
ನವದೆಹಲಿ, ಡಿಸೆಂಬರ್ 10: ಪಾಕಿಸ್ತಾನದ ಲಾಹೋರ್‌ನಲ್ಲಿ ಸೆಷನ್ ಕೋರ್ಟ್ ನ್ಯಾಯಮೂರ್ತಿಯವರ ಕೊಠಡಿಯಿಂದ 2 ಸೇಬು ಹಣ್ಣುಗಳು ಮತ್ತು ಹ್ಯಾಂಡ್ ವಾಶ್ ಕಳ್ಳತನವಾಗಿದೆ. ಇದಾದ ನಂತರ ಕೇಸ್ ದಾಖಲಿಸಲಾಗಿದೆ. ಡಿಸೆಂಬರ್ 5ರಂದು ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಮೂರ್ತಿ ನೂರ್ ಮುಹಮ್ಮದ್ ಬಸ್ಮಲ್ ಅವರ ಕೊಠಡಿಯಲ್ಲಿ ಈ ಘಟನೆ ಸಂಭವಿಸಿದೆ. ಇಸ್ಲಾಂಪುರ ಪೊಲೀಸ್ ಠಾಣೆಯಲ್ಲಿ ಸಲ್ಲಿಸಲಾದ ಎಫ್ಐಆರ್ನಲ್ಲಿ ಕದ್ದ ವಸ್ತುಗಳ ಮೌಲ್ಯ PKR 1,000 ಆಗಿದೆ ಎಂದು ಸೂಚಿಸಲಾಗಿದೆ.
ನ್ಯಾಯಾಧೀಶರ ಸೂಚನೆಯಡಿಯಲ್ಲಿ ದೂರು ದಾಖಲಿಸಲಾಗಿದೆ. ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 380ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ತಪ್ಪಿತಸ್ಥರೆಂದು ಸಾಬೀತಾದರೆ, ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು.
ಇದನ್ನೂ ಓದಿ: Video: ಪಾಕ್ ಮಹಿಳಾ ರಿಪೋರ್ಟರ್ಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ವಕ್ತಾರ
ಈ ವಿಚಿತ್ರ ಎಫ್‌ಐಆರ್ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದ್ದು, ಈ ಘಟನೆ ವೈರಲ್ ಆಗಿದೆ. ಕೆಲವರು ಈ ಘಟನೆಯನ್ನು ಅಪಹಾಸ್ಯ ಮಾಡಿ ಎಫ್‌ಐಆರ್ ಅನ್ನು ಪ್ರಶ್ನಿಸಿದ್ದಾರೆ. ಕದ್ದ ವಸ್ತುಗಳನ್ನು ಮರುಪಡೆಯಲು ಜಂಟಿ ತನಿಖಾ ತಂಡ (ಜೆಐಟಿ) ರಚಿಸಬೇಕು ಎಂದು ಕೆಲವು ನೆಟ್ಟಿಗರು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಸಾರ್ವಜನಿಕರಿಗೆ ಭಾರೀ ನಷ್ಟವನ್ನುಂಟುಮಾಡುವ ಹೈ ಪ್ರೊಫೈಲ್ ಪ್ರಕರಣಗಳಲ್ಲಿನ ವಿಳಂಬವನ್ನು ಎತ್ತಿ ತೋರಿಸಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ