Loneliness Health Issues: ಒಂಟಿತನದಿಂದ ಈ 5 ಗಂಭೀರ ಕಾಯಿಲೆ ಬರಬಹುದು

ನೀವು ಒಂಟಿಯಾಗಿದ್ದೀರಾ ಅಥವಾ ಒಂಟಿಯಾಗಿರಲು ಇಷ್ಟಪಡುತ್ತೀರಾ? ಜನರ ಜೊತೆ ಸಾಮಾಜಿಕವಾಗಿ ಸಾಕಷ್ಟು ಬೆರೆಯದಿರುವುದು ಅಥವಾ ಒಂಟಿತನವು ಈ ಮಾರಣಾಂತಿಕ ಕಾಯಿಲೆಯ ಅಪಾಯವನ್ನುಂಟುಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

Loneliness Health Issues: ಒಂಟಿತನದಿಂದ ಈ 5 ಗಂಭೀರ ಕಾಯಿಲೆ ಬರಬಹುದು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 23, 2023 | 2:45 PM

ಮಾನಸಿಕ ಆರೋಗ್ಯ ಹಾಗೂ ದೈಹಿಕ ಆರೋಗ್ಯ ಪರಸ್ಪರ ಸಂಬಂಧವನ್ನು ಹೊಂದಿವೆ ಎಂದು ಹೇಳುವಂತೆ ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯದಿರುವುದು ಅಥವಾ ಒಂಟಿಯಾಗಿರಲು ಬಯಸುವುದು ಹಲವಾರು ರೋಗಗಳನ್ನು ಪ್ರಚೋದಿಸಬಹುದು ಎಂದು ತಜ್ಞರು ಹೇಳುತ್ತಾರೆ. ಅಧ್ಯಯನಗಳ ಪ್ರಕಾರ ಒಂಟಿತನವು ಅಕಾಲಿಕ ಮರಣಕ್ಕೆ ಕಾರಣವಾಗಬಹುದು. ಇದು ಮಾತ್ರವಲ್ಲದೆ ಒಂಟಿತನವು ಹೃದ್ರೋಗ, ಖಿನ್ನತೆ, ಆತಂಕ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಮುಂತಾದ ಕಾಯಿಲೆಗಳಿಗೂ ಕಾರಣವಾಗಬಹುದು.ಒಂಟಿತನವು ಅನೇಕ ರೋಗಗಳ ಕಾರಣ ಮತ್ತು ಲಕ್ಷಣವಾಗಿರಬಹುದು. ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆಸ್ಪತ್ರೆಗಳಿಗೆ ಭೇಟಿ ನೀಡುವ ಅನೇಕ ರೋಗಿಗಳು ಮನೋವಿಕೃತತೆಯಿಂದ ಬಳಲುತ್ತಿದ್ದಾರೆ. ಇದರರ್ಥ ಅವರಿಗೆ ಯಾವುದೇ ದೈಹಿಕ ಸಮಸ್ಯೆ ಅಥವಾ ಹಾನಿ ಆಗಿಲ್ಲ. ಬದಲಾಗಿ ಅವರಿಗೆ ಹೆಚ್ಚು ಮಾನಸಿಕ ಹಾನಿಯಾಗಿರುತ್ತದೆ. ಸಾಮಾಜಿಕವಾಗಿ, ಭಾವನಾತ್ಮಕವಾಗಿ ಈ ಮುಂತಾದ ಕಾರಣಗಳಿಂದ ಒಂಟಿತನ ಉಂಟಾಗಬಹುದು” ಎಂದು ರೂಬಿ ಹಾಲ್ ಕ್ಲಿನಿಕ್‌ನ ಮನಶಾಸ್ತ್ರಜ್ಞ ಸಲಹೆಗಾರ ಡಾ. ರುಚಾ ಶ್ರೀಖಂಡೆ ಹೇಳುತ್ತಾರೆ.

ಆರ್ಥಿಕ ಸಮಸ್ಯೆಗಳು, ಪ್ರಿತಿಪಾತ್ರರ ಸಾವು ಅಥವಾ ಅವರಿಂದ ಬೇರ್ಪಡುವಿಕೆ, ಮಾನಸಿಕ ಆಘಾತ ಮುಂತಾಂದವುಗಳಿಂದ ಒಂಟಿತನ ಉಂಟಾಗುತ್ತದೆ ಎಂದು ಡಾ. ಶ್ರೀಖಂಡೆ ಹೇಳುತ್ತಾರೆ.

ಒಂಟಿತನದಿಂದಾಗಿ ಉಂಟಾಗಬಹುದದಾದ ಆರೋಗ್ಯ ಸಮಸ್ಯೆಗಳು:

ಡಿಸ್ಟೆಮಿಯಾ ಅಥವಾ ನಿರಂತರ ಖಿನ್ನತೆ: ಇದು ಒಂಟಿತನದಿಂದ ಉಂಟಾಗಬಹುದಾದ ಪ್ರಮುಖ ಅಸ್ವಸ್ಥತೆಗಳಲ್ಲಿ ಒಂದಾಗಿದೆ. ಇದರಿಂದ ಬಳಲುತ್ತಿರುವ ವ್ಯಕ್ತಿಗೆ ದೈಹಿಕ ಕಾಯಿಲೆ ಇಲ್ಲದಿದ್ದರೂ ಅವನು ಯಾವಾಗಲೂ ಯಾರೋಂದಿಗೂ ಬೆರೆಯದೆ ಒಂಟಿಯಾಗಿರಲು ಬಯಸುತ್ತಾನೆ.

ಸಾಮಾಜಿಕ ಆತಂಕ ಅಥವಾ ಆತಂಕದ ಅಸ್ವಸ್ಥತೆ: ಸಾಮಾಜಿಕ ಆತಂಕದ ಅಸ್ವಸ್ಥತೆ ಹೊಂದಿರುವ ಜನರು ಬೇರೆ ವ್ಯಕ್ತಿಗಳ ಜೊತೆ ಮಾತನಾಡಲು ಭಯಪಡುತ್ತಾರೆ. ಈ ರೋಗಲಕ್ಷಣ ಹೊಂದಿರುವ ಜನರು ಸಾಮಾಜಿಕವಾಗಿ ಮಾತನಾಡಲು ಮುಜುಗರ ಪಡುತ್ತಾರೆ ಅಥವಾ ಭಯಪಡುತ್ತಾರೆ.

ಇದನ್ನೂ ಓದಿ:Health Tips: ನವಜಾತ ಶಿಶುಗಳ ಆರೈಕೆಗೆ ಸಂಬಂಧಿಸಿದ ಸತ್ಯ, ಮಿಥ್ಯ ಅಂಶಗಳಾವುವು?

ದೀರ್ಘಕಾಲದ ರೋಗಗಳು: ಅಧಿಕ ರಕ್ತದೊತ್ತಡ, ಹೃದಯಾಘಾತ, ಸ್ಥೂಲಕಾಯತೆ ಮತ್ತು ಇತರ ದೀರ್ಘಕಾಲದ ದೈಹಿಕ ಸಮಸ್ಯೆಗಳು ಒಂಟಿತನದಿಂದ ಉಂಟಾಗಬಹುದು.

ಕ್ಯಾನ್ಸರ್: ಒಂಟಿತನದ ಭಾವನೆಗಳು ಒತ್ತಡದಿಂದಾಗಿ ಹಾರ್ಮೋನ್‌ನಲ್ಲಿ ಬದಲಾವಣೆಗಳನ್ನು ಬಿಡುಗಡೆ ಮಾಡುವುದನ್ನು ಪ್ರಚೋದಿಸುತ್ತದೆ. ಮತ್ತು ಇದು ಕ್ಯಾನ್ಸರ್ ಅಪಾಯವನ್ನು ಉಂಟುಮಾಡುತ್ತದೆ.

ಮಧುಮೇಹ: ಟೈಪ್ 2 ಮಧುಮೇಹದ ಅಪಾಯವು ಅಧಿಕ ತೂಕ ಹೊಂದಿರುವ ಜನರಲ್ಲಿ ಅಥವಾ ಕಳಪೆಮಟ್ಟದ ಜೀವನ ಶೈಲಿಯನ್ನು ಹೊಂದಿರುವ ಜನರಲ್ಲಿ ಹೆಚ್ಚಾಗಿ ಇರುತ್ತದೆ. ಒತ್ತಡ ಮತ್ತು ಒಂಟಿತನವು ಈ ಮಧುಮೇಹದ ಕಾಯಿಲೆಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ.

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ