AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧುಗಿರಿ ಬಿಜೆಪಿ ಸಮಾವೇಶದಲ್ಲಿ ಎಣ್ಣೆ ಕಿಕ್​ನಲ್ಲಿ ಲುಂಗಿ ಡ್ಯಾನ್ಸ್: ವಿಡಿಯೋ ನೋಡಿ

ಮಧುಗಿರಿ ಬಿಜೆಪಿ ಸಮಾವೇಶದಲ್ಲಿ ಎಣ್ಣೆ ಕಿಕ್​ನಲ್ಲಿ ಲುಂಗಿ ಡ್ಯಾನ್ಸ್: ವಿಡಿಯೋ ನೋಡಿ

ಮಹೇಶ್ ಇ, ಭೂಮನಹಳ್ಳಿ
| Edited By: |

Updated on: Apr 19, 2024 | 7:32 PM

Share

ತುಮಕೂರು ಜಿಲ್ಲೆಯ ಮಧುಗಿರಿಯ ಪಟ್ಟಣದ ಸಂತೆಮೈದಾನದಲ್ಲಿ ನಡೆದಿದ್ದ ಬಿಜೆಪಿ ಮತ್ತು ಜೆಡಿಎಸ್​ ಮೈತ್ರಿ ಸಮಾವೇಶದಲ್ಲಿ ಎಣ್ಣೆ ಏಟಿನಲ್ಲಿದ್ದ ಕಾರ್ಯಕರ್ತರು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಬಿಜೆಪಿ-ಜೆಡಿಎಸ್ ಬಾವುಟ ಹಿಡಿದು ಡಿಜೆ ಸಾಂಗ್​​ಗೆ ಕಾರ್ಯಕರ್ತರು ಲುಂಗಿ ಡಾನ್ಸ್​ ಮಾಡಿದ್ದಾರೆ. ಮೈತ್ರಿ ಅಭ್ಯರ್ಥಿ ಪರ ಸೋಮಣ್ಣ ಪರ ಇಂದು ಮತಯಾಚನೆ ಮಾಡಲಾಗಿದೆ.

ತುಮಕೂರು, ಏಪ್ರಿಲ್ 19: ಜಿಲ್ಲೆಯ ಮಧುಗಿರಿಯ ಪಟ್ಟಣದ ಸಂತೆಮೈದಾನದಲ್ಲಿ ಇಂದು ಬಿಜೆಪಿ (BJP) ಮತ್ತು ಜೆಡಿಎಸ್​ (JDS) ಮೈತ್ರಿ ಸಮಾವೇಶ ಮಾಡಲಾಗಿದೆ. ಇತ್ತ ಸಮಾವೇಶ ಮುಗಿಯುತ್ತಿದ್ದಂತೆ ಎಣ್ಣೆ ಏಟಿನಲ್ಲಿದ್ದ ಕಾರ್ಯಕರ್ತರು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಬಿಜೆಪಿ-ಜೆಡಿಎಸ್ ಬಾವುಟ ಹಿಡಿದು ಡಿಜೆ ಸಾಂಗ್​​ಗೆ ಕಾರ್ಯಕರ್ತರು ಲುಂಗಿ ಡಾನ್ಸ್​ ಮಾಡಿದ್ದಾರೆ. ಡ್ಯಾನ್ಸ್ ಮಾಡುವಾಗ ಲುಂಗಿ ಬಿಚ್ಚಿಬಿದ್ದರೂ ಪರಿವೇ ಇಲ್ಲದೇ ಕಾರ್ಯಕರ್ತರು ಕುಣಿದಿದ್ದಾರೆ. ಮೈತ್ರಿ ಅಭ್ಯರ್ಥಿ ಪರ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೋಮಣ್ಣ ಪರ ಮತಯಾಚನೆ ಮಾಡಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

Follow Us
Mahesha E
Mahesha E

ಮಹೇಶ್ ಇ ಎಂಬ ನಾನು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಭೂಮನಹಳ್ಳಿ ಗ್ರಾಮದ ನಿವಾಸಿ. ನಮ್ಮ ಹೆಮ್ಮೆಯ ಟಿವಿ9 ತುಮಕೂರು ಜಿಲ್ಲಾ ವರದಿಗಾರನಾಗಿ ಸತತ 9 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಡೆದಾಡುವ ದೇವರು ತ್ರಿವಿಧ ದಾಸೋಹಿ ಶಿವಕುಮಾರ್ ಶ್ರೀಗಳು ಲಿಂಗೈಕ್ಯರಾದಾಗ ಆ ಸುದ್ದಿ ಬಿತ್ತರ ಬಗ್ಗೆ ಹಾಗೂ ಕೊನೆ ಕ್ಷಣದಲ್ಲಿ ದೇವರ ಜೊತೆಯಿದ್ದ ಎಲ್ಲಾ ಕಾರ್ಯಕ್ರಮಗಳನ್ನ ನೋಡಿ ವರದಿ ಮಾಡಿದ್ದು ನನ್ನ ಭಾಗ್ಯ..ಬಡ ಕುಟುಂಬದಿಂದ ಬಂದಿರುವ ನನಗೆ ಟಿವಿ9 ಸಂಸ್ಥೆ ತುಮಕೂರು ಅಂತಾ ಅತಿದೊಡ್ಡ ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದ...

Read More