ಭಾರತಕ್ಕೆ ವಿದಾಯ ಹೇಳಲಿದೆ ಪ್ರಪಂಚದ ದುಬಾರಿ ಬೈಕ್ ಕಂಪನಿ, ಯಾವುದದು?

|

Updated on: Aug 21, 2020 | 6:13 PM

ಕೊರೊನಾ ಸೋಂಕಿನಿಂದಾಗಿ ದೇಶದ ದೊಡ್ಡ ದೊಡ್ಡ ಉದ್ದಿಮೆಗಳು ಮುಚ್ಚುವ ಸ್ಥಿತಿಗೆ ತಲುಪಿವೆ. ಈಗ ಅದರ ಮುಂದುವರಿದ ಭಾಗವಾಗಿ ಪ್ರಪಂಚದ ದುಬಾರಿ ಬೈಕ್ ತಯಾರಿಕಾ ಕಂಪನಿಗಳಲ್ಲಿ ಒಂದಾದ ಹಾರ್ಲೆ-ಡೇವಿಡ್ಸನ್, ಭಾರತದಲ್ಲಿ ತನ್ನ ಮಾರಾಟ ಮಳಿಗೆಗಳನ್ನು ಮುಚ್ಚಲು ಯೋಚಿಸಿದೆ ಎಂದು ತಿಳಿದುಬಂದಿದೆ. ಹಾರ್ಲೆ-ಡೇವಿಡ್ಸನ್ ಇಂಡಿಯಾ ಕಳೆದ ಹಣಕಾಸು ವರ್ಷದಲ್ಲಿ 2,500 ಕ್ಕಿಂತಲೂ ಕಡಿಮೆ ಬೈಕ್​ಗಳನ್ನು ಮಾರಾಟ ಮಾಡಿದೆ ಮತ್ತು 2020 ಏಪ್ರಿಲ್-ಜೂನ್ ನಡುವೆ 100 ಬೈಕುಗಳನ್ನು ಮಾತ್ರ ಮಾರಾಟ ಮಾಡಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷ […]

ಭಾರತಕ್ಕೆ ವಿದಾಯ ಹೇಳಲಿದೆ ಪ್ರಪಂಚದ ದುಬಾರಿ ಬೈಕ್ ಕಂಪನಿ, ಯಾವುದದು?
Follow us on

ಕೊರೊನಾ ಸೋಂಕಿನಿಂದಾಗಿ ದೇಶದ ದೊಡ್ಡ ದೊಡ್ಡ ಉದ್ದಿಮೆಗಳು ಮುಚ್ಚುವ ಸ್ಥಿತಿಗೆ ತಲುಪಿವೆ. ಈಗ ಅದರ ಮುಂದುವರಿದ ಭಾಗವಾಗಿ ಪ್ರಪಂಚದ ದುಬಾರಿ ಬೈಕ್ ತಯಾರಿಕಾ ಕಂಪನಿಗಳಲ್ಲಿ ಒಂದಾದ ಹಾರ್ಲೆ-ಡೇವಿಡ್ಸನ್, ಭಾರತದಲ್ಲಿ ತನ್ನ ಮಾರಾಟ ಮಳಿಗೆಗಳನ್ನು ಮುಚ್ಚಲು ಯೋಚಿಸಿದೆ ಎಂದು ತಿಳಿದುಬಂದಿದೆ.

ಹಾರ್ಲೆ-ಡೇವಿಡ್ಸನ್ ಇಂಡಿಯಾ ಕಳೆದ ಹಣಕಾಸು ವರ್ಷದಲ್ಲಿ 2,500 ಕ್ಕಿಂತಲೂ ಕಡಿಮೆ ಬೈಕ್​ಗಳನ್ನು ಮಾರಾಟ ಮಾಡಿದೆ ಮತ್ತು 2020 ಏಪ್ರಿಲ್-ಜೂನ್ ನಡುವೆ 100 ಬೈಕುಗಳನ್ನು ಮಾತ್ರ ಮಾರಾಟ ಮಾಡಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.

ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ನಂತರ ಭಾರತದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ಎರಡನೇ ವಾಹನ ತಯಾರಿಕಾ ಕಂಪನಿ ಹಾರ್ಲೆ-ಡೇವಿಡ್ಸನ್ ಎನ್ನಲಾಗಿದೆ. 2017 ರಲ್ಲಿ ಜನರಲ್ ಮೋಟಾರ್ಸ್ ತನ್ನ ಗುಜರಾತ್ ಘಟಕವನ್ನು ಮಾರಾಟ ಮಾಡಿತ್ತು.

Published On - 5:36 pm, Fri, 21 August 20