ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಸಮಾರಂಭದ ವೇಳೆ ವಿವಿಧ ದೇಶಗಳ ಪ್ರತಿನಿಧಿಗಳು ಆಗಮಿಸಿದ್ದರು. ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾರತದಿಂದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾಗವಹಿಸಿದ್ದರು. ಪ್ರಮಾಣವಚನ ಸಮಾರಂಭದಲ್ಲಿ ಜೈಶಂಕರ್ ಅವರು ಈಕ್ವೆಡಾರ್ ಅಧ್ಯಕ್ಷ ಡೇನಿಯಲ್ ನೊಬೊವಾ ಅವರೊಂದಿಗೆ ಮೊದಲ ಸಾಲಿನಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು, ಇದು ಅಧಿಕೃತ ಪ್ರೋಟೋಕಾಲ್ ಆಗಿದೆ. ಇದು ಭಾರತ ಹಾಗೂ ಅಮೆರಿಕದ ಸಂಬಂಧವನ್ನು ಹೇಳುತ್ತದೆ. ಈ ಸಮಯದಲ್ಲಿ, ಜಪಾನ್ ವಿದೇಶಾಂಗ ಸಚಿವ ತಕೇಶಿ ಇವಾಯಾ ಹಿಂದೆ ಕುಳಿತಿರುವುದು ಕಂಡುಬಂದಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷರಾದ ನಂತರ ಡೊನಾಲ್ಡ್ ಟ್ರಂಪ್ ಅವರನ್ನು ಅಭಿನಂದಿಸಿದ್ದಾರೆ. ಅದನ್ನು ರೂಪಿಸಲು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಬರೆದಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಅವರ ಜಪಾನ್ ಸಹವರ್ತಿ ತಕೇಶಿ ಇವಾಯಾ ಅವರು ತಂತ್ರಜ್ಞಾನ, ಭದ್ರತೆ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಭಾರತ-ಜಪಾನ್ ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಿದ್ದಾರೆ.
ವಾಷಿಂಗ್ಟನ್‌ನಲ್ಲಿ ನಡೆದ ತಮ್ಮ ಸಭೆಯಲ್ಲಿ, ಇಬ್ಬರು ವಿದೇಶಾಂಗ ಮಂತ್ರಿಗಳು 2025-26 ಅನ್ನು ‘ಭಾರತ-ಜಪಾನ್ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ವರ್ಷ’ ಎಂದು ಘೋಷಿಸಿದರು. ರಾಜಕೀಯ, ಭದ್ರತೆ, ಆರ್ಥಿಕ, ತಾಂತ್ರಿಕ ಮತ್ತು ಜನರಿಂದ ಜನರ ಸಂಪರ್ಕಗಳು ಸೇರಿದಂತೆ ದ್ವಿಪಕ್ಷೀಯ ಸಹಕಾರದ ಪ್ರಮುಖ ವಿಷಯಗಳ ಕುರಿತು ಸಚಿವರು ಸಭೆಯಲ್ಲಿ ಚರ್ಚಿಸಿದರು.
ಜೈಶಂಕರ್ ಅವರು ಜಪಾನ್ ವಿದೇಶಾಂಗ ಸಚಿವ ಇವಾಯಾ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ.
ಮತ್ತಷ್ಟು ಓದಿ: ಅಮೆರಿಕದಲ್ಲಿ ಮತ್ತೆ ಟ್ರಂಪ್ ದರ್ಬಾರ್, ಸರ್ಕಾರ ರಚನೆಯಾಗುತ್ತಿದ್ದಂತೆ ಮಾಡಿದ ಘೋಷಣೆಗಳಿವು
ಜೈಶಂಕರ್-ಇವಾಯಾ ಭೇಟಿಯು ಭಾರತ ಮತ್ತು ಜಪಾನ್ ನಡುವಿನ ನಿರಂತರ ಸ್ನೇಹವನ್ನು ಪರಸ್ಪರ ನಂಬಿಕೆ, ಹಂಚಿಕೆಯ ಮೌಲ್ಯಗಳು ಮತ್ತು ಪ್ರಾದೇಶಿಕ ಸ್ಥಿರತೆಗೆ ಬದ್ಧತೆಯ ಆಧಾರದ ಮೇಲೆ ಬಲಪಡಿಸಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:08 am, Tue, 21 January 25