ಟ್ವಿಟ್ಟರ್ ಸಿಇಒ ಎಲಾನ್ ಮಸ್ಕ್(Elon Musk) ನಿತ್ಯ ಒಂದಲ್ಲಾ ಒಂದು ವಿಚಾರಗಳಿಂದ ಸುದ್ದಿಯಲ್ಲಿದ್ದಾರೆ. ಇದೀಗ ಟ್ವಿಟ್ಟರ್ ಲೋಗೋದಿಂದ ನೀಲಿ ಹಕ್ಕಿ ತೆಗೆದು ನಾಯಿ ಚಿತ್ರವನ್ನು ಹಾಕಿದ್ದು ಕುತೂಹಲ ಮೂಡಿಸಿದೆ. ಹಕ್ಕಿಯ ಜಾಗಕ್ಕೆ ಕ್ರಿಪ್ಟೋಕರೆನ್ಸಿ ಡಾಗ್ಕಾಯಿನ್ನ ನಾಯಿಯ ಮೀಮ್ಸ್ ಫೋಟೋವನ್ನು ಬಳಸಿದ್ದಾರೆ. ಮಸ್ಕ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಟ್ವಿಟ್ಟರ್ ಬದಲಾವಣೆ ಕೇವಲ ವೆಬ್ ಆವೃತ್ತಿಗೆ ಮಾತ್ರ ಸೀಮಿತವಾಗಿದೆ, ಮೊಬೈಲ್ನಲ್ಲಿ ಪಕ್ಷಿಯ ಲೋಗೋನೆ ಕಾಣಿಸಲಿದೆ.
ಬಿಟ್ ಕಾಯಿನ್ನಂತಹ ಇತರೆ ಕ್ರಿಪ್ಟೋ ಕರೆನ್ಸಿಯನ್ನು ಅಪಹಾಸ್ಯ ಮಾಡಲು 2013ರಲ್ಲಿ ತಮಾಷೆಗಾಗಿ ಈ ನಾಯಿ ಚಿತ್ರ ರಚಿಸಲಾಗಿತ್ತು.
2022ರ ಏಪ್ರಿಲ್ನಲ್ಲಿ ಟ್ವಿಟ್ಟರ್ ಖರೀದಿಸುವ 22 ಬಿಲಿಯನ್ ಡಾಲರ್ ಒಪ್ಪಂದವನ್ನು ಮಸ್ಕ್ ಆರಮಭಿಸಿದ್ದರು. ಅವರು ಸ್ಪ್ಯಾಮ್ ಖಾತೆಗಳನ್ನು ತೆಗೆದುಹಾಕಲು ಯೋಜಿಸಿದ್ದರು.
— Elon Musk (@elonmusk) April 3, 2023
ಇದಲ್ಲದೆ, Twitter ನ CEO ತನ್ನ ಮತ್ತು ಅನಾಮಧೇಯ ಖಾತೆಯ ನಡುವಿನ ಸಂಭಾಷಣೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ, ಅಲ್ಲಿ ನಂತರದವರು ಪಕ್ಷಿ ಲೋಗೋವನ್ನು ನಾಯಿಗೆ ಬದಲಾಯಿಸಲು ಕೇಳುತ್ತಿದ್ದಾರೆ. ಈ ಪೋಸ್ಟ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ಮಸ್ಕ್, ಭರವಸೆ ನೀಡಿದಂತೆ ಎಂದು ಬರೆದಿದ್ದಾರೆ. ಈ ಚರ್ಚೆಯು ಮಾರ್ಚ್ 26, 2022 ರಂದು ನಡೆಯಿತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ