Elon Musk: ಕಚೇರಿ ಐಚ್ಛಿಕವಲ್ಲ: ತಡರಾತ್ರಿ 2.30ಕ್ಕೆ ಟ್ವಿಟ್ಟರ್ ಉದ್ಯೋಗಿಗಳಿಗೆ ಹೀಗೊಂದು ಇ-ಮೇಲ್ ಕಳುಹಿಸಿದ ಎಲಾನ್ ಮಸ್ಕ್
ಎಲಾನ್ ಮಸ್ಕ್ ಟ್ವಿಟ್ಟರ್ನ ಅಧಿಕಾರವಹಿಸಿಕೊಂಡ ಬಳಿಕ ಹಲವು ಬದಲಾವಣೆಗಳಾಗಿವೆ, ಸಾಕಷ್ಟು ಉದ್ಯೋಗಿಗಳ ವಜಾಗೊಳಿಸಲಾಗಿದೆ.
ಎಲಾನ್ ಮಸ್ಕ್ ಟ್ವಿಟ್ಟರ್ನ ಅಧಿಕಾರವಹಿಸಿಕೊಂಡ ಬಳಿಕ ಹಲವು ಬದಲಾವಣೆಗಳಾಗಿವೆ, ಸಾಕಷ್ಟು ಉದ್ಯೋಗಿಗಳ ವಜಾಗೊಳಿಸಲಾಗಿದೆ. ವರ್ಕ್ ಫ್ರಂ ಹೋಂ ನಿಲ್ಲಿಸಿ ಎಲ್ಲರನ್ನೂ ಕಚೇರಿಗೆ ಬರುವಂತೆ ನೋಟಿಸ್ ನೀಡಲಾಯಿತು, ಹೀಗೆ ಹಲವು ಬದಲಾವಣೆಗಳು ನಡೆಯುತ್ತಿವೆ. ಇದೀಗ ತಡರಾತ್ರಿ 2.30ಕ್ಕೆ ತನ್ನ ಉದ್ಯೋಗಿಗಳಿಗೆ ಎಲಾನ್ ಮಸ್ಕ್ ಇ-ಮೇಲ್ ಮಾಡಿದ್ದು, ಅದರಲ್ಲಿ ಕಚೇರಿ ಐಚ್ಛಿಕವಲ್ಲ ಎಂದು ಬರೆಯಲಾಗಿದೆ.
ಸ್ಯಾನ್ಫ್ರಾನ್ಸಿಸ್ಕೋದ ಕಚೇರಿ ಅರ್ಧಕ್ಕರ್ಧ ಖಾಲಿ ಇದ್ದಿದ್ದನ್ನು ಗಮನಿಸಿ ಎಲಾನ್ ಮಸ್ಕ್ ತಡರಾತ್ರಿ ಇ-ಮೇಲ್ ಕಳುಹಿಸಿದ್ದಾರೆ. ಟ್ವಿಟರ್ ಅನ್ನು 44 ಶತಕೋಟ ಡಾಲರ್ಗೆ ಖರೀದಿಸಿದ ನಂತರ, ಅದು ತನ್ನ ಮುಕ್ಕಾಲು ಭಾಗದಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಅದೇ ಸಮಯದಲ್ಲಿ, ಈ ಹಿಂಬಡ್ತಿ ಇನ್ನಷ್ಟು ಹೆಚ್ಚಾಗಬಹುದು ಎಂದು ವರದಿಯೊಂದು ಹೇಳುತ್ತದೆ.
ಮತ್ತಷ್ಟು ಓದಿ: Twitter: ಶೀಘ್ರದಲ್ಲೇ ದೀರ್ಘ ರೂಪದ ಟ್ವೀಟ್‌ಗಳ ಅಕ್ಷರ ಮಿತಿ 10,000ಕ್ಕೆ ಹೆಚ್ಚಿಸಲಿದೆ ಟ್ವಿಟರ್: ಸಿಇಒ ಎಲಾನ್ ಮಸ್ಕ್
ಇದಲ್ಲದೇ ಈಗ ಬ್ಲೂ ಬ್ಯಾಡ್ಜ್ ಪರಿಶೀಲನೆಗೆ ಜನರಿಂದ ಹಣ ವಸೂಲಿ ಮಾಡಲಾಗುತ್ತಿದೆ . ಎಲಾನ್ ಮಸ್ಕ್ ಬ್ಯುಸಿನೆಸ್ ಗೋಲ್ಡ್ ಬ್ಯಾಡ್ಜ್‌ಗೆ 1000 ರೂ.ವರೆಗೆ ಶುಲ್ಕ ವಿಧಿಸುತ್ತಿದ್ದಾರೆ. ಅದೇ ಸಮಯದಲ್ಲಿ, ಬ್ಲೂ ಬ್ಯಾಡ್ಜ್ನಲ್ಲಿ ಶುಲ್ಕವನ್ನು ನೀಡದಿದ್ದರೆ, ಅದನ್ನು ಏಪ್ರಿಲ್ 1 ರಿಂದ ತೆಗೆದುಹಾಕಲಾಗುತ್ತದೆ ಎಂದು ಹೇಳಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ