ಈ ಮಹಿಳೆ ಒಂದು ವರ್ಷಕ್ಕೂ ಹೆಚ್ಚು ಸಮಯ ಮೂತ್ರ ವಿಸರ್ಜನೆ ಮಾಡಲೇ ಇಲ್ಲ! ಈ ರೋಗದ ಬಗ್ಗೆ ಎಚ್ಚರವಿರಲಿ
ಮನುಷ್ಯನಾದವನಿಗೆ ಎಲ್ಲಾ ರೀತಿಯ ಕಾಯಿಲೆಗಳು ಬರುತ್ತಿರುತ್ತವೆ. ಆ ಸುದ್ದಿಯನ್ನು ನಾವು ಪ್ರತಿನಿತ್ಯ ಕೇಳುತ್ತಿರುತ್ತೇವೆ. ಲಂಡನ್‌ನ ಮಹಿಳೆಯೊಬ್ಬರು 1 ವರ್ಷಗಳಿಗೂ ಹೆಚ್ಚು ಕಾಲ ಮೂತ್ರ ಮಾಡದೇ ಜೀವಿಸಿದ್ದಾರೆ ಎಂಬುವುದು ನಿಮಗೆ ತಿಳಿದಿದೆಯೇ? ಹೌದು ಫೌಲರ್ಸ್ ಸಿಂಡ್ರೋಮ್ ಎಂಬ ಅಪರೂಪದ ಕಾಯಿಲೆಗೆ ತುತ್ತಾಗಿದ್ದ ಈ ಮಹಿಳೆ ಒಂದು ವರ್ಷಕ್ಕೂ ಅಧಿಕ ಕಾಲ ಮೂತ್ರ ವಿಸರ್ಜನೆ ಮಾಡಲೇ ಇಲ್ಲ.
ಮಹಿಳೆಯೊಬ್ಬರು ಒಂದು ವರ್ಷಕ್ಕೂ ಹೆಚ್ಚು ಕಾಲ ಮೂತ್ರ ವಿಸರ್ಜನೆ ಮಾಡದೆ ಇರುವ ಅಪರೂಪದ ಘಟನೆಯನ್ನು ಇಂಗ್ಲೆಂಡಿನಲ್ಲಿ ಪತ್ತೆಹಚ್ಚಲಾಗಿದೆ. ಲಂಡನ್‌ನ ನಿವಾಸಿಯಾಗಿರುವ ಎಲ್ಲೆ ಆಡಮ್ಸ್ ಎಂಬ ಮಹಿಳೆ ಸುಮಾರು ಒಂದು ವರ್ಷಕ್ಕೂ ಅಧಿಕ ಕಾಲ ಮೂತ್ರ ವಿಸರ್ಜನೆಯನ್ನು ಮಾಡಿಯೇ ಇಲ್ಲ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ 30 ವರ್ಷ ವಯಸ್ಸಿನ ಎಲ್ಲೆ ಆಡಮ್ಸ್ ಎಂಬ ಹೆಸರಿನ ಮಹಿಳೆಗೆ ಅಕ್ಟೋಬರ್ 2020 ರಿಂದ ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗಲಿಲ್ಲ. ಅವರು ಎಷ್ಟೇ ದ್ರವ ಪದಾರ್ಥಗಳನ್ನು ಸೇವನೆ ಮಾಡಿದರೂ, ಮೂತ್ರ ವಿಸರ್ಜಿಸಲು ಮಾತ್ರ ಸಾಧ್ಯವಾಗಲಿಲ್ಲ. ನಾನು ಸಂಪೂರ್ಣವಾಗಿ ಆರೋಗ್ಯವಂತಳಾಗಿದ್ದೆ. ನನಗೆ ಬೇರೆ ಯಾವುದೇ ರೀತಿಯ ಸಮಸ್ಯೆಗಳು ಇರಲಿಲ್ಲ, ಆದರೆ ಒಂದು ದಿನ ಬೆಳಗ್ಗೆ ಎಚ್ಚರಗೊಂಡಾಗ ನನಗೆ ಮೂತ್ರ ವಿಸರ್ಜಿಸಲು ಸಾಧ್ಯವಾಗಲಿಲ್ಲ, ಇದರಿಂದ ನಾನು ತುಂಬಾ ಚಿಂತಿತಳಾಗಿದ್ದೆ ಎಂದು ಎಲ್ಲೆ ಆಡಮ್ಸ್ ಹೇಳುತ್ತಾರೆ. ಮತ್ತು ನನ್ನ ಜೀವನವು ಸಂಪೂರ್ಣವಾಗಿ ಬದಲಾಗಿದೆ. ಶೌಚಾಲಯಕ್ಕೆ ಹೋಗುವ ಸರಳ ಕೆಲಸವನ್ನು ಕೂಡಾ ಈಗ ನನಗೆ ಮಾಡಲಾಗಲಿಲ್ಲ ಎಂದು ಅವರು ಹೇಳಿದರು.
ನಂತರ ಎಲ್ಲೆ ಆಡಮ್ಸ್ ಲಂಡನ್‌ನ ಸೇಂಟ್ ಥಾಮಸ್ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಹೋಗುತ್ತಾರೆ. ವೈದ್ಯರು ಅವರನ್ನು ಪರಿಶೀಲಿಸಿ ರೋಗಲಕ್ಷಣಗಳನ್ನು ವಿವರಿಸಿದ ನಂತರ, ಅವರ ಮೂತ್ರಕೋಶದಲ್ಲಿ ಒಂದು ಲೀಟರ್ ಮೂತ್ರವಿದೆ ಎಂಬುದು ತಿಳಿಯಿತು. ಸಾಮಾನ್ಯವಾಗಿ ಮೂತ್ರಕೋಶವು ಮಹಿಳೆಯರಲ್ಲಿ 500 ಮಿಲಿ ಮತ್ತು ಪುರುಷರಲ್ಲಿ 700 ಮಿಲಿ ಮೂತ್ರವನ್ನು ಮಾತ್ರ ಹಿಡಿದಿಟ್ಟುಕೊಳ್ಳುತ್ತದೆ.
ವೈದ್ಯರು ಆಡಮ್ಸ್ಗೆ ತುರ್ತು ಕ್ಯಾತಿಟರ್ ಚಿಕಿತ್ಸೆಯನ್ನು ನೀಡಿದರು. ಮೂತ್ರವನ್ನು ಹರಿಸುವುದಕ್ಕಾಗಿ ಮೂತ್ರಕೋಶಕ್ಕೆ ಟ್ಯೂಬ್ ಹಾಕಿದರು. ಆದರೂ ಅವರ ಸಮಸ್ಯೆಗಳನ್ನು ತಕ್ಷಣವೇ ಸರಿಪಡಿಸಲಾಗಲಿಲ್ಲ. ಒಂದು ವಾರದ ನಂತರ ಮೂತ್ರಶಾಸ್ತ್ರç ಕೇಂದ್ರಕ್ಕೆ ಭೇಟಿ ನೀಡಿದ ನಂತರ ಶ್ರೀಮತಿ ಆಡಮ್ಸ್ ಅವರಿಗೆ ಕ್ಯಾತಿಟರಿ ಟ್ಯೂಬ್ ಹೇಗೆ ಬಳಸುವುದೆಂದು ಕಲಿಸಲಾಯಿತು ಮತ್ತು ನಂತರ ಮನೆಗೆ ಕಳುಹಿಸಲಾಯಿತು. ಆ ದಿನ ನಾನು ತುಂಬಾ ಆತಂಕದಲ್ಲಿದ್ದೆ ಎಂದು ವೈದ್ಯರು ನನಗೆ ಹೇಳಿದರು. ಮತ್ತು ನಾನು ದೂರ ಹೋಗಿ ಸ್ವಲ್ಪ ಯೋಗ ಮತ್ತು ಧ್ಯಾನವನ್ನು ಮಾಡಿದರೆ ಬಹುಶಃ ಚೆನ್ನಾಗಿರುತ್ತೇನೆ ಎಂದು ಎಲ್ಲೆ ಆಡಮ್ಸ್ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಯಾಹೂ ಪ್ರಕಾರ, ಲಂಡನ್‌ನ 30 ವರ್ಷದ ಕಂಟೆಂಟ್ ಕ್ರಿಯೇಟರ್ ಎಲ್ಲೆ ಆಡಮ್ಸ್ ಒಂದು ವರ್ಷಕ್ಕೂ ಹೆಚ್ಚು ಕಾಲ ಮೂತ್ರ ವಿಸರ್ಜಿಸಲು ಕ್ಯಾತಿಟರಿ ಟ್ಯೂಬ್ ಸಾಧನವನ್ನು ಬಳಸುವುದನ್ನು ಮುಂದುವರೆಸಿದರು. ಇದು ಸುಮಾರು 14 ತಿಂಗಳುಗಳ ನಂತರ ಅನೇಕ ಪರೀಕ್ಷೆಗಳ ಬಳಿಕ ಅವರು ‘ಫೌಲರ್ ಸಿಂಡ್ರೋಮ್’ನಿಂದ ಬಳಲುತ್ತಿದ್ದಾರೆ ಎಂಬುವುದು ತಿಳಿಯಿತು. ಹಾಗೂ ಆಕೆ ತನ್ನ ಜೀವನದುದ್ದಕ್ಕೂ ಕ್ಯಾತಿಟರಿ ಟ್ಯೂಬ್ ಬಳಸಿಯೇ ಮೂತ್ರ ವಿಸರ್ಜನೆ ಮಾಡಬೇಕಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: Loneliness Health Issues: ಒಂಟಿತನದಿಂದ ಈ 5 ಗಂಭೀರ ಕಾಯಿಲೆ ಬರಬಹುದು
ಈ ಫೌಲರ್ಸ್ ಸಿಂಡ್ರೋಮ್ ಮೂತ್ರಕೋಶದಲ್ಲಿನ ಮೂತ್ರವನ್ನು ಖಾಲಿ ಮಾಡಲು ಅಸಮರ್ಥವಾಗಿರುವಂತೆ ಮಾಡುತ್ತದೆ. ಈ ಅಪರೂಪದ ಸ್ಥಿತಿಯು ಹೆಚ್ಚಾಗಿ ಮಹಿಳೆಯರ ಮೇಲೆ ಪರಿಣಾಮವನ್ನು ಬೀರುತ್ತದೆ. ಅದಕ್ಕೆ ಕಾರಣ ಏನೆಂಬುವುದು ಇನ್ನೂ ತಿಳಿದಿಲ್ಲ. ನಾನು ಫೌಲರ್ಸ್ ಕಾಯಿಲೆಯಿಂದ ಹೇಗೆ ಬಳಲುತ್ತಿದ್ದೇನೆ ಎಂದು ನನಗೆ ತಿಳಿಸಲಾಯಿತು. ಮತ್ತು ಅದಕ್ಕೆ ಚಿಕಿತ್ಸೆಯನ್ನು ಕೂಡಾ ಮುಂದುವೆರೆಸಲಾಯಿತು. ಅನೇಕ ಔಷಧಿಗಳನ್ನು ಕೂಡಾ ತೆಗೆದುಕೊಂಡಿದ್ದೇನೆ. ಆದರೆ ಇವುಗಳು ಈ ರೋಗದಲ್ಲಿ ಯಾವುದೇ ವ್ಯತ್ಯಾಸವನ್ನು ಕೂಡಾ ಮಾಡಲಿಲ್ಲ’ ಎಂದು ಎಲ್ಲೆ ಆಡಮ್ಸ್ ಹೇಳುತ್ತಾರೆ.
View this post on Instagram
ಮೂತ್ರಕೋಶ ಮತ್ತು ಕರುಳಿನ ಸಮಸ್ಯೆಗಳ ಚಿಕಿತ್ಸೆಯಾದ ಸ್ಯಾಕ್ರಲ್ ನರ್ವ್ ಸ್ಟಿಮ್ಯುಲೇಷನ್ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಉತ್ತಮ ಎಂಬುದನ್ನು ಆಡಮ್ಸ್ಗೆ ತಿಳಿಸಲಾಯಿತು. ಔಟ್ಲೆಟ್ ಪ್ರಕಾರ ಎಲ್ಲೆ ಆಡಮ್ಸ್ ಜನವರಿ 2023ರಲ್ಲಿ ಕಾರ್ಯವಿಧಾನವನ್ನು ಮುಂದುವರೆಸಿದರು. ಇದು ನನ್ನ ಜೀವನವನ್ನು ಬದಲಾಯಿಸುವುದಿಲ್ಲ. ಆದರೆ ಇದು ನನಗೆ ಸ್ವಲ್ಪ ಮಟ್ಟಿಗಾದರೂ ಸಹಾಯ ಮಾಡಬಹುದು. ನಾನು ಕ್ಯಾತಿಟರಿ ಟ್ಯೂನ್‌ನ್ನು ತುಂಬಾ ಕಡಿಮೆ ಬಳಸುತ್ತಿದ್ದೇನೆ. ಸುಮಾರು 50%ನಷ್ಟು ನಾನು ಗುಣಮುಖಳಾಗಿದ್ದೇನೆ. ಇದು ಎರಡು ವರ್ಷಗಳ ನಂತರ ನನ್ನ ಜೀವನವನ್ನು ಸುಲಭಗೊಳಿಸಿದೆ ಮತ್ತು ನಾನು ಈಗ ಚೆನ್ನಾಗಿ ಕೆಲಸ ಕೂಡ ಮಾಡುತ್ತಿದ್ದೇನೆ ಎಂದು ಎಲ್ಲೆ ಆಡಮ್ಸ್ ಹೇಳಿದ್ದಾರೆ.
Published On - 7:00 pm, Sat, 25 March 23