Video: ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ, ಹೊಣೆಗಾರರು ಯಾರೇ ಆಗಿರಲಿ ರಾಜೀನಾಮೆ ನೀಡಲಿ: ಖರ್ಗೆ
ಪಹಲ್ಗಾಮ್ ಭಯೋತ್ಪಾದಕ ದಾಳಿ(Pahalgam Terror Attack)ಗೆ ಭದ್ರತಾ ಲೋಪವೇ ಕಾರಣ, ಹೊಣೆಗಾರರು ಯಾರೇ ಆಗಿರಲಿ ಕೂಡಲೇ ರಾಜೀನಾಮೆ ನೀಡಲಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಇಂದು ಆಪರೇಷನ್ ಸಿಂಧೂರ್ ಕುರಿತ ಚರ್ಚೆ ನಡೆಯುತ್ತಿದೆ. ರಾಜನಾಥ್ ಸಿಂಗ್ ಈ ಬಗ್ಗೆ ಚರ್ಚೆ ಆರಂಭಿಸಿದರು, ನಂತರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಟ್ರಂಪ್ ಅವರ ಹೇಳಿಕೆ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ನವದೆಹಲಿ, ಜುಲೈ 29: ಪಹಲ್ಗಾಮ್ ಭಯೋತ್ಪಾದಕ ದಾಳಿ(Pahalgam Terror Attack)ಗೆ ಭದ್ರತಾ ಲೋಪವೇ ಕಾರಣ, ಹೊಣೆಗಾರರು ಯಾರೇ ಆಗಿರಲಿ ಕೂಡಲೇ ರಾಜೀನಾಮೆ ನೀಡಲಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಇಂದು ಆಪರೇಷನ್ ಸಿಂಧೂರ್ ಕುರಿತ ಚರ್ಚೆ ನಡೆಯುತ್ತಿದೆ. ರಾಜನಾಥ್ ಸಿಂಗ್ ಈ ಬಗ್ಗೆ ಚರ್ಚೆ ಆರಂಭಿಸಿದರು, ನಂತರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಟ್ರಂಪ್ ಅವರ ಹೇಳಿಕೆ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಕೂಡಾ ಭದ್ರತಾ ಲೋಪಗಳನ್ನು ಒಪ್ಪಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಸಾಕಷ್ಟು ಭದ್ರತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ವಿಫಲವಾದ ಕಾರಣ ಗೃಹ ಸಚಿವ ಅಮಿತ್ ಶಾ ಅವರೇ ಹೊಣೆ ಹೊರಬೇಕು ಎಂದು ಖರ್ಗೆ ಒತ್ತಾಯಿಸಿದರು.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಬೈಸರನ್ ಪ್ರದೇಶದಲ್ಲಿ ಉಗ್ರರು ಅಮಾಯಕರ ಮೇಲೆ ದಾಳಿ ನಡೆಸಿದ್ದರು. ಮೆಹೆಂದಿಯಿಂದ ಅಲಂಕೃತಗೊಂಡಿರುವ ಕೈಗಳಲ್ಲಿ ಗಂಡನ ರಕ್ತಸಿಕ್ತ ದೇಹವನ್ನು ಹಿಡಿಯಬೇಕಾಯಿತು, ಅಸಹಾಯಕತೆಯಿಂದ ಅಳುವ ಮಕ್ಕಳು, ಹತಾಶೆಯಿಂದ ಕುಸಿದಿದ್ದ ಹೆಣ್ಣುಮಕ್ಕಳನ್ನು ನೋಡಿದ್ದೇವೆ.
ಪಹಲ್ಗಾಮ್ ಕಣಿವೆಯಲ್ಲಿ ನಮ್ಮ ಪ್ರೀತಿಪಾತ್ರರು ಸಾಯುವುದನ್ನು ನಾವು ಕಂಡಿದ್ದೇವೆ. ಪಹಲ್ಗಾಮ್‌ನಲ್ಲಿ ನಡೆದ ಅನಾಗರಿಕ ದಾಳಿ ಮತ್ತು ಪಾಕಿಸ್ತಾನದಿಂದ ಭಯೋತ್ಪಾದಕರಿಗೆ ನಿರಂತರ ಬೆಂಬಲ ನೀಡುವುದನ್ನು ನಾನು ಖಂಡಿಸುತ್ತೇನೆ. ನಾವು ಈ ಹಿಂದೆಯೂ ಪಾಕಿಸ್ತಾನವನ್ನು ಖಂಡಿಸಿದ್ದೆವು, ಇಂದು ಕೂಡ ನಾವು ಅವರನ್ನು ಖಂಡಿಸುತ್ತೇವೆ ಮತ್ತು ನಾಳೆಯೂ ಇದು ಮುಂದುವರಿದರೆ, ನಾವು ಅವರನ್ನು ಖಂಡಿಸುತ್ತಲೇ ಇರುತ್ತೇವೆ ಎಂದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

