic.twitter.com/AwPkFbKp64
— ANI Digital (@ani_digital) June 13, 2024
ಈಗಾಗಲೇ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್, ಜರ್ಮನ್ ಚಾನ್ಸೆಲರ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕೂಡ ಇಟಲಿಗೆ ಆಗಮಿಸಿದ್ದಾರೆ. ಎಲ್ಲರನ್ನು ಮೆಲೋನಿ ಸ್ವಾಗತಿಸಿದ್ದಾರೆ.
ಇದನ್ನೂ ಓದಿ: PM Modi: ಇಟಲಿಯ ಜಿ7 ಶೃಂಗಸಭೆಗೆ ತೆರಳಿದ ನರೇಂದ್ರ ಮೋದಿ; 3ನೇ ಅವಧಿಯ ಮೊದಲ ವಿದೇಶ ಪ್ರವಾಸ
ಪ್ರಧಾನಿ ಮೋದಿ ಕೂಡ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಹಲವು ವಿಷಯಗಳ ಕುರಿತು ಮಾತನಾಡಲಿದ್ದಾರೆ. ಭಾರತ ಸೇರಿದಂತೆ ಗ್ಲೋಬಲ್ ಸೌತ್ ಸಮಸ್ಯೆಗಳ ಬಗ್ಗೆ ಅವರು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಭಾರತವು G7 ಶೃಂಗಸಭೆಯಲ್ಲಿ ಅತಿಥಿ ರಾಷ್ಟ್ರವಾಗಿ ಭಾಗವಹಿಸುತ್ತದೆ. ಭಾರತ 11ನೇ ಬಾರಿಗೆ ಅತಿಥಿ ರಾಷ್ಟ್ರವಾಗಿ ಜಿ7 ಶೃಂಗಸಭೆಯಲ್ಲಿ ಭಾಗವಹಿಸುತ್ತಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿ ಮೆಲೋನಿ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನೂ ನಡೆಸಲಿದ್ದಾರೆ.
#WATCH | Borgo Egnazia: Italian PM Giorgia Meloni receives German Chancellor Olaf Scholz, as he arrives for the 50th G7 Summit.
(Video Source: Reuters) pic.twitter.com/wQ5oMakmxA
— ANI (@ANI) June 13, 2024
ಇಟಲಿಗೆ ಹೊರಡುವ ಮುನ್ನ ಮಾತನಾಡಿದ ಪ್ರಧಾನಿ ಮೋದಿ, ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆಹ್ವಾನದ ಮೇರೆಗೆ, ನಾನು ಜೂನ್ 14ರಂದು ನಡೆಯುವ G7 ಔಟ್ರೀಚ್ ಶೃಂಗಸಭೆಯಲ್ಲಿ ಭಾಗವಹಿಸಲು ಇಟಲಿಯ ಅಪುಲಿಯಾ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದೇನೆ. ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಅವರ ಮೊದಲ ವಿದೇಶಿ ಭೇಟಿಯನ್ನು ಇಟಲಿಗೆ ನೀಡುತ್ತಿರುವುದು ಸಂತೋಷವಾಗಿದೆ. ಜಿ7 ಶೃಂಗಸಭೆಯಲ್ಲಿ ನಡೆಯುವ ಚರ್ಚೆಯ ಸಮಯದಲ್ಲಿ ಕೃತಕ ಬುದ್ಧಿಮತ್ತೆ, ಶಕ್ತಿ, ಆಫ್ರಿಕಾ ಮತ್ತು ಮೆಡಿಟರೇನಿಯನ್ ಬಗ್ಗೆ ಗಮನ ಹರಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:08 pm, Thu, 13 June 24