ಪಹಲ್ಗಾಮ್ ದಾಳಿಗೂ ಟಿಆರ್​ಎಫ್​ಗೂ ಸಂಬಂಧವಿದೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವರದಿಯಲ್ಲೇನಿದೆ?

ಅಮೆರಿಕದ ನಂತರ, ಈಗ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವರದಿಯು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ತಪ್ಪಿತಸ್ಥ ಭಯೋತ್ಪಾದಕ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಪಾತ್ರವನ್ನು ಬಹಿರಂಗಪಡಿಸಿದೆ.ಭಯೋತ್ಪಾದಕ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಅವುಗಳನ್ನು ನಿಗ್ರಹಿಸಲು ಶಿಫಾರಸುಗಳನ್ನು ನೀಡಲು UNSC ರಚಿಸಿದ್ದ ಮೇಲ್ವಿಚಾರಣಾ ತಂಡದ ವರದಿಯಲ್ಲಿ ಈ ಸಂಗತಿ ಬಹಿರಂಗವಾಗಿದೆ.

ಪಹಲ್ಗಾಮ್ ದಾಳಿಗೂ ಟಿಆರ್​ಎಫ್​ಗೂ ಸಂಬಂಧವಿದೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವರದಿಯಲ್ಲೇನಿದೆ?
ವಿಶ್ವಸಂಸ್ಥೆಯ ಭದ್ರತಾ ಮಂಡಳಿ

Updated on: Jul 30, 2025 | 1:56 PM

ವಾಷಿಂಗ್ಟನ್, ಜುಲೈ 30: ಪಹಲ್ಗಾಮ್ ಭಯೋತ್ಪಾದಕ ದಾಳಿ(Pahalgam Terror Attack)ಗೂ ದಿ ರೆಸಿಸ್ಟೆನ್ಸ್​ ಫ್ರಂಟ್​​ ಉಗ್ರ ಸಂಘಟನೆಗೂ ಸಂಬಂಧವಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವರದಿಯಲ್ಲಿ ತಿಳಿಸಲಾಗಿದೆ. ಇದು ಭಾರತಕ್ಕೆ ಸಿಕ್ಕ ರಾಜತಾಂತ್ರಿಕ ವಿಜಯವೆಂದು ಪರಿಗಣಿಸಲಾಗಿದೆ, ಏಕೆಂದರೆ ಯಾವುದೇ ವಿಶ್ವಸಂಸ್ಥೆಯ ದಾಖಲೆಯಲ್ಲಿ ಭಯೋತ್ಪಾದಕ ಗುಂಪನ್ನು ಹೆಸರಿಸಿರುವುದು ಇದೇ ಮೊದಲು.

ಏಪ್ರಿಲ್ 22 ರಂದು ಪಹಲ್ಗಾಮ್​​ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ್ದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತಾದ ಈ ವರದಿಯನ್ನು UNSC ಮೇಲ್ವಿಚಾರಣಾ ತಂಡವು ಸಿದ್ಧಪಡಿಸಿದೆ. ಈ ಸಮಿತಿಯು ಪ್ರಪಂಚದಾದ್ಯಂತದ ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳ ಮೇಲೆ ನಿರ್ಬಂಧಗಳನ್ನು ವಿಧಿಸುವ ಕೆಲಸ ಮಾಡುತ್ತದೆ. ವಿಶೇಷವೆಂದರೆ ಈ ಸಮಿತಿಯ ಎಲ್ಲಾ ನಿರ್ಧಾರಗಳನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗುತ್ತದೆ, ಅಂದರೆ, ಎಲ್ಲಾ ಸದಸ್ಯ ರಾಷ್ಟ್ರಗಳು ಇದನ್ನು ಒಪ್ಪುತ್ತವೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ(ಯುಎನ್‌ಎಸ್‌ಸಿ)ಯು ವಿಶ್ವಸಂಸ್ಥೆಯ ಆರು ಪ್ರಮುಖ ಅಂಗಸಂಸ್ಥೆಗಳಲ್ಲಿ ಒಂದಾಗಿದೆ. ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ನಿರ್ವಹಣೆಗಾಗಿ ಇದನ್ನು ಸ್ಥಾಪಿಸಲಾಗಿದೆ. ತನ್ನ ಸದಸ್ಯ ರಾಷ್ಟ್ರಗಳ ಸಮಸ್ಯೆಗಳ ಕುರಿತು ತೀರ್ಮಾನ ನೀಡಲು ಇರುವ ವೇದಿಕೆ ಇದಾಗಿದೆ.

ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಜೊತೆ ಟಿಆರ್‌ಎಫ್‌ನ ಸಂಪರ್ಕವನ್ನು ಯುಎನ್‌ಎಸ್‌ಸಿ ಸದಸ್ಯರೊಬ್ಬರು ತಿರಸ್ಕರಿಸಿದ್ದಾರೆ ಮತ್ತು ಎಲ್‌ಇಟಿ ಈಗ ನಿಷ್ಕ್ರಿಯವಾಗಿದೆ ಎಂದು ಹೇಳಿದ್ದಾರೆ ಎಂದು ಹೇಳಿದೆ. ಕೆಲವು ದಿನಗಳ ಹಿಂದೆ, ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಟಿಆರ್ಎಫ್ ಅನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿತ್ತು.

ಟಿಆರ್‌ಎಫ್ ಸೋಗಿನಲ್ಲಿ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸುವ ಪಾಕಿಸ್ತಾನಿ ಸೇನೆಯ ಉದ್ದೇಶಗಳನ್ನು ಯುಎನ್‌ಎಸ್‌ಸಿ ವರದಿಯು ಬಹಿರಂಗಪಡಿಸಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳ ಮೂಲಗಳು ತಿಳಿಸಿವೆ.

ಮತ್ತಷ್ಟು ಓದಿ: ಪಹಲ್ಗಾಮ್‌ ದಾಳಿ ಹೊಣೆಹೊತ್ತ TRF: ಕನ್ನಡಿಗನ ಬಲಿಪಡೆದ ಈ ಉಗ್ರ ಸಂಘಟನೆ ಹಿನ್ನೆಲೆ ಇಲ್ಲಿದೆ

ಪಾಕಿಸ್ತಾನವು ಎಲ್‌ಇಟಿ ಮತ್ತು ಜೈಶ್‌ಗೆ ಸಂಬಂಧಿಸಿದ ಭಯೋತ್ಪಾದಕರನ್ನು ಒಟ್ಟುಗೂಡಿಸಿ ಟಿಆರ್‌ಎಫ್ ಅಥವಾ ಪೀಪಲ್ ಅಗೇನ್ಸ್ಟ್ ಫ್ಯಾಸಿಸ್ಟ್ ಫ್ರಂಟ್‌ನಂತಹ ಹೆಸರುಗಳನ್ನು ಹೊಂದಿರುವ ಭಯೋತ್ಪಾದಕ ಸಂಘಟನೆಗಳನ್ನು ಬಹಳ ಚಿಂತನಶೀಲವಾಗಿ ರಚಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆಗಳನ್ನು ಸ್ಥಳೀಕರಿಸುವುದು ಇದರ ಉದ್ದೇಶವಾಗಿದೆ. ಭಾರತದ ವಿದೇಶಾಂಗ ಸಚಿವಾಲಯವು 2023 ರಿಂದ ಟಿಆರ್‌ಎಫ್ ಬಗ್ಗೆ ಜಾಗತಿಕ ಸಮುದಾಯವನ್ನು ಎಚ್ಚರಿಸುತ್ತಿದೆ.

ಈ ವರದಿಯು ಭಯೋತ್ಪಾದನೆಯ ವಿರುದ್ಧ ಭಾರತದ ನೀತಿ ಬಲಗೊಳಿಸುವ ಸಾಧ್ಯತೆಯನ್ನು ಹೆಚ್ಚಿಸಿದೆ. ಕಾರಣವೆಂದರೆ ಭಾರತವು ಪಾಕಿಸ್ತಾನವು ಗಡಿಯುದ್ದಕ್ಕೂ ಭಯೋತ್ಪಾದನೆಯನ್ನು ಹರಡುತ್ತಿದೆ ಎಂದು ಬಹಳ ಸಮಯದಿಂದ ಆರೋಪಿಸುತ್ತಿದೆ. ಈಗ UNSC ವರದಿಯಲ್ಲಿಯೂ ಇದನ್ನು ಉಲ್ಲೇಖಿಸಲಾಗಿದೆ, ಭಾರತಕ್ಕೆ ಅಂತಾರಾಷ್ಟ್ರೀಯ ಬೆಂಬಲ ಸಿಗುವ ಸಾಧ್ಯತೆ ಹೆಚ್ಚಾಗಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಬಿಡುಗಡೆಯಾದ ವರದಿಯಲ್ಲಿ, ಒಂದು ಸದಸ್ಯ ರಾಷ್ಟ್ರವು ಲಷ್ಕರ್-ಎ-ತೊಯ್ಬಾದ ಸಹಾಯವಿಲ್ಲದೆ ಈ ದಾಳಿ ಸಾಧ್ಯವಿಲ್ಲ ಮತ್ತು ಟಿಆರ್‌ಎಫ್ ಎಲ್‌ಇಟಿಯೊಂದಿಗೆ ನೇರ ಸಂಪರ್ಕವನ್ನು ಹೊಂದಿದೆ ಎಂದು ಹೇಳಿದೆ. ಅದೇ ಸಮಯದಲ್ಲಿ, ಮತ್ತೊಂದು ದೇಶವು ಟಿಆರ್‌ಎಫ್ ಮತ್ತು ಎಲ್‌ಇಟಿ ಒಂದೇ ಸಂಘಟನೆಯಾಗಿದೆ, ಹೆಸರನ್ನು ಮಾತ್ರ ಬದಲಾಯಿಸಲಾಗಿದೆ ಎಂದು ಹೇಳಿದೆ.

ಲಷ್ಕರ್-ಎ-ತೊಯ್ಬಾ ಬೆಂಬಲವಿಲ್ಲದೆ ದಾಳಿ ನಡೆಯಲು ಸಾಧ್ಯವಿಲ್ಲ ಮತ್ತು ಎಲ್‌ಇಟಿ ಮತ್ತು ಟಿಆರ್‌ಎಫ್ ನಡುವೆ ಸಂಬಂಧವಿತ್ತು ಎಂದು ಸದಸ್ಯ ರಾಷ್ಟ್ರವೊಂದು ಹೇಳಿರುವುದನ್ನು ವರದಿ ಉಲ್ಲೇಖಿಸಿದೆ. ಮತ್ತೊಂದು ಸದಸ್ಯ ರಾಷ್ಟ್ರವು ಈ ದಾಳಿಯನ್ನು ಟಿಆರ್‌ಎಫ್ ನಡೆಸಿದೆ ಎಂದು ಹೇಳಿದೆ, ಇದು ಎಲ್‌ಇಟಿಗೆ ಸಮಾನವಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರು, ರಾಜಕೀಯ ಮುಖಂಡರು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ನಡೆದ ಹಲವಾರು ದಾಳಿಗಳ ಹೊಣೆಯನ್ನು ಟಿಆರ್‌ಎಫ್ ಹೊತ್ತುಕೊಂಡಿತ್ತು. ಇದರ ಸ್ಥಾಪಕ ಮತ್ತು ಕಮಾಂಡರ್ ಶೇಖ್ ಸಜ್ಜದ್ ಗುಲ್ ಅವರನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, 1967 ರ ಅಡಿಯಲ್ಲಿ ಭಯೋತ್ಪಾದಕ ಎಂದು ಹೆಸರಿಸಲಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ