Drinking Challenge: ಜೀವ ತೆಗೆದ ಚಾಲೆಂಜ್: ಬಾರ್ ಮೆನುವಿನಲ್ಲಿದ್ದ 21 ಕಾಕ್​ಟೇಲ್​ಗಳನ್ನು ಕುಡಿಯಲು ಪ್ರಯತ್ನಿಸಿ ವ್ಯಕ್ತಿ ಸಾವು

ಚಾಲೆಂಜ್ ಎಂದು ಬಾರ್​ ಮೆನುವಿನಲ್ಲಿದ್ದ 21 ಕಾಕ್​ಟೇಲ್​ಗಳನ್ನು ಕುಡಿಯಲು ಹೋಗಿ ಬ್ರಿಟನ್​ನ 53 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಜಮೈಕಾದಲ್ಲಿ ನಡೆದಿದೆ.

Drinking Challenge: ಜೀವ ತೆಗೆದ ಚಾಲೆಂಜ್: ಬಾರ್ ಮೆನುವಿನಲ್ಲಿದ್ದ 21 ಕಾಕ್​ಟೇಲ್​ಗಳನ್ನು ಕುಡಿಯಲು ಪ್ರಯತ್ನಿಸಿ ವ್ಯಕ್ತಿ ಸಾವು
ಕಾಕ್​ಟೇಲ್​

Updated on: Jun 29, 2023 | 12:00 PM

ಚಾಲೆಂಜ್ ಎಂದು ಬಾರ್​ ಮೆನುವಿನಲ್ಲಿದ್ದ 21 ಕಾಕ್​ಟೇಲ್​ಗಳನ್ನು ಕುಡಿಯಲು ಹೋಗಿ ಬ್ರಿಟನ್​ನ 53 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಜಮೈಕಾದಲ್ಲಿ ನಡೆದಿದೆ. ಟಿಮೋಥಿ ಸದರ್ನ್ ​ಇಂಗ್ಲೆಂಡ್​ನ ವೆಸ್ಟ್​ ಮಿಡ್​ಲ್ಯಾಂಡ್ಸ್​ ನಿವಾಸಿಯಾಗಿದ್ದು, ಕಚೇರಿಗೆ ರಜೆ ಇದ್ದ ದಿನ ಬಾರ್​ಗೆ ತೆರಳಿ ಚಾಲೆಂಜ್​ನಲ್ಲಿ ಪಾಲ್ಗೊಂಡಿದ್ದರು.

ಏನಿದು ಡ್ರಿಂಕಿಂಗ್ ಚಾಲೆಂಜ್
ಘಟನೆಯ ದಿನದಂದು, ಟಿಮೋಥಿ ಅವರು ಸೇಂಟ್ ಆನ್ಸ್‌ನಲ್ಲಿರುವ ರಾಯಲ್ ಡೆಕಾಮೆರಾನ್ ಕ್ಲಬ್ ಕೆರಿಬಿಯನ್‌ನಲ್ಲಿ ಇಬ್ಬರು ಕೆನಡಾದ ಮಹಿಳೆಯರನ್ನು ಭೇಟಿಯಾದಾಗ ಬೆಳಗ್ಗೆ ಬಿಯರ್ ಮತ್ತು ಬ್ರಾಂಡಿ ಕುಡಿಯುತ್ತಿದ್ದರು. ಇಬ್ಬರು ಮಹಿಳೆಯರು ತಾವು 21-ಕಾಕ್‌ಟೈಲ್ ಚಾಲೆಂಜ್‌ನಲ್ಲಿ ಭಾಗವಹಿಸುತ್ತಿರುವುದಾಗಿ ಹೇಳಿದರು.

ಅವರು ಬಾರ್ ಮೆನುವಿನಲ್ಲಿ ಕಾಣಿಸಿಕೊಂಡಿರುವ ಎಲ್ಲಾ ಕಾಕ್‌ಟೇಲ್‌ಗಳನ್ನು ಪ್ರಯತ್ನಿಸುವ ಗುರಿಯನ್ನು ಹೊಂದಿದ್ದರು. ಟಿಮೋತಿ ಕೂಡ ಆ ಚಾಲೆಂಜ್ ಸ್ವೀಕರಿಸಿದರು. ಮೆನುವಿನಲ್ಲಿದ್ದ 21 ಕಾಕ್‌ಟೇಲ್‌ಗಳನ್ನು ಪ್ರಯತ್ನಿಸಲು ನಿರ್ಧರಿಸಿದರು ಆದರೆ ಸವಾಲನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅವರು 12 ಕಾಕ್ಟೇಲ್ಗಳನ್ನು ಕುಡಿದು ತಮ್ಮ ಹೋಟೆಲ್ ಕೋಣೆಗೆ ಹೋದರು ಮತ್ತು ಅನಾರೋಗ್ಯ ಕಾಡಿತ್ತು.

ಮದ್ಯ ಸೇವನೆಯಿಂದಾಗಿ ತೀವ್ರವಾದ ಗ್ಯಾಸ್ಟ್ರೋಎಂಟರೈಟಿಸ್ ನಿಂದ ಸಾವನ್ನಪ್ಪಿದ್ದಾನೆ ಎಂದು ವರದಿ ಹೇಳಿದೆ.
ಮೊದಲು ತುಂಬಾ ಬಾರಿ ವಾಂತಿ ಮಾಡಿಕೊಂಡರು, ನಂತರ ಪ್ರಜ್ಞೆ ತಪ್ಪಿತ್ತು ತಕ್ಷಣ ಮೃತಪಟ್ಟಿರುವುದಾಗಿ ಮಾಹಿತಿ ಲಭ್ಯವಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ