AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Top News: ಕೊರೊನಾ ಸಂಕಷ್ಟದ ವೇಳೆ 900 ಹುಡುಗಿಯರು ನಾಪತ್ತೆ! ಏನಾದರು?

ಪೆರು ದೇಶದಲ್ಲಿ ಕೊರೊನಾ ಸೋಂಕಿನಿಂದಾಗಿ 3,89,717ಕ್ಕೆ ಏರಿಕೆಯಾಗಿದ್ದು, 18 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದ್ರೆ, ಇದರ ಬೆನ್ನಲ್ಲೇ, ದೇಶದಲ್ಲಿ ಕೊರೊನಾ ಬಂದಾಗಿನಿಂದ ಈವರೆಗೂ ಸುಮಾರು 900ಕ್ಕೂ ಹೆಚ್ಚು ಹುಡುಗಿಯರು ಮತ್ತು ಮಹಿಳೆಯರು ಕಣ್ಮರೆಯಾಗಿದ್ದಾರಂತೆ. ಕೆಲವರು ಸೋಂಕಿಗೆ ಹೆದರಿ ಸಾವನ್ನಪ್ಪಿದ್ರೆ, ಇನ್ನೂ ಕೆಲವರು ಏನಾದರು ಅನ್ನುವುದೇ ಸರ್ಕಾರಕ್ಕೆ ತಲೆನೋವಾಗಿದೆ. ಕೊರೊನಾ ‘ವಿಶ್ವ’ರೂಪ ವಿಶ್ವದಲ್ಲಿ ಕೊರೊನಾ ವೈರಸ್​ನ ವಿಶ್ವರೂಪ ಮುಂದುವರಿಯುತ್ತಲೇ ಇದ್ದು, ಸೋಂಕಿತರ ಸಂಖ್ಯೆ 1,66,44,067ಕ್ಕೆ ಏರಿಕೆಯಾಗಿದ್ದು, ವೈರಸ್​ನಿಂದ ಮೃತಪಟ್ಟವರ ಸಂಖ್ಯೆ 6,56,550ಕ್ಕೆ ತಲುಪಿದೆ. ವೈರಸ್ ವಿರುದ್ಧ […]

Top News: ಕೊರೊನಾ ಸಂಕಷ್ಟದ ವೇಳೆ 900 ಹುಡುಗಿಯರು ನಾಪತ್ತೆ! ಏನಾದರು?
ಆಯೇಷಾ ಬಾನು
| Edited By: |

Updated on:Jul 30, 2020 | 2:42 PM

Share

ಪೆರು ದೇಶದಲ್ಲಿ ಕೊರೊನಾ ಸೋಂಕಿನಿಂದಾಗಿ 3,89,717ಕ್ಕೆ ಏರಿಕೆಯಾಗಿದ್ದು, 18 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದ್ರೆ, ಇದರ ಬೆನ್ನಲ್ಲೇ, ದೇಶದಲ್ಲಿ ಕೊರೊನಾ ಬಂದಾಗಿನಿಂದ ಈವರೆಗೂ ಸುಮಾರು 900ಕ್ಕೂ ಹೆಚ್ಚು ಹುಡುಗಿಯರು ಮತ್ತು ಮಹಿಳೆಯರು ಕಣ್ಮರೆಯಾಗಿದ್ದಾರಂತೆ. ಕೆಲವರು ಸೋಂಕಿಗೆ ಹೆದರಿ ಸಾವನ್ನಪ್ಪಿದ್ರೆ, ಇನ್ನೂ ಕೆಲವರು ಏನಾದರು ಅನ್ನುವುದೇ ಸರ್ಕಾರಕ್ಕೆ ತಲೆನೋವಾಗಿದೆ.

ಕೊರೊನಾ ‘ವಿಶ್ವ’ರೂಪ ವಿಶ್ವದಲ್ಲಿ ಕೊರೊನಾ ವೈರಸ್​ನ ವಿಶ್ವರೂಪ ಮುಂದುವರಿಯುತ್ತಲೇ ಇದ್ದು, ಸೋಂಕಿತರ ಸಂಖ್ಯೆ 1,66,44,067ಕ್ಕೆ ಏರಿಕೆಯಾಗಿದ್ದು, ವೈರಸ್​ನಿಂದ ಮೃತಪಟ್ಟವರ ಸಂಖ್ಯೆ 6,56,550ಕ್ಕೆ ತಲುಪಿದೆ. ವೈರಸ್ ವಿರುದ್ಧ ಹೋರಾಡಿ 1,02,32,050 ಜನರು ಗುಣಮುಖರಾಗಿದ್ದಾರೆ. ವೈರಸ್​ನಿಂದಾಗಿ 57,55,467 ಜನ ಸ್ಥಿತಿ ಚಿಂತಾಜನಕವಾಗಿದೆ.

2 ವಾರಗಳಲ್ಲೇ ಕೊರೊನಾಗೆ ಚಿಕಿತ್ಸೆ! ಕೊರೊನಾದಿಂದಾಗಿ ಸಾಕಷ್ಟು ಹೊಡೆತ ತಿಂದಿರುವ ಅಮೆರಿಕದಲ್ಲಿ, ವೈರಸ್​ಗೆ ಸೋಂಕು ಪತ್ತೆ ಹಚ್ಚಲು ಇನ್ನಿಲ್ಲದ ಕಸರತ್ತು ನಡೆಸಲಾಗ್ತಿದೆ. ಹೀಗಾಗಿ, ಮುಂದಿನ 2 ವಾರಗಳಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುವ ಬಗ್ಗೆ ಗುಡ್ ನ್ಯೂಸ್ ನೀಡೋದಾಗಿ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಮುಂದಿನ ಎರಡು ವಾರಗಳಲ್ಲಿ ಕೆಲ ಪ್ರಕಟಣೆಗಳು ಬರಲಿವೆ, ಇದ್ರಲ್ಲಿ ಗುಡ್​ನ್ಯೂಸ್​ ಕೊಡ್ತೀವಿ ಅಂತಾ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಹೇಳಿದ್ರು.

ಚೀನಾದಲ್ಲಿ ‘ಕೊರೊನಾ ಕುಲುಮೆ’ ಕೊರೊನಾ ಸೋಂಕಿನ ಮೂಲವಾಗಿರುವ ಚೀನಾದಲ್ಲಿ, ವೈರಸ್ ಅಟ್ಟಹಾಸ ಇನ್ನೇನು ನಿಂತೇ ಹೋಯ್ತು ಅನ್ನುವಷ್ಟರಲ್ಲಿ ಸೋಂಕಿನ ಅಟ್ಟಹಾಸ ಮತ್ತೆ ಮುಂದುವರಿಯುತ್ತಲೇ ಇದೆ. ಚೀನಾದ ರಾಜಧಾನಿ ಬೀಜಿಂಗ್​ನಲ್ಲಿ ಮತ್ತೆ 68 ಸೋಂಕಿತರು ಪತ್ತೆಯಾಗಿದ್ದಾರೆ. ಜುಲೈ 16 ರಿಂದ ಇವತ್ತಿನವರೆಗೂ ಸುಮಾರು 235 ಸೋಂಕಿತರು ಪತ್ತೆಯಾಗಿದ್ದು, ವೈರಸ್​ನ ಮತ್ತೊಂದು ಅಲೆ ಟೆನ್ಷನ್ ತಂದೊಡ್ಡಿದೆ.

‘ಆನ್​ಲೈನ್​ನಲ್ಲಿ ಮಾಂಸ ಖರೀದಿಸಿ’ ಪಾಕಿಸ್ತಾನದಲ್ಲಿ ಕೊರೊನಾ ಸೋಂಕು ಅಬ್ಬರಿಸುತ್ತಲೇ ಇದ್ದು, ಸೋಂಕಿತರ ಸಂಖ್ಯೆ 2,74,289ಕ್ಕೆ ಏರಿಕೆಯಾಗಿದೆ. ಸೋಂಕಿನಿಂದಾಗಿ 5,842 ಜನರು ಜೀವ ಕಳೆದುಕೊಂಡಿದ್ದಾರೆ. ಸೋಂಕು ತೀವ್ರ ಗತಿಯಲ್ಲಿ ಏರಿಕೆಯಾಗ್ತಿರೋದ್ರಿಂದ ಎಚ್ಚೆತ್ತ ಪಾಕಿಸ್ತಾನ ಸರ್ಕಾರ, ಮುಸ್ಲಿಂರ ಈದ್ ಹಬ್ಬಕ್ಕೆ ಜಾನುವಾರುಗಳನ್ನ ಆನ್​ಲೈನ್​ ಮೂಲಕವೇ ಖರೀದಿಸುವಂತೆ ಸೂಚಿಸಿದೆ. ಮಾರ್ಕೆಟ್​ಗಳಲ್ಲಿ ಜನಸಂದಣಿ ಹೆಚ್ಚಾಗಿರೋದ್ರಿಂದ ಸೋಂಕು ಹಬ್ಬುವ ಸಾಧ್ಯತೆ ಇರುತ್ತೆ.

ಮಕ್ಕಳ ಬೆಳವಣಿಗೆ ಕುಂಠಿತ? ವಿಶ್ವದಾದ್ಯಂತ ಕೊರೊನಾ ಸೋಂಕಿನ ಆರ್ಭಟ ಹೆಚ್ಚಾಗಿರೋದ್ರಿಂದಾಗಿ ಸುಮಾರು 7 ಮಿಲಿಯನ್ ಮಕ್ಕಳ ಮೇಲೂ ಪರಿಣಾಮ ಬೀರಲಿದೆ ಅಂತಾ ವಿಶ್ವಸಂಸ್ಥೆ ಹೇಳಿದೆ. ಆಹಾರ ಪೂರೈಕೆಯ ಮೇಲೂ ಕೊರೊನಾ ಪರಿಣಾಮ ಬೀರುವ ಸಾಧ್ಯತೆ ಇದ್ದು, ಇದ್ರಿಂದ ಸುಮಾರು ಏಳು ಮಿಲಿಯನ್ ಮಕ್ಕಳು ಕುಂಠಿತಗೊಳ್ಳುತ್ತಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಜೈಲಲ್ಲೂ ಕೊರೊನಾ ‘ದಂಗೆ’ ಬೊಲಿವಿಯಾ ದೇಶದಲ್ಲಿ ಕ್ರೂರಿ ವೈರಸ್ ರಣಕೇಕೆ ಹಾಕ್ತಿದ್ದು, ಜೈಲುಗಳಲ್ಲೂ ಅಟ್ಟಹಾಸ ಮೆರೀತಿದೆ. ದೇಶದಲ್ಲಿ ಈವರೆಗೂ 71 ಸಾವಿರ ಜನರಿಗೆ ಸೋಂಕು ಹೊಕ್ಕಿದ್ರೆ, 2,647 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದ್ರ ಮಧ್ಯೆಯೂ ಕೊಚಾಬಂಬಾ ಜೈಲಿನಲ್ಲಿ ಕೈದಿಯೋರ್ವ ಸೋಂಕಿಗೆ ಬಲಿಯಾಗಿದ್ದಾನೆ. ಹೀಗಾಗಿ ರೊಚ್ಚಿಗೆದ್ದ ಕೈದಿಗಳು, ಸೂಕ್ತ ಔಷಧ ಮತ್ತು ಡಾಕ್ಟರ್​ಗಳನ್ನ ನೀಡುವಂತೆ ಒತ್ತಾಯಿಸಿ ಜೈಲಿನ ಮೇಲ್ಚಾವಣಿ ಏರಿ ಪ್ರತಿಭಟನೆ ನಡೆಸಿದ್ರು.

ಆಟಗಾರರಿಗೆ ಸೋಂಕು, ಮ್ಯಾಚ್​ ರದ್ದು! ಕೊರೊನಾ ಸೋಂಕಿನ ಭೀತಿಯ ಮಧ್ಯೆಯೂ ಅಮೆರಿಕದಲ್ಲಿ ಬೇಸ್​ಬಾಲ್ ಆಟವನ್ನ ಆಡಲಾಗ್ತಿದೆ. ಆದ್ರೆ, ಲೀಗ್​ನಲ್ಲಿ ಭಾಗವಹಿಸಿದ್ದ ತಂಡಗಳ ಪೈಕಿ 7 ಆಟಗಾರರು ಮತ್ತು ಓರ್ವ ಕೋಚ್​ಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಹೀಗಾಗಿ, ಮುಂದಿನ ಪಂದ್ಯಗಳನ್ನ ರದ್ದು ಮಾಡಲಾಗಿದೆ. ಮಿಯಾಮಿ ಮರ್ಲಿನ್ಸ್ ಮತ್ತು ಬಲ್ಟಿಮೋರ್ ಒರಿಲೆಸ್​ ಪಂದ್ಯ ಕೂಡ ಕ್ಯಾನ್ಸಲ್ ಆಗಿದೆ.

Published On - 4:01 pm, Tue, 28 July 20

ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​