ಹೆಣ್ಣುಮಕ್ಕಳಿಗೆ ತಾಯಂದಿರ ಸ್ಥೂಲಕಾಯತೆ ಅನುವಂಶಿಕವಾಗಿ ಬರುತ್ತದೆ: ಅಧ್ಯಯನ

ಸ್ಥೂಲಕಾಯತೆ ಒಂದು ಸಾಮಾನ್ಯ, ಆದರೆ ಗಂಭೀರ ಕಾಯಿಲೆಯಾಗಿದ್ದು, ಅಮೇರಿಕಾದಲ್ಲಿ ಸುಮಾರು ಅರ್ಧದಷ್ಟು ವಯಸ್ಕರು ಮತ್ತು 20 ಪ್ರತಿಶತದಷ್ಟು ಮಕ್ಕಳನ್ನು ಈ ರೋಗ ಬಾಧಿಸುತ್ತದೆ. ಈ ಬೊಜ್ಜು ಹೊಂದಿರುವ ಜನರು ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಇತರ ಅನೇಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೊಂದುವ ಸಾಧ್ಯತೆ ಹೆಚ್ಚಿರುತ್ತದೆ.

ಹೆಣ್ಣುಮಕ್ಕಳಿಗೆ ತಾಯಂದಿರ ಸ್ಥೂಲಕಾಯತೆ ಅನುವಂಶಿಕವಾಗಿ ಬರುತ್ತದೆ: ಅಧ್ಯಯನ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 25, 2023 | 2:43 PM

ತಾಯಂದಿರು ಅವರ ಸ್ಥೂಲಕಾಯದ ಅಪಾಯವನ್ನು ತಮ್ಮ ಹೆಣ್ಣು ಮಕ್ಕಳೊಂದಿಗೆ ಹಂಚಿಕೊಳ್ಳಬಹುದೇ ಹೊರತು ಗಂಡು ಮಕ್ಕಳೊಂದಿಗೆ ಅಲ್ಲ ಎಂದು ಅಧ್ಯಯನ ಹೇಳುತ್ತದೆ. ಎಂಡೋಕ್ರೆನ್ ಸೊಸೈಟಿಯ ಜರ್ನಲ್ ಆಫ್ ಕ್ಲಿನಿಕಲ್ ಎಂಡೋಕ್ರೆನಾಲಜಿ ಮತ್ತು ಮೆಟಾಬಾಲಿಸಂನಲ್ಲಿ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ಬೊಜ್ಜು ಹೊಂದಿರುವ ಮಹಿಳೆಯರು ತಮಗೆ ಹುಟ್ಟುವ ಹೆಣ್ಣು ಮಕ್ಕಳೊಂದಿಗೆ ಈ ರೋಗದ ಅಪಾಯವನ್ನು ಹಂಚಿಕೊಳ್ಳಬಹುದು ಆದರೆ ಗಂಡು ಮಕ್ಕಳೊಂದಿಗೆ ಹಂಚಿಕೊಳ್ಳಬಾರದು ಎಂದು ಹೇಳಿದೆ.ಸ್ಥೂಲಕಾಯತೆ ಒಂದು ಸಾಮಾನ್ಯ, ಆದರೆ ಗಂಭೀರ ಕಾಯಿಲೆಯಾಗಿದ್ದು, ಅಮೇರಿಕಾದಲ್ಲಿ ಸುಮಾರು ಅರ್ಧದಷ್ಟು ವಯಸ್ಕರು ಮತ್ತು 20 ಪ್ರತಿಶತದಷ್ಟು ಮಕ್ಕಳನ್ನು ಈ ರೋಗ ಬಾಧಿಸುತ್ತದೆ. ಈ ಬೊಜ್ಜು ಹೊಂದಿರುವ ಜನರು ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಇತರ ಅನೇಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೊಂದುವ ಸಾಧ್ಯತೆ ಹೆಚ್ಚಿರುತ್ತದೆ.

ಈ ಸಂಶೋಧನೆಯು ಬೊಜ್ಜು ಹೊಂದಿರುವ ಅಥವಾ ಹೆಚ್ಚಿನ ಪ್ರಮಾಣದ ದೇಹದ ಕೊಬ್ಬನ್ನು ಹೊಂದಿರುವ ತಾಯಂದಿರು ತಮಗೆ ಜನಿಸಿದ ಹೆಣ್ಣು ಮಕ್ಕಳೊಂದಿಗೆ ದೇಹದ ಹೆಚ್ಚುವರಿ ಕೊಬ್ಬನ್ನು ಹಂಚಿಕೊಳ್ಳಬಹುದು ಎಂದು ಎಮ್‌ಆರ್‌ಸಿ ಲೈಫ್‌ಕೋರ್ಸ್ ಎಪಿಡೆಮಿಯಾಲಜಿ ಸೆಂಟರ್, ಸೌತಾಂಪ್ಟನ್ ವಿಶ್ವವಿದ್ಯಾನಿಲಯದ ರೆಬೆಕಾ ಜೆ. ಮೂನ್ ಹೇಳಿದರು.

ಸಂಶೋಧಕರು 240 ಮಕ್ಕಳು (6 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು) ಮತ್ತು ಅವರ ಪೋಷಕರಲ್ಲಿ ದೇಹದ ಕೊಬ್ಬು ಮತ್ತು ಸ್ನಾಯುಗಳನ್ನು ಅಳೆಯುತ್ತಾರೆ. ಬಾಡಿ ಮಾಸ್ ಇಂಡೆಕ್ಸ್ (BMI), ಅಧಿಕ ತೂಕ ಮತ್ತು ಸ್ಥೂಲಕಾಯತೆಗೆ ಸ್ಕಿನಿಂಗ್ ಸಾಧನವನ್ನು ಬಳಸಿ ಮಗುವಿನ ದೇಹದ ಕೊಬ್ಬು ಮತ್ತು ಸ್ನಾಯುವಿನ ಪ್ರಮಾಣವು ಆ ಮಗುವಿನ ಪೋಷಕರಿಗೆ ಸಂಬಂಧಿಸಿದೆ ಎಂಬುದನ್ನು ನಿರ್ಧರಿಸಲು ಈ ಡೇಟಾವನ್ನು ಬಳಸಿದ್ದಾರೆ.

ಇದನ್ನೂ ಓದಿ: Healthy Summer Food: ಬೇಸಿಗೆಯಲ್ಲಿ ರುಚಿಕರ ಹಾಗೂ ಆರೋಗ್ಯಕರ ಎಳನೀರು ಹಲ್ವಾ ತಯಾರಿಸಿ ರೆಸಿಪಿ ಇಲ್ಲಿದೆ

ಹೆಣ್ಣು ಮಕ್ಕಳು ತಮ್ಮ ತಾಯಂದಿರಿಗೆ ಸಮಾನವಾದ BMI ಮತ್ತು ಕೊಬ್ಬಿನ ದ್ರವ್ಯರಾಶಿಯನ್ನು ಹೊಂದಿದ್ದಾರೆ ಎಂದು ಅವರು ಕಂಡುಕೊಂಡಿದ್ದಾರೆ. ಸ್ಥೂಲಕಾಯತೆ ಹೊಂದಿರುವ ಅಥವಾ ಹೆಚ್ಚಿನ ಕೊಬ್ಬಿನ ದ್ರವ್ಯರಾಶಿಯನ್ನು ಹೊಂದಿರುವ ತಾಯಂದಿರಿಗೆ ಜನಿಸಿದ ಹೆಣ್ಣು ಮಗು ಸ್ಥೂಲಕಾಯತೆ ಅಥವಾ ಅಧಿಕ ತೂಕವನ್ನು ಹೊಂದುವ ಅಪಾಯವನ್ನು ಹೊಂದಿರುತ್ತಾರೆ ಎಂದು ಈ ಅಧ್ಯಯನದಲ್ಲಿ ಹೇಳಲಾಗಿದೆ.

Published On - 2:42 pm, Sat, 25 March 23

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ