ತರಬೇತಿ ನೀಡುವಾಗ ಕೈಗೆ ಬೇಡಿ ಹಾಕಿಕೊಂಡು ಒದ್ದಾಡಿದ ಅಧಿಕಾರಿ.. ಎಲ್ಲಿ?

ತರಬೇತಿ ನೀಡೋ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕೈಗಳಿಗೆ ತಾವೇ ಬೇಡಿ ಹಾಕಿಕೊಂಡುಒದ್ದಾಡಿದ ಪೇಚಿನ ಪ್ರಸಂಗ ನಾರ್ಥಾಂಪ್ಟನ್​ಶೈರ್​ನಲ್ಲಿ ನಡೆದಿದೆ.  ಕೊನೆಗೆ, ಅಧಿಕಾರಿ ಕೈಯಿಂದ ಬೇಡಿ ಬೇರ್ಪಡಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಸಾಹಸ ಮಾಡಬೇಕಾಗಿ ಬಂತು! ಹೊಸದಾಗಿ ಕೆಲಸಕ್ಕೆ ಸೇರಿದ್ದ ಸಿಬ್ಬಂದಿಗೆ ಬೇಡಿ ಹಾಕುವುದನ್ನು ಹೇಳಿಕೊಡುವ ಸಂದರ್ಭದಲ್ಲಿ ನಾರ್ಥಾಂಪ್ಟನ್​ಶೈರ್​ (Northamptonshire) ಪೊಲೀಸ್ ಸಾರ್ಜೆಂಟ್ ರೆನ್ವಿಕ್ ತಾವೇ ಬೇಡಿ ಹಾಕಿಕೊಂಡಿದ್ದಾರೆ. ಈ ಬಗ್ಗೆ ನಾರ್ತ್​​ಆಂಟ್ಸ್​ಫೈರ್​ (Northantsfire) ಅಗ್ನಿಶಾಮಕ ದಳ ಟ್ವೀಟ್ ಮಾಡಿದೆ. ಬೇಡಿ ಹಾಕಿಕೊಂಡು ಮುಜುಗರಕ್ಕೆ ಒಳಗಾದ ಅಧಿಕಾರಿ ಅಗ್ನಿಶಾಮಕ […]

ತರಬೇತಿ ನೀಡುವಾಗ ಕೈಗೆ ಬೇಡಿ ಹಾಕಿಕೊಂಡು ಒದ್ದಾಡಿದ ಅಧಿಕಾರಿ.. ಎಲ್ಲಿ?
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Aug 21, 2020 | 12:14 PM

ತರಬೇತಿ ನೀಡೋ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕೈಗಳಿಗೆ ತಾವೇ ಬೇಡಿ ಹಾಕಿಕೊಂಡುಒದ್ದಾಡಿದ ಪೇಚಿನ ಪ್ರಸಂಗ ನಾರ್ಥಾಂಪ್ಟನ್​ಶೈರ್​ನಲ್ಲಿ ನಡೆದಿದೆ.  ಕೊನೆಗೆ, ಅಧಿಕಾರಿ ಕೈಯಿಂದ ಬೇಡಿ ಬೇರ್ಪಡಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಸಾಹಸ ಮಾಡಬೇಕಾಗಿ ಬಂತು!

ಹೊಸದಾಗಿ ಕೆಲಸಕ್ಕೆ ಸೇರಿದ್ದ ಸಿಬ್ಬಂದಿಗೆ ಬೇಡಿ ಹಾಕುವುದನ್ನು ಹೇಳಿಕೊಡುವ ಸಂದರ್ಭದಲ್ಲಿ ನಾರ್ಥಾಂಪ್ಟನ್​ಶೈರ್​ (Northamptonshire) ಪೊಲೀಸ್ ಸಾರ್ಜೆಂಟ್ ರೆನ್ವಿಕ್ ತಾವೇ ಬೇಡಿ ಹಾಕಿಕೊಂಡಿದ್ದಾರೆ. ಈ ಬಗ್ಗೆ ನಾರ್ತ್​​ಆಂಟ್ಸ್​ಫೈರ್​ (Northantsfire) ಅಗ್ನಿಶಾಮಕ ದಳ ಟ್ವೀಟ್ ಮಾಡಿದೆ. ಬೇಡಿ ಹಾಕಿಕೊಂಡು ಮುಜುಗರಕ್ಕೆ ಒಳಗಾದ ಅಧಿಕಾರಿ ಅಗ್ನಿಶಾಮಕ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ.