Titanic Submarine: ಟೈಟಾನಿಕ್ ಜಲಾಂತರ್ಗಾಮಿ ನೌಕೆಯ ಅವಶೇಷಗಳ ಜತೆ ಮನುಷ್ಯರ ದೇಹದ ಭಾಗಗಳು ಕೂಡ ಪತ್ತೆ

ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಜಲಾಂತರ್ಗಾಮಿ(Submarine) ನೌಕೆಯಲ್ಲಿ ತೆರಳಿದ್ದ ಪ್ರವಾಸಿಗರು ಹಿಂದಿರುಗಿ ಬರಲಿಲ್ಲ, ಜಲಾಂತರ್ಗಾಮಿ ಸ್ಫೋಟಗೊಂಡಿದ್ದ ಕಾರಣ ಯಾರೂ ಬದುಕುಳಿದಿರಲಿಲ್ಲ.

Titanic Submarine: ಟೈಟಾನಿಕ್ ಜಲಾಂತರ್ಗಾಮಿ ನೌಕೆಯ ಅವಶೇಷಗಳ ಜತೆ ಮನುಷ್ಯರ ದೇಹದ ಭಾಗಗಳು ಕೂಡ ಪತ್ತೆ
ಜಲಾಂತರ್ಗಾಮಿ
Follow us
ನಯನಾ ರಾಜೀವ್
|

Updated on: Jun 29, 2023 | 7:59 AM

ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಜಲಾಂತರ್ಗಾಮಿ(Submarine) ನೌಕೆಯಲ್ಲಿ ತೆರಳಿದ್ದ ಪ್ರವಾಸಿಗರು ಹಿಂದಿರುಗಿ ಬರಲಿಲ್ಲ, ಜಲಾಂತರ್ಗಾಮಿ ಸ್ಫೋಟಗೊಂಡಿದ್ದ ಕಾರಣ ಯಾರೂ ಬದುಕುಳಿದಿರಲಿಲ್ಲ. ಅವಶೇಷಗಳೂ ಸಿಕ್ಕಿರಲಿಲ್ಲ. ಆದರೆ ಬುಧವಾರ ಜಲಾಂತರ್ಗಾಮಿಯ ಅವಶೇಷಗಳು ಸಿಕ್ಕಿವೆ ಅದರ ಜತೆ ಪ್ರವಾಸಿಗರ ದೇಹದ ಭಾಗಗಳು ಕೂಡ ದೊರೆತಿವೆ.

ಯುಎಸ್ ಕೋಸ್ಟ್​ಗಾರ್ಡ್​ಗಳು ಅದನ್ನು ಸೆಂಟ್ ಜಾನ್ಸ್​ ಬಂದರಿಗೆ ತಂದಿದ್ದಾರೆ. ಜೂನ್ 18ರಂದು ಜಲಾಂತರ್ಗಾಮಿಯು ಓರ್ವ ಪೈಲಟ್​ ಹಾಗೂ 4 ಪ್ರವಾಸಿಗರೊಂದಿಗೆ ಸಮುದ್ರಕ್ಕೆ ತೆರಳಿತ್ತು. ಅಲ್ಲಿ ಸ್ಫೋಟಗೊಂಡಿತ್ತು, ನೌಕೆಯಲ್ಲಿದ್ದ ಎಲ್ಲಾ ಐವರು ಸಾವನ್ನಪ್ಪಿದ್ದರು. ನಾಲ್ಕು ದಿನಗಳ ಕಾಲ ಜಲಾಂತರ್ಗಾಮಿ ಪತ್ತೆಗೆ ಪ್ರಯತ್ನಿಸಲಾಗಿತ್ತು.

ನಂತರ ಜೂನ್ 23 ರಂದು ಟೈಟಾನಿಕ್ ಅವಶೇಷಗಳಿಂದ 1600 ಅಡಿ ದೂರದಲ್ಲಿ ಜಲಾಂತರ್ಗಾಮಿ ಅವಶೇಷಗಳು ಪತ್ತೆಯಾಗಿದ್ದವು. ಈಗ ಅವುಗಳ ಜತೆಗೆ ಮಾನವ ಅವಶೇಷಗಳು ಕೂಡ ಕಂಡುಬಂದಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಈ ನೌಕೆಯಲ್ಲಿ ಬ್ರಿಟಿಷ್ ಉದ್ಯಮಿ ಹಮೀಶ್ ಹಾರ್ಡಿಂಗ್, ಪಾಲ್ ಹೆನ್ರಿ, ಪಾಕಿಸ್ತಾನದ ಉದ್ಯಮಿ ಶಹಜಾದಾ ದಾವೂದ್ ಹಾಗೂ ಅವರ ಪುತ್ರ ಹಾಗೂ ಸ್ಟಾಕ್​ಟನ್ ರಶ್ ಸೇರಿದಂತೆ ಐದು ಜನರು ಇದ್ದರು.

ಮತ್ತಷ್ಟು ಓದಿ: Titanic Submarine: ಟೈಟಾನಿಕ್ ಹಡಗು ಮುಳುಗಿದ್ದ ಸ್ಥಳದಲ್ಲೇ ಮತ್ತೊಂದು ಅವಘಡ, ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಟೈಟಾನಿಕ್ ಜಲಾಂತರ್ಗಾಮಿ ನಾಪತ್ತೆ

ಜೂನ್ 18ರಂದು ಜಲಾಂತರ್ಗಾಮಿ ನೌಕೆ ಸಂಜೆ 5,20ರ ಸುಮಾರಿಗೆ ಹೊರಟಿತ್ತು ಮಧ್ಯರಾತ್ರಿ 1.45ರ ವೇಳೆಗೆ ಕಾಣೆಯಾಗಿತ್ತು. ಟೈಟಾನಿಕ್ ಹಡಗಿನ ಅವಶೇಷಗಳು ಅಟ್ಲಾಂಟಿಕ್ ಸಾಗರದಲ್ಲಿವೆ. ಕೆನಡಾದ ನ್ಯೂಫೌಂಡ್‌ಲ್ಯಾಂಡ್‌ನಲ್ಲಿರುವ ಸೇಂಟ್ ಜಾನ್ಸ್‌ನಿಂದ 700 ಕಿ.ಮೀ ದೂರದಲ್ಲಿದೆ. ಸ್ಫೋಟವು ಸಮುದ್ರದಲ್ಲಿ 3800 ಮೀಟರ್ ಆಳದಲ್ಲಿ ಸಂಭವಿಸಿದೆ.

ಯುಎಸ್-ಕೆನಡಾ ರಕ್ಷಣಾ ತಂಡವು ಸಮುದ್ರದಲ್ಲಿ 7,600 ಚದರ ಮೈಲಿ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದೆ. 13,000 ಅಡಿ ಆಳದವರೆಗೆ ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಸೋನಾರ್-ಬೋಯ್‌ಗಳನ್ನು ಸಹ ನೀರಿನಲ್ಲಿ ಬಿಡಲಾಯಿತು.

ಟೈಟಾನಿಕ್ ಜಲಾಂತರ್ಮಾಮಿಯು ಒಂದು ಟ್ರಕ್​ಗೆ ಸಮನಾಗಿರುತ್ತದೆ. ಇದು 22 ಅಡಿ ಉದ್ದ ಹಾಗೂ 9.2 ಅಡಿ ಅಗಲವಿದೆ. ಲಾಂತರ್ಗಾಮಿ ಕಾರ್ಬನ್ ಫೈಬರ್‌ನಿಂದ ಮಾಡಲ್ಪಟ್ಟಿದೆ. ಟೈಟಾನಿಕ್ ಅವಶೇಷಗಳನ್ನು ನೋಡಲು ಒಬ್ಬ ವ್ಯಕ್ತಿ 2 ಕೋಟಿ ರೂ. ಪಾವತಿಸಬೇಕಾಗುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ಯುಐ’ ಸಿನಿಮಾ ಪ್ರೀ-ರಿಲೀಸ್ ಇವೆಂಟ್​: ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಸಿನಿಮಾ ಪ್ರೀ-ರಿಲೀಸ್ ಇವೆಂಟ್​: ಇಲ್ಲಿದೆ ಲೈವ್ ವಿಡಿಯೋ
ಹೊಸ ಹೋಸ್ಟ್ ನನ್ನಂತೆ ನಡೆಸಿಕೊಡುತ್ತಾರೋ ಇಲ್ಲವೋ ಬೇರೆ ವಿಚಾರ: ಸುದೀಪ್
ಹೊಸ ಹೋಸ್ಟ್ ನನ್ನಂತೆ ನಡೆಸಿಕೊಡುತ್ತಾರೋ ಇಲ್ಲವೋ ಬೇರೆ ವಿಚಾರ: ಸುದೀಪ್
ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಬಲಪಡಿಸುತ್ತೇವೆ: ಸಚಿವ
ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಬಲಪಡಿಸುತ್ತೇವೆ: ಸಚಿವ
ಎತ್ತಿನ ಜನ್ಮದಿನ ಆಚರಣೆ: ಕೇಕ್ ಕತ್ತರಿಸಿ..ಊರಿಗೆಲ್ಲ ಊಟ ಹಾಕಿಸಿದ ರೈತ
ಎತ್ತಿನ ಜನ್ಮದಿನ ಆಚರಣೆ: ಕೇಕ್ ಕತ್ತರಿಸಿ..ಊರಿಗೆಲ್ಲ ಊಟ ಹಾಕಿಸಿದ ರೈತ
ನ್ಯಾಯಾಲಯದಿಂದ ಪುನಃ ಆಸ್ಪತ್ರೆಗೆ ವಾಪಸ್ಸು ಹೋದ ದರ್ಶನ್ ತೂಗುದೀಪ
ನ್ಯಾಯಾಲಯದಿಂದ ಪುನಃ ಆಸ್ಪತ್ರೆಗೆ ವಾಪಸ್ಸು ಹೋದ ದರ್ಶನ್ ತೂಗುದೀಪ
ಕುಮಾರ ಬಂಗಾರಪ್ಪ ಸೊರಬದಲ್ಲಿ ಬಿಜೆಪಿ ಸೊರಗುವಂತೆ ಮಾಡಿದ್ದಾರೆ: ರೇಣುಕಾಚಾರ್ಯ
ಕುಮಾರ ಬಂಗಾರಪ್ಪ ಸೊರಬದಲ್ಲಿ ಬಿಜೆಪಿ ಸೊರಗುವಂತೆ ಮಾಡಿದ್ದಾರೆ: ರೇಣುಕಾಚಾರ್ಯ
ಜುಟ್ಟು ಹಿಡಿದುಕೊಂಡು ಕಿತ್ತಾಡಿದ ಭವ್ಯಾ, ಐಶ್ವರ್ಯಾ; ದೊಡ್ಮನೆಯಲ್ಲಿ ಗದ್ದಲ
ಜುಟ್ಟು ಹಿಡಿದುಕೊಂಡು ಕಿತ್ತಾಡಿದ ಭವ್ಯಾ, ಐಶ್ವರ್ಯಾ; ದೊಡ್ಮನೆಯಲ್ಲಿ ಗದ್ದಲ
ದರ್ಶನ್ ಮೇಲಿನ ಅಭಿಮಾನ ಹೆಚ್ಚಾಗಿದೆಯೇ ಹೊರತು ಕಮ್ಮಿಯಾಗಿಲ್ಲ: ಅಭಿಮಾನಿ
ದರ್ಶನ್ ಮೇಲಿನ ಅಭಿಮಾನ ಹೆಚ್ಚಾಗಿದೆಯೇ ಹೊರತು ಕಮ್ಮಿಯಾಗಿಲ್ಲ: ಅಭಿಮಾನಿ
ಶ್ರೀಲಂಕಾ ಅಧ್ಯಕ್ಷರಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ
ಶ್ರೀಲಂಕಾ ಅಧ್ಯಕ್ಷರಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ
ವೇತನ ನೀಡದಿದ್ದಕ್ಕೆ ಬ್ಯಾನರ್ ಕಂಬ ಏರಿದ ಕಾರ್ಮಿಕ
ವೇತನ ನೀಡದಿದ್ದಕ್ಕೆ ಬ್ಯಾನರ್ ಕಂಬ ಏರಿದ ಕಾರ್ಮಿಕ