ರೈಲೊಂದು ಮಕ್ಕಳಿಗೆ ಡಿಕ್ಕಿ ಹೊಡೆದು ನೂರಾರು ಮೀಟರ್ ಎಳೆದೊಯ್ದ ಘಟನೆ ಜರ್ಮನಿಯಲ್ಲಿ ನಡೆದಿದ್ದು, ಓರ್ವ ಮೃತಪಟ್ಟಿದ್ದಾರೆ. ಸರಕು ಸಾಗಣೆ ರೈಲು ಅದಾಗಿತ್ತು, ಮಕ್ಕಳಿಗೆ ಡಿಕ್ಕಿ ಹೊಡೆದು ತುಂಬಾ ದೂರದವರೆಗೆ ಎಳೆದೊಯ್ದಿತ್ತು ಪರಿಣಾಮ ಓರ್ವ ಮೃತಪಟ್ಟಿದ್ದು, ಇನ್ನೊಬ್ಬನ ಸ್ಥಿತಿ ಚಿಂತಾಜನಕವಾಗಿದೆ.
ಎರಡು ನಿಲ್ದಾಣಗಳ ನಡುವೆ ಅಪಘಾತ ಸಂಭವಿಸಿದೆ, ಅಪಘಾತ ಹೇಗೆ ಸಂಭವಿಸಿತು, ಮಕ್ಕಳು ಹೇಗೆ ರೈಲಿಗೆ ಸಿಲುಕಿದರು ಎನ್ನುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಮತ್ತಷ್ಟು ಓದಿ: ಮಂಡ್ಯ: ಎರಡು ಕಾರುಗಳ ನಡುವೆ ಭೀಕರ ಅಪಘಾತ: ನಾಲ್ವರ ಸಾವು
ಅಪಘಾತವಾದ ಸ್ಥಳಕ್ಕೆ 35 ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಷ್ಟು ಜನರು ಗಾಯಗೊಂಡಿದ್ದಾರೆ ಎನ್ನುವ ಸತ್ಯಾಂಶವನ್ನು ತಿಳಿಸಲು ನಿರಾಕರಿಸಿದ್ದಾರೆ. ಡ್ರ್ಯಾಕ್ ಮಾಡಲು ಡ್ರೋನ್ ಕ್ಯಾಮರಾ ಬಳಸಲಾಗುತ್ತಿದೆ, ಅದರ ಮೂಲಕ ಅವಶೇಷಗಳನ್ನು ಹುಡುಕಲಾಗುತ್ತಿದೆ.
ದೆಹಲಿಯಲ್ಲಿ ಕಾರೊಂದು ಯುವತಿಯ ಸ್ಕೂಟಿಗೆ ಡಿಕ್ಕಿ ಹೊಡೆದು 13 ಕಿ.ಮೀ ದೂರದವರೆಗೆ ಎಳೆದೊಯ್ದ ಘಟನೆ ನಡೆದಿತ್ತು. ಆಕೆಯ ಜೊತೆ ಇದ್ದ ಅವರ ಸ್ನೇಹಿತರಿಗೂ ಸಣ್ಣಪುಟ್ಟ ಗಾಯಗಳಾಗಿವೆ, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು, ಕಾರಿನಲ್ಲಿದ್ದ ಆರೋಪಿಗಳು ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದರು ಎಂಬುದು ತಿಳಿದುಬಂದಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ